Blue Aadhaar Card 2024: ನೀಲಿ ಆಧಾರ್ ಕಾರ್ಡ್ ಎಂದರೇನು..? ಏಕೆ ಬೇಕು..? ಇಲ್ಲಿದೆ ಮಾಹಿತಿ

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ಆಧಾರ್ ಕಾರ್ಡ್ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಬ್ಲೂ ಆಧಾರ್ ಕಾರ್ಡ್ ಬಗ್ಗೆ ನಿಮಗೆ ತಿಳಿದಿದೆಯೇ..? Blue Aadhaar Card ಅನ್ನು ಯಾರಿಗೆ ನೀಡುತ್ತಾರೆ ಎಂದು ತಿಳಿದುಕೊಳ್ಳಬೇಕೆ..? ಹಾಗಿದ್ದರೆ ಚಿಂತೆ ಬಿಡಿ ಈ ಲೇಖನ ನಿಮಗಾಗಿ. ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ ಓದಿರಿ.

ಆಧಾರ್ ಎಂಬುದು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರವು ಪ್ರತಿ ಭಾರತೀಯ ಪ್ರಜೆಗಳಿಗೆ ನೀಡುವ ಗುರುತಿನ ಕಾರ್ಡ್ ಆಗಿದೆ. ಇದರಲ್ಲಿ 12 ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆಯನ್ನು ನಮೂದಿಸಿರುತ್ತಾರೆ. ಈ ಸಂಖ್ಯೆಯನ್ನು ಜನಸಂಖ್ಯಾ ಮತ್ತು ಬಯೋಮೆಟ್ರಿಕ್ ದತ್ತಾಂಶ ಎರಡಕ್ಕೂ ಲಿಂಕ್ ಮಾಡಲಾಗಿದೆ, ಇದು ಗುರುತು ಮತ್ತು ವಿಳಾಸಕ್ಕಾಗಿ ಅರ್ಹ ದಾಖಲೆಪತ್ರವಾಗಿ ಕಾರ್ಯನಿರ್ವಹಿಸುತ್ತದೆ.

Blue Aadhaar Card ಎಂದರೇನು..?

ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ “ಬಾಲ್ ಆಧಾರ್ ಅಥವಾ ಬ್ಲೂ ಆಧಾರ್ ಕಾರ್ಡ್” ಅನ್ನು UIDAI ನೀಡುತ್ತದೆ. ಈ ಆಧಾರ್ ಕಾರ್ಡ್ ನೀಲಿ ಬಣ್ಣದಲ್ಲಿರುತ್ತದೆ. ನಿಮ್ಮ ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಸಬೇಕಾದರೆ ನಿಮ್ಮ ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ ಅಧಿಕಾರಿಗಳು ನೀಡಿದ ಅರ್ಜಿಯಲ್ಲಿ ಎಲ್ಲಾ ವಿವರಗಳನ್ನು ಸ್ಪಷ್ಟವಾಗಿ ತುಂಬಬೇಕು. ದಾಖಲೆಗಾಗಿ ಮಗುವಿನ ಜನನ ಪ್ರಮಾಣ ಪತ್ರವನ್ನು ನೀಡಬೇಕು. ಪೋಷಕರು ತಮ್ಮ ಆಧಾರ್ ಸಂಖ್ಯೆಯನ್ನೂ ನಮೂದಿಸಬೇಕು. ಮಗುವಿನ ಆಧಾರ್ ಗೆ ಈ ಸಂಖ್ಯೆಗೆ ಲಿಂಕ್ ಆಗುತ್ತದೆ.

ನೀಲಿ ಆಧಾರ್ ಕಾರ್ಡ್ ನಲ್ಲಿ ಮಗುವಿನ ಪೋಟೋ ವನ್ನು ಸೆರೆಹಿಡಿದು ದಾಖಲಿಸುತ್ತಾರೆ. ಆದರೆ ಮಗುವಿನ ಬೆರಳಚ್ಚನ್ನು ಪಡೆಯಲಾಗುವುದಿಲ್ಲ. ಏಕೆಂದರೆ ಮಕ್ಕಳ ಬೆರಳು ಮತ್ತು ಕಣ್ಣಿನ ಅಚ್ಚುಗಳು ಬೆಳವಣಿಗೆಯೊಂದಿಗೇ ಬದಲಾಗುತ್ತಾ ಹೋಗುತ್ತವೆ. ನೀಲಿ ಆಧಾರ್ ಕಾರ್ಡ್ (Blue Aadhaar Card) ಮೂರು ತಿಂಗಳ ಒಳಗಾಗಿ ನಮೂದಿಸಲ್ಪಟ್ಟ ವಿಳಾಸಕ್ಕೆ ಬಂದು ತಲುಪುತ್ತದೆ.

ಈ ಆಧಾರ್ ಐದು ವರ್ಷಗಳ ವರೆಗೆ ಮಾತ್ರ ಮಾನ್ಯವಾಗಿರುತ್ತದೆ. ನಂತರ ಮಗುವಿನ ಪೋಷಕರು ಆಧಾರ್ ಕೇಂದ್ರಕ್ಕೆ ಹೋಗಿ ಮಗುವಿನ ಬೆರಳಚ್ಚು ಮತ್ತು ಕಣ್ಣಿನ ಪಾಪೆಯ ಅಚ್ಚುಗಳನ್ನು ನೀಡಿ ಬಿಳಿಯ ಆಧಾರ್ ಕಾರ್ಡ್‌ ಅನ್ನು ಮಾಡಿಸಿಕೊಳ್ಳಬೇಕು. ನಂತರ ಮಗುವಿಗೆ ಹದಿನೈದು ವರ್ಷವಾದ ಬಳಿಕ ಮತ್ತೊಮ್ಮೆ ಹೋಗಿ ಈ ಕಾರ್ಡ್ ಅನ್ನು ಬೆರಳಚ್ಚು ಮತ್ತು ಪೋಟೋ ನವೀಕರಿಸಿಕೊಳ್ಳಬೇಕು.

ನೀಲಿ ಆಧಾರ್ ಕಾರ್ಡ್ ಮಗುವಿನ ಒಂದು ಪ್ರಮುಖ ದಾಖಲೆಯಾಗಿದೆ. ಯಾರು ಇದುವರೆಗೂ ತಮ್ಮ ಮಗುವಿಗೆ ಆಧಾರ್ ಮಾಡಿಸಿರುವುದಿಲ್ಲ ಅಂತವರು ಆಧಾರ್ ಕಾರ್ಡ್ ಮಾಡಿಸಿಕೊಳ್ಳಿ. ಸರ್ಕಾರದ ಯೋಜನೆಗಳ ಲಾಭ ಪಡೆದುಕೊಳ್ಳಬಹುದು.

ಇತರೆ ಮಾಹಿತಿಗಳನ್ನು ಓದಿ:

ಗೃಹಲಕ್ಷ್ಮೀ ಯೋಜನೆಯ 2000 ರೂ. ಹಣ ಜಮಾ, DBT Status ಚೆಕ್ ಮಾಡಿ

ರೇಷನ್ ಕಾರ್ಡ್‌ e-KYC: ಈ ದಿನದೊಳಗೆ ಮಾಡಿಸಿ

ಮಹಿಳೆಯರಿಗೆ ಗುಡ್‌ ನ್ಯೂಸ್:‌ ಸರ್ಕಾರದಿಂದ 3 ಲಕ್ಷ ರೂ. ಸಹಾಯಧನ

Leave a Comment