ಎಲ್ಲರಿಗೂ ನಮಸ್ಕಾರ, ನಿಮ್ಮ ರೇಷನ್ ಕಾರ್ಡ್‌ಗೆ ಆಧಾರ ಲಿಂಕ್ ಆಗಿದೇಯಾ? Ration Card e-KYC ಮಾಡಿಸಿ ಇಲ್ಲವಾದಲ್ಲಿ ನಿಮ್ಮ ಕಾರ್ಡ್ ರದ್ದಾಗುವ ಸಾಧ್ಯತೆ ಇದೆ. e-KYC ಆಗಿದೇಯಾ ಅಥವಾ ಇಲ್ಲ ಎಂಬುದನ್ನು ತಿಳಿಯಬೇಕಾ..? ಹಾಗಿದ್ದರೇ ಈ ಲೇಖನ ನಿಮಗಾಗಿ.
ರೇಷನ್ ಕಾರ್ಡ್ ಹೊಂದಿರುವ ಫಲಾನುಭವಿಗಳು ಸರ್ಕಾರದ ಹಲವಾರು ಯೋಜನೆಗಳ ಲಾಭ ಪಡೆದುಕೊಳ್ಳಬಹುದು. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಾದ ಅನ್ನಭಾಗ್ಯ ಹಾಗೂ, ಗೃಹಲಕ್ಷ್ಮೀ ಯೋಜನೆಯ ಲಾಭ ಪಡೆದುಕೊಳ್ಳಬೇಕಾದರೆ ರೇಷನ್ ಕಾರ್ಡ್ ಬೇಕಾಗುತ್ತದೆ.
ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳಿಗೆ ಪಡಿತರ ಚೀಟಿಯನ್ನು ಸರ್ಕಾರ ನೀಡುತ್ತದೆ. ಆದರೆ ಆರ್ಥಿಕವಾಗಿ ಸಬಲರಾಗಿದ್ದರು ಕೂಡ BPL ಕಾರ್ಡ್ ಗಳನ್ನು ಹೊಂದಿದ್ದಾರೆ ಅಂತವರ ಕಾರ್ಡ್ ಗಳನ್ನು ಸರ್ಕಾರ ರದ್ದು ಪಡಿಸುತ್ತಿದೆ. ಸುಳ್ಳು ಮಾಹಿತಿ ನೀಡಿ ಒಂದಕ್ಕಿಂತ ಹೆಚ್ಚು ಬಿಪಿಎಲ್ ಕಾರ್ಡ್ ಗಳನ್ನು ಹೊಂದಿದ್ದರೆ, ಸರ್ಕಾರಿ ನೌಕರಾಗಿ BPL ಕಾರ್ಡ್ ಗಳನ್ನು ಹೊಂದಿದ್ದರೆ ಅಂತಹವರ ಕಾರ್ಡ್ ಅನ್ನು ರದ್ದು ಪಡಿಸುವ ಕೆಲಸಗಳನ್ನು ಸರ್ಕಾರ ಮಾಡುತ್ತಿದೆ.
ಯಾರು ಹಲವು ವರ್ಷಗಳಿಂದ ನಿಮ್ಮ ಬಿಪಿಎಲ್ ಕಾರ್ಡ್ ಗೆ ಇದುವರೆಗೂ Ration Card e-KYC ಮಾಡಿಸಿಕೊಂಡಿರುವುದಿಲ್ಲ ಅಂತಹವರು ಇ-ಕೆವೈಸಿ (ಆಧಾರ್ ಆಧರಿತ ಹೆಬ್ಬೆಟ್ಟಿನ ದೃಢೀಕರಣ) ಮಾಡಿಸಿಕೊಳ್ಳಿ. ನಿಗದಿ ಪಡಿಸಿರುವ ದಿನಾಂಕದೊಳಗಾಗಿ ಯಾರು ಇ-ಕೆವೈಸಿ ಮಾಡಿಸುವುದಿಲ್ಲ ಅಂತಹವರ ಹೆಸರನ್ನು ಪಡಿತರ ಚೀಟಿಯಿಂದ ತೆಗೆದು ಹಾಕಲು ಕ್ರಮವಹಿಸಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.
Karnataka Ration Card e-KYC Last Date:
ರೇಷನ್ ಕಾರ್ಡ್ ನಲ್ಲಿರು ಎಲ್ಲಾ ಸದಸ್ಯರ e-KYC ಮಾಡಿಸುವುದು ಕಡ್ಡಾಯವಾಗಿದೆ. ಆಗಸ್ಟ್ 31 ರೊಳಗಾಗಿ ಇ ಕೆವೈಸಿ ಮಾಡಿಸದಿದ್ದರೆ ಅಂತವರ ಹೆಸರನ್ನು ರೇಷನ್ ಕಾರ್ಡ್ ನಿಂದ ತೆಗೆದು ಹಾಕಲಾಗುತ್ತದೆ. ಆಧಾರ್ ಆಧಾರಿತ ಹೆಬ್ಬೆಟ್ಟಿನ ದೃಢೀಕರಣ ಮಾಡಿಸುವುದು ಕೇಂದ್ರ ಸರಕಾರದ ಮಾರ್ಗಸೂಚಿಯನ್ವಯ ಕಡ್ಡಾಯವಾಗಿದೆ. ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಹೊಗಿ ಇ-ಕೆವೈಸಿ ಮಾಡಿಸಿಕೊಳ್ಳಿ.
ಸರಕಾರದ ಮಾನದಂಡಗಳನ್ವಯ ಒಂದೇ ಕುಟುಂಬದಲ್ಲಿ ಒಂದ ಕ್ಕಿಂತ ಹೆಚ್ಚು ರೇಷನ್ ಕಾರ್ಡ್ ಹೊಂದಿರುವುದು ಮತ್ತು ಅನರ್ಹರು ಪಡಿತರ ಚೀಟಿ ಪಡೆದಿರುವುದು ಕಾನೂನಿಗೆ ವಿರುದ್ಧವಾಗಿರುತ್ತದೆ. ಯಾರು ಆರ್ಥಿಕವಾಗಿ ಸಬಲರಾಗಿದ್ದರು ಸುಳ್ಳು ಮಾಹಿತಿಯನ್ನು ನೀಡಿ ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದರೆ ಅಂತವರು ಕೂಡಲೇ ತಾಲೂಕು ಕಚೇರಿ/ಆಹಾರ ನಿರೀಕ್ಷಕರನ್ನು ಸಂಪರ್ಕಿಸಿ ನಿಮ್ಮ ರೇಷನ್ ಕಾರ್ಡ್ ಅನ್ನು ಹಿಂದಿರುಗಿಸಲು ತಿಳಿಸಿದೆ.
ನಿಮ್ಮ ರೇಷನ್ ಕಾರ್ಡ್ ನಲ್ಲಿರುವ ಎಲ್ಲಾ ಸದಸ್ಯರ Ration Card e-KYC ಆಗಿದೆಯಾ ಎಂದು ಚೆಕ್ ಮಾಡಿ. ಕೆವೈಸಿ ಆಗದಿದ್ದರೆ ಕೂಡಲೆ ಇ-ಕೆವೈಸಿ ಮಾಡಿಸಿಕೊಳ್ಳಿ. ಕೆವೈಸಿ ಮಾಡಿಸದ ಸದಸ್ಯರನ್ನು ಪಡಿತರ ಚೀಟಿಯಿಂದ ಕೈಬಿಡಲಾಗುವುದು ಎಂದು ಇಲಾಖೆಯಿಂದ ಸೂಚಿಸಲಾಗಿದೆ.
ಇತರೆ ಮಾಹಿತಿಗಳನ್ನು ಓದಿ:
ನಿಮ್ಮ ರೇಷನ್ ಕಾರ್ಡ್‌ಗೆ ಆಧಾರ ಲಿಂಕ್ ಆಗಿದೇಯಾ? Status Check ಮಾಡಿ