ಎಲ್ಲರಿಗೂ ನಮಸ್ಕಾರ, ರೇಷನ್ ಕಾರ್ಡ್ ಅನ್ನು ಬಡತನ ರೇಖೆಗಿಂತ ಕೆಳಗಿರುವವರಿಗೆ ಆಹಾರ ಇಲಾಖೆಯು BPL ಕಾರ್ಡ್ ಅನ್ನು ನೀಡುತ್ತದೆ. ಆರ್ಥಿಕವಾಗಿ ಸಬಲರಾಗಿದ್ದರು ಸಹ ಸುಳ್ಳು ದಾಖಲೆಯನ್ನು ನೀಡಿ ಪಡಿತರ ಚೀಟಿಯನ್ನು (Illegal BPL Ration Cards) ಪಡೆದುಕೊಂಡಿದ್ದಾರೆ. ಅಂತವರನ್ನು ಪತ್ತೆ ಮಾಡಲು ಆಹಾರ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಕರ್ನಾಟಕದಲ್ಲಿ 10,97,621 ಅಕ್ರಮ BPL ಕಾರ್ಡ್ ಗಳು ಪತ್ತೆಯಾಗಿದ್ದು, ಈ ಪೈಕಿ 98,431 ಜನ ಆದಾಯ ತೆರಿಗೆ ಪಾವತಿದಾರರು, 10,04,716 ಜನರು 1.20 ಸಾವಿರ ರೂಪಾಯಿಗೂ ಹೆಚ್ಚು ಆದಾಯ ಹೊಂದಿದವರಾಗಿದ್ದಾರೆ, ಇನ್ನು 4,036 ಜನ ಸರ್ಕಾರಿ ನೌಕರರಿರು ಇದ್ದಾರೆ.
Illegal BPL Ration Cards:
ಕುಟುಂಬ ಸದಸ್ಯರು ಸರ್ಕಾರಿ ಅಥವಾ ಅರೆ ಸರ್ಕಾರಿ ನೌಕರರು ಇದ್ದಲ್ಲಿ, ಆದಾಯ ತೆರಿಗೆ ಪಾವತಿದಾರರಾಗಿದ್ದಲ್ಲಿ, 4 ಚಕ್ರದ ಬಿಳಿ ಬೋರ್ಡ್ ವಾಹನ ಹೊಂದಿದವರು, ಆದಾಯ ತೆರಿಗೆ ಪಾವತಿಸುವ ಕುಟುಂಬದವರು, ಹಾಗೂ ಒಂದೇ ಮನೆಯಲ್ಲಿಯೇ ವಾಸವಿದ್ದರು ಒಂದಕ್ಕಿಂತಲೂ ಹೆಚ್ಚು ರೇಷನ್ ಕಾರ್ಡ್ ಹೊಂದಿದ್ದರೆ, 7.5 ಎಕರೆ ಗಿಂತ ಹೆಚ್ಚಿನ ಡಿ ವರ್ಗದ ಅಥವಾ ತತ್ಸಮಾನ ಭೂಮಿಯನ್ನು ಹೊಂದಿದ್ದರೆ, ವಾರ್ಷಿಕ 1.20 ಲಕ್ಷ ರೂ.ಗಿಂತ ಹೆಚ್ಚು ಆದಾಯ ಹೊಂದಿದವರು, ನಗರ ಪ್ರದೇಶದಲ್ಲಿ 1,000 ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣದ ಪಕ್ಕಾ ಮನೆ ಹೊಂದಿರುವ ಕುಟುಂಬ BPL ಕಾರ್ಡ್ ಪಡೆಯಲು ಅನರ್ಹರಾಗಿರುತ್ತಾರೆ.
ಆದಾಯ ತೆರಿಗೆ ಪಾವತಿಸುವವರು, ಸರ್ಕಾರಿ ನೌಕರರು ಸೇರಿದಂತೆ ಮಾನದಂಡಗಳನ್ನು ಉಲ್ಲಂಘಿಸಿ ಸುಳ್ಳು ದಾಖಲೆಯನ್ನು ನೀಡಿ ಅಕ್ರಮ BPL ಕಾರ್ಡ್ (Illegal BPL Ration Cards) ಗಳನ್ನು ಪಡೆದುಕೊಂಡಿದ್ದಾರೆ. ಅಂತವರನ್ನು ಪತ್ತೆ ಮಾಡಿ ದಂಡ ವಿಧಿಸಲು ಸರಕಾರ ತೀರ್ಮಾನಿಸಿದೆ.
ಅಕ್ರಮವಾಗಿ ಬಿಪಿಎಲ್ ರೇಷನ್ ಕಾರ್ಡ್ ಪಡದುಕೊಂಡ ದಿನಾಂಕದಿಂದ ಪಡಿತರ ಪಡೆದುಕೊಂಡಿದರೆ kg ಗೆ 34 ರೂ. ಅಂತೆ ದಂಡ ವಿದಿಸಲು ಇಲಾಖೆ ನಿರ್ದೇಶನ ನೀಡಿದೆ. ಬೆಲೆ ಬಾಳುವ ಐಶಾರಾಮಿ ಕಾರು ಹೊಂದಿದ್ದರು ಕೂಡ ಸುಳ್ಳು ದಾಖಲೆ ನೀಡಿ ಪಡಿತರ ಚೀಟಿಯನ್ನು ಹೊಂದಿರುವುದು ಪತ್ತೆಯಾಗಿದೆ.
ಇತರೆ ಮಾಹಿತಿಗಳನ್ನು ಓದಿ: