ಎಲ್ಲರಿಗೂ ನಮಸ್ಕಾರ, ರಾಜ್ಯ ಸರ್ಕಾರದಿಂದ ಗೃಹಲಕ್ಷ್ಮೀ ಫಲಾನುಭವಿಗಳಿಗೆ ಗುಡ್ ನ್ಯೂಸ್, ಗೃಹಲಕ್ಷ್ಮೀ ಯೋಜನೆಯ 13 ನೇ ಕಂತಿನ 2,000 ರೂ. ಜಮಾ (Gruhalakshmi Scheme 13th Installment) ಆಗಿದೆ. ನಿಮ್ಮ ಖಾತೆಗೂ ಬಂದಿದೆಯಾ ಅಂತ ಚೆಕ್ ಮಾಡಿಕೊಳ್ಳಬಹುದು.
ಗೃಹಲಕ್ಷ್ಮೀ ಯೋಜನೆಯು ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯ ಮೂಲಕ ಮಹಿಳೆಯರಿಗೆ ಪ್ರತಿ ತಿಂಗಳು 2 ರೂಪಾಯಿಗಳನ್ನು ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ.
Gruhalakshmi Scheme 13th Installment Amount:
ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಈಗಾಗಲೇ 12 ಕಂತುಗಳ 24,000 ರೂ. ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಆಗಿದೆ, ಹಾಗೆಯೇ ಇಂದು (17-10-2024) 13 ನೇ ಕಂತಿನ 2,000 ರೂ. ಹಣವನ್ನು ಅರ್ಹ ಫಲಾನುಭವಿಗಳ ಖಾತೆ ಗೆ ಜಮಾ ಮಾಡಲಾಗಿದೆ. ನಿಮ್ಮ ಖಾತೆಗೂ ಹಣ ಬಂತಾ ಎಂದು DBT Status ಮೂಲಕ ಚೆಕ್ ಮಾಡಿಕೊಳ್ಳಬಹುದಾಗಿದೆ.
ಇದೇ ತಿಂಗಳು 12 ಮತ್ತು 13 ನೇ ಕಂತುಗಳ 4,000 ರೂ. ಹಣವು ಅರ್ಹ ಫಲಾನುಭವಿಗಳ ಖಾತೆಗೆ ಸಂದಾಯವಾಗಿದೆ. ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದ ಮನೆ ಯಜಮಾನಿ ಮಹಿಳೆಯರಿಗೆ ಇದುವರೆಗೂ 13 ಕಂತುಗಳ 26,000 ರೂಪಾಯಿಗಳು ನೇರವಾಗಿ ಅವರ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಿದೆ.
ಗೃಹಲಕ್ಷ್ಮೀ ಯೋಜನೆಯಿಂದ ಬಂದಿರುವ ಹಣದಿಂದ ಮಹಿಳೆಯರಿಗೆ ಅನುಕೂಲವಾಗಿದೆ. ಈ ಯೋಜನೆಯಿಂದ ಬಂದಿರುವ ಹಣದಿಂದ ಕೆಲವರು ತಮ್ಮ ಅಗತ್ಯ ವಸ್ತುಗಳನ್ನು ಖರೀದಿ ಮಾಡಿದ್ದರೆ. ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಗ್ರಂಥಾಲಯ ಸ್ಥಾಪಿಸಲು ಸಹಾಯಮಾಡಿದ್ದಾರೆ. ಹೀಗೆ ಹಲವಾರು ರೀತಿಯಲ್ಲಿ ಗೃಹಲಕ್ಷ್ಮೀ ಯೋಜನೆಯ ಹಣವು ಜನರಿಗೆ ಉಪಯೋಗವಾಗುತ್ತಿದೆ.
ಇಂದು (17-10-2024) ಮಧ್ಯಾಹ್ನ 1 ಗಂಟೆಗೆ 13 ನೇ ಕಂತಿನ 2,000 ರೂ. ಹಣ ಜಮಾ ಆಗಿದೆ. ಈ ಕೇಳಗೆ ಸ್ಕ್ರೀನ್‌ಶಾಟ್ ಲಗತ್ತಿಸಲಾಗಿದೆ ಗಮನಿಸಿ.
ನಿಮ್ಮ ಖಾತೆಗೆ ಗೃಹಲಕ್ಷ್ಮೀ ಯೋಜನೆಯ 2000 ರೂ. ಹಣ ಜಮಾ ಎಂಬುದನ್ನು ತಿಳಿಯಲು Gruhalakshmi DBT Status ಚೆಕ್ ಮಾಡಿ.
ಇತರೆ ಮಾಹಿತಿಗಳನ್ನು ಓದಿ: