ಎಲ್ಲರಿಗೂ ನಮಸ್ಕಾರ, ನೀವು ಕೂಡ ಸರ್ಕಾರದಿಂದ ನೀಡಲಾಗುವ ಸಬ್ಸಿಡಿ ಯೋಜನೆಗಳಿಗೆ (Govt Subsidy Schemes) ಅರ್ಜಿ ಸಲ್ಲಿಸಬೇಕಾ..? ಏಷ್ಟು ಸಹಾಯಧನ ಸಿಗುತ್ತದೆ, ಎಂಬೆಲ್ಲ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.
2024-2025 ನೇ ಸಾಲಿನಲ್ಲಿ ಆರ್ಥಿಕ ಅಭಿವೃದ್ಧಿಗಾಗಿ ಈ ಕೆಳಕಂಡ ಕಲ್ಯಾಣ ಯೋಜನೆಗಳಿಗಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಗಳಿಗೆ ಅರ್ಜಿ ಆಹ್ವಾನ:
- ಸ್ವಾವಲಂಬಿ ಸಾರಥಿ
- ಗಂಗಾ ಕಲ್ಯಾಣ ಯೋಜನೆ
- ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ
- ಸ್ವಯಂ ಉದ್ಯೋಗ ನೇರಸಾಲ ಯೋಜನೆ
- ಮೈಕ್ರೋಕ್ರೆಡಿಟ್ (ಪ್ರೇರಣಾ) ಯೋಜನೆ
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವತಿಯಿಂದ ಈ ಕೇಳಗೆ ನೀಡಲಾಗಿರುವ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದು.
ಸ್ವಾವಲಂಬಿ ಸಾರಥಿ:
ಸ್ವಾವಲಂಬಿ ಸಾರಥಿ ಯೋಜನೆಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಸ್ವಯಂ ಉದ್ಯೋಗ ಆರಂಭಿಸಲು ಸರಕು ವಾಹನ / ಟ್ಯಾಕ್ಸಿ (ಹಳದಿ ಬೋರ್ಡ್) ವಾಹನ ಖರೀದಿಸುವ ಉದ್ದೇಶಕ್ಕೆ. ಘಟಕ ವೆಚ್ಚದ ಶೇ.75 ರಷ್ಟು ಸಹಾಯಧನ ಅಥವಾ ಗರಿಷ್ಠ ರೂ. 4.00 ಲಕ್ಷ ಧನಸಹಾಯ (Govt Subsidy Schemes) ಸರ್ಕಾರ ನೀಡುತ್ತದೆ.
ಗಂಗಾ ಕಲ್ಯಾಣ ಯೋಜನೆ:
ಗಂಗಾ ಕಲ್ಯಾಣ ಯೋಜನೆಯ ಮೂಲಕ 1.20 ಎಕರೆ ಯಿಂದ 5 ಎಕರೆ ಜಮೀನು ಹೊಂದಿರುವ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಕೊಳವೆಬಾವಿ ಕೊರೆದು ಪಂಪ್ಸೆಟ್ ಅಳವಡಿಸಿ, ವಿದ್ಯುದ್ದೀಕರಣಗೊಳಿಸಿ ನೀರಾವರಿ ಸೌಲಭ್ಯ ಒದಗಿಸಲಾಗುತ್ತದೆ. ಘಟಕ ವೆಚ್ಚ: 4.75 ಲಕ್ಷ / 3.75 ಲಕ್ಷ ಇದರಲ್ಲಿ 50,000 ರೂ. ಸಾಲ ಸೇರಿರುತ್ತದೆ.
ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ:
ವ್ಯಾಪಾರ ಮತ್ತು ಇತರೆ ಉದ್ಯಮಗಳಿಗೆ ಘಟಕ ವೆಚ್ಚದ ಶೇ.70ರಷ್ಟು ಸಹಾಯಧನ ಅಥವಾ ಗರಿಷ್ಠ 2 ಲಕ್ಷ ರೂ. ಸಹಾಯಧನ ನೀಡಲಾಗುತ್ತದೆ. ಉಳಿದ ಮೊತ್ತ ಬ್ಯಾಂಕ್ ಸಾಲವಾಗಿರುತ್ತದೆ.
ಸ್ವಯಂ ಉದ್ಯೋಗ ನೇರಸಾಲ ಯೋಜನೆ:
ಸ್ವಯಂ ಉದ್ಯೋಗ ಆರಂಭಿಸಲು ಘಟಕ ವೆಚ್ಚ: 1 ಲಕ್ಷ ರೂ. ಸಹಾಯಧನ: 50,000 ರೂ. ಹಾಗೂ ಸಾಲ 50,000 ರೂ. (ಶೇಕಡ 4ರಷ್ಟು ಬಡ್ಡಿದರ) ಸಾಲ ಮಂಜೂರು ಮಾಡಲಾಗುತ್ತದೆ
ಮೈಕ್ರೋಕ್ರೆಡಿಟ್ (ಪ್ರೇರಣಾ) ಯೋಜನೆ:
ಮಹಿಳಾ ಸ್ವಸಹಾಯ ಸಂಘಗಳಿಗೆ (ಕನಿಷ್ಟ 10 ಸದಸ್ಯರು) ಕಿರು ಅರ್ಥಿಕ ಚಟುವಟಿಕೆಗಳಿಗೆ ಸಾಲ ಮತ್ತು ಸಹಾಯಧನ ಸೌಲಭ್ಯ ನೀಡಲಾಗುವುದು. ಘಟಕ ವೆಚ್ಚ: ರೂ.2.50 ಲಕ್ಷ ಸಹಾಯಧನ: 1.50 ಲಕ್ಷ, ಸಾಲ 1ಲಕ್ಷ ರೂ. (ಶೇಕಡ 4ರಷ್ಟು ಬಡ್ಡಿದರ.
ಪ್ರಮುಖ ದಿನಾಂಕಗಳು:
ಅರ್ಜಿಸಲ್ಲಿಕೆ ಪ್ರಾರಂಭ ದಿನಾಂಕ: 23-10-2024
ಅರ್ಜಿಸಲ್ಲಿಕೆ ಕೊನೆಯ ದಿನಾಂಕ: 23-11-2024
Govt Subsidy Schemes Online Application Link:
ಆನ್ಲೈನ್ ಅರ್ಜಿ ಲಿಂಕ್: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್: sevasindhu.karnataka.gov.in, sevasindhuservices.karnataka.gov.in
ಅರ್ಜಿ ಸಲ್ಲಿಸುವುದು ಹೇಗೆ..?
sevasindhu.karnataka.gov.in ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರದ ಗ್ರಾಮ್ ಒನ್, ಕರ್ನಾಟಕ ಒನ್ ಕೇಂದ್ರ ಅಥವಾ CSC ಕೇಂದ್ರಗಳಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಇತರೆ ಮಾಹಿತಿಗಳನ್ನು ಓದಿ: