ಎಲ್ಲರಿಗೂ ನಮಸ್ಕಾರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿಯನ್ನು (Free Hostel Application) ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
2024-25ನೇ ಸಾಲಿನ ವೃತ್ತಿಪರ ಪದವಿ ಕೊರ್ಸ್’ಗಳಾದ BE, B.tech, ಹಾಗೂ ಇತರೆ ಸ್ನಾತಕೊತ್ತರ ಪದವಿ ಕೋರ್ಸ್ ನಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ವೃತ್ತಿಪರ ಪದವಿ ಕೊರ್ಸ್’ಗಳಿಗೆ ಹೊಸದಾಗಿ ಪ್ರವೇಶ ಬಯಸುವ ಪ್ರವರ್ಗ-1, 2A, 2B, 3A, 3B ಹಾಗೂ SC/ ST ಕೆಟಗರಿಗಳಿಗೆ ಸೇರಿದ ವಿದ್ಯಾರ್ಥಿಗಳಿಂದ ಆನ್’ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಥಿಯ ಪೋಷಕರ ಆದಾಯದ ವಿವರ:
ಪ್ರವರ್ಗ-1 ಹಾಗೂ SC, ST ವಿದ್ಯಾರ್ಥಿಗಳಾಗಿದ್ದರೆ ಅವರ ಕುಟುಂಬದ ಆದಾಯವು 2.50 ಲಕ್ಷ ರೂ. ಮೀರಿರಬಾರದು.
ಪ್ರವರ್ಗ-2A, 2B, 3A, 3B ಹಾಗೂ ಇತರೆ ವರ್ಗಗಳ ವಿದ್ಯಾರ್ಥಿಗಳ ಪೋಷಕರ ಕುಟುಂಬದ ಆದಾಯವು 1 ಲಕ್ಷ ರೂ. ಮೀರಿರಬಾರದು.
Free Hostel Application ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್
- ಪೋಟೋ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ವೃತ್ತಿಪರ ಪದವಿ / ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದ ದಾಖಲೆ / ರಶೀದಿ.
- ವಾಸಸ್ಥಳ ದೃಢೀಕರಣ ಪ್ರಮಾಣ ಪತ್ರ
ಮಾಹಿತಿಗೆ ಸಹಾಯವಾಣಿ ಸಂಖ್ಯೆ /ದೂರವಾಣಿ ಸಂಖ್ಯೆ: 80507 70004 ಅಥವಾ 080- 2286 7628 ಸಂಪರ್ಕಿಸಬಹುದು.
ಅರ್ಜಿ ಸಲ್ಲಿಕೆ ದಿನಾಂಕ:
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 30-10-2024
Free Hostel Online Application Link:
ಆನ್‌ಲೈನ್ ಅರ್ಜಿ ಲಿಂಕ್: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್: bcwd.karnataka.gov.in, shp.karnataka.gov.in/bcwd
ಇತರೆ ಮಾಹಿತಿಗಳನ್ನು ಓದಿ: