ಅದಾನಿ ಜ್ಞಾನ ಜ್ಯೋತಿ ವಿದ್ಯಾರ್ಥಿವೇತನ 2024: ವಿದ್ಯಾರ್ಥಿಗಳಿಗೆ 50,000 ರೂ. ಸ್ಕಾಲರ್‌ಶಿಫ್ | Adani Gyan Jyoti Scholarship 2024 Apply Online @buddy4study.com

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ಅದಾನಿ ಜ್ಞಾನ ಜ್ಯೋತಿ ವಿದ್ಯಾರ್ಥಿವೇತನಕ್ಕೆ ಅರ್ಹ ವಿದ್ಯಾರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. Adani Gyan Jyoti Scholarship ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಹತೆಗಳೇನು..? ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.

ಅದಾನಿ ಗ್ರೂಪ್‌ ವತಿಯಿಂದ ಅದಾನಿ ಜ್ಞಾನ ಜ್ಯೋತಿ ವಿದ್ಯಾರ್ಥಿವೇತನವನ್ನು ನೀಡುತ್ತಾರೆ. ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಅವರ ಶಿಕ್ಷಣವನ್ನು ಮುಂದುವರೆಸಲು ಆರ್ಥಿಕ ಬೆಂಬಲ ಹಾಗೂ ಸಮಗ್ರ ಅಭಿವೃದ್ಧಿ ಅವಕಾಶಗಳನ್ನು ಒದಗಿಸುವ ಗುರಿಯನ್ನು ಈ ಸ್ಕಾಲರ್ಶಿಪ್ ಹೊಂದಿದೆ. JEE, NEET, CLAT, CA ಕೋರ್ಸ್‌ಗಳಲ್ಲಿ ಅಧ್ಯಯನ ಮಾಡಬಯಸುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡುತ್ತಾರೆ.

Adani Gyan Jyoti Scholarship 2024 ಯಾರು ಅರ್ಜಿ ಸಲ್ಲಿಸಬಹುದು:

BA Economics, BSc Economics, or Bachelor of Economics, B.E., B.Tech., integrated 5-year dual-degree M.Tech., MBBS, and LLB ಕೊರ್ಸ್ ಗಳಲ್ಲಿ ಅಧ್ಯಯನ ಮಾಡುತ್ತಿರುವ ಮೊದಲ ವರ್ಷದ ವಿದ್ಯಾರ್ಥಿಗಳು Adani Gyan Jyoti Scholarship 2024 ಅರ್ಜಿ ಸಲ್ಲಿಸಬಹುದು.

Adani Scholarship 2024 ವಿದ್ಯಾರ್ಥಿವೇತನದ ಮಾಹಿತಿ:

  • ಅರ್ಥಶಾಸ್ತ್ರ ವಿದ್ಯಾರ್ಥಿಗಳಿಗೆ: ವಾರ್ಷಿಕ ಬೋಧನಾ ಶುಲ್ಕ ವರ್ಷಕ್ಕೆ 50,000 ರೂ. ವರೆಗೆ
  • CA ವಿದ್ಯಾರ್ಥಿಗಳಿಗೆ: ವಾರ್ಷಿಕ ಬೋಧನಾ ಶುಲ್ಕ 70,000 ರೂ. ವರೆಗೆ.
  • ಕಾನೂನು ವಿದ್ಯಾರ್ಥಿಗಳಿಗೆ: ವಾರ್ಷಿಕ ಬೋಧನಾ ಶುಲ್ಕವು ವರ್ಷಕ್ಕೆ 1,80,000 ರೂ. ವರೆಗೆ
  • ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ: ವಾರ್ಷಿಕ ಬೋಧನಾ ಶುಲ್ಕ ವರ್ಷಕ್ಕೆ 2,50,000 ರೂ. ವರೆಗೆ
  • ವೈದ್ಯಕೀಯ ವಿದ್ಯಾರ್ಥಿಗಳಿಗೆ: ವಾರ್ಷಿಕ ಬೋಧನಾ ಶುಲ್ಕ ವರ್ಷಕ್ಕೆ 3,50,000 ರೂ. ವರೆಗೆ

ಎಂಜಿನಿಯರಿಂಗ್ ವಿದ್ಯಾರ್ಥಿಗಳ ಅರ್ಹತೆಗಳು:

  • ವೃತ್ತಿಪರ ಎಂಜಿನಿಯರಿಂಗ್ ಪದವಿ ಕೋರ್ಸ್‌ನ ಮೊದಲ ವರ್ಷದಲ್ಲಿ ದಾಖಲಾಗಿರಬೇಕು, ನಿರ್ದಿಷ್ಟವಾಗಿ BE/B.Tech. ಅಥವಾ ಇಂಟಿಗ್ರೇಟೆಡ್ 5-ವರ್ಷದ ಡ್ಯುಯಲ್-ಡಿಗ್ರಿ ಎಂ.ಟೆಕ್.
  • 40,000 ಕಟ್ಆಫ್ ಒಳಗೆ JEE ಅಖಿಲ ಭಾರತ ಶ್ರೇಣಿಯನ್ನು ಪಡೆದುಕೊಂಡಿರಬೇಕು.
  • ಕುಟುಂಬದ ವಾರ್ಷಿಕ ಆದಾಯವು 4,50,000 ಲಕ್ಷ ರೂ. ಮೀರಿರಬಾರದು.
  • ಅದಾನಿ ಗ್ರೂಪ್ ಮತ್ತು ಬಡ್ಡಿ4 ಸ್ಟಡಿ ಉದ್ಯೋಗಿಗಳ ಮಕ್ಕಳು ಅರ್ಹರಲ್ಲ.

ವೈದ್ಯಕೀಯ  ವಿದ್ಯಾರ್ಥಿಗಳ ಅರ್ಹತೆಗಳು:

  • ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.
  • ಅರ್ಜಿದಾರರು 2023 ರ ನಂತರ ತಮ್ಮ ಉನ್ನತ ಮಾಧ್ಯಮಿಕ/ಪೂರ್ವ ವಿಶ್ವವಿದ್ಯಾಲಯ/ಮಧ್ಯಂತರ/CBSE/ISC ಅಥವಾ ತತ್ಸಮಾನ ಬೋರ್ಡ್ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
  • ಅರ್ಜಿದಾರರು NEET ಪರೀಕ್ಷೆಯಲ್ಲಿ 15,000 ರೊಳಗೆ ಅಖಿಲ ಭಾರತೀಯ ರ‌್ಯಾಂಕ್ ಪಡೆದುಕೊಂಡಿರಬೇಕು.

ಅರ್ಥಶಾಸ್ತ್ರ ವಿದ್ಯಾರ್ಥಿಗಳ ಅರ್ಹತೆಗಳು:

  • ಅರ್ಥಶಾಸ್ತ್ರದಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ (BA),  ಅರ್ಥಶಾಸ್ತ್ರದಲ್ಲಿ ಬ್ಯಾಚುಲರ್ ಆಫ್ ಸೈನ್ಸ್ (BSc) ಅರ್ಥಶಾಸ್ತ್ರ, ಬ್ಯಾಚುಲರ್ ಆಫ್ ಎಕನಾಮಿಕ್ಸ್ (BEc) ಕೊರ್ಸ್ ಗಳಲ್ಲಿ ದಾಖಲಾದ ಮೊದಲ ವರ್ಷದ ವಿದ್ಯಾರ್ಥಿಗಳು ಮಾತ್ರ ಅರ್ಹರಾಗಿರುತ್ತಾರೆ.
  • ಅರ್ಜಿದಾರರು ತಮ್ಮ 12ನೇ ಸ್ಟ್ಯಾಂಡರ್ಡ್ ಆರ್ಟ್ಸ್ ಸ್ಟ್ರೀಮ್‌ನಲ್ಲಿ 85% ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದಿರಬೇಕು.

ಕಾನೂನು ವಿದ್ಯಾರ್ಥಿಗಳ ಅರ್ಹತೆಗಳು:

  • ಇಂಟಿಗ್ರೇಟೆಡ್ 5-ವರ್ಷದ ಡ್ಯುಯಲ್-ಡಿಗ್ರಿ LLB ಪ್ರೋಗ್ರಾಂನಲ್ಲಿ ತಮ್ಮ ಅಧ್ಯಯನ ಮಾಡುತ್ತಿರುವ ಮೊದಲ ವರ್ಷದ ವಿದ್ಯಾರ್ಥಿಗಳು ಮಾತ್ರ ಅರ್ಹರಾಗಿರುತ್ತಾರೆ.
  • Applicants must have secured a CLAT All India rank within the top 3,000.

CA ವಿದ್ಯಾರ್ಥಿಗಳ ಅರ್ಹತೆಗಳು:

  • Only students pursuing a B.Com. degree along with CA are eligible.
  • ಪ್ರಥಮ ವರ್ಷದ ಬಿ.ಕಾಂ. ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ಅರ್ಹರು.
  • Applicants must have secured a rank within the top 1,000 in the CA Foundation exam.

Adani Gyan Jyoti Scholarship 2024 ಅಗತ್ಯ ದಾಖಲೆಗಳು:

  • ಸರ್ಕಾರ ನೀಡಿದ ಗುರುತಿನ ಪುರಾವೆ (ಆಧಾರ್ ಕಾರ್ಡ್/ಮತದಾರರ ಗುರುತಿನ ಚೀಟಿ/ಚಾಲನಾ ಪರವಾನಗಿ/PAN ಕಾರ್ಡ್)
  • ಪ್ರವೇಶ ಪುರಾವೆ
  • ಆದಾಯ ಪ್ರಮಾಣಪತ್ರ
  • ಹಿಂದಿನ ವರ್ಷದ ಅಂಕಪಟ್ಟಿ
  • ಪೋಟೋ
  • ಪ್ರವೇಶ ಶ್ರೇಣಿಯ ಪ್ರಮಾಣಪತ್ರ
  • ಸೀಟು ಹಂಚಿಕೆಗೆ ಕೌನ್ಸೆಲಿಂಗ್ ಪತ್ರ
  • ಕಾಲೇಜು ನೀಡಿದ ಬೋನಫೈಡ್ ಪ್ರಮಾಣಪತ್ರ
  • Fee structure for the course issued by the college

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 15-12-2024

ಪ್ರಮುಖ ಲಿಂಕ್’ಗಳು:
Adani Gyan Jyoti Scholarship 2024 Apply Online Link:‌ Apply ಮಾಡಿ

35,000 ರೂ. ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ

SSP Scholarship 2024 For OBC

ಲೇಬರ್ ಕಾರ್ಡ್ ವಿದ್ಯಾರ್ಥಿವೇತನ 2024

ಪಿಎಂ ವಿದ್ಯಾರ್ಥಿವೇತನ 2024

Leave a Comment