ಎಲ್ಲರಿಗೂ ನಮಸ್ಕಾರ, ಗೃಹಲಕ್ಷ್ಮೀ ಯೋಜನೆಯ ಹಣವು ನಿಮ್ಮ ಖಾತೆಗೆ ಜಮಾ ಆಗಿದೆಯಾ ಎಂದು ಚೆಕ್ ಮಾಡಿಕೊಳ್ಳಬೇಕೆ..? ಗೃಹಲಕ್ಷ್ಮೀ ಯೋಜನೆಯ DBT Status ಚೆಕ್ (GruhaLakshmi DBT Status) ಮಾಡುವ ಸುಲಭ ವಿಧಾನವನ್ನು ಈ ಲೇಖನದಲ್ಲಿ ನೀಡಲಿದ್ದೇವೆ ಓದಿರಿ.
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮೀ ಯೋಜನೆಯನ್ನು ಮಹಿಳೆಯರ ಸಭಲೀಕರಣಕ್ಕಾಗಿ ಜಾರಿಗೆ ತರಲಾಗಿದೆ. ಈ ಯೋಜನೆಯ ಮೂಲಕ ಪ್ರತಿ ತಿಂಗಳು ಮಹಿಳೆಯರಿಗೆ 2000 ರೂ. ಗಳನ್ನು ಅವರ ಖಾತೆಗೆ ನೇರವಾಗಿ ಸಂದಾಯ ಮಾಡಲಾಗುತ್ತಿದೆ. 1 ಕೋಟಿಗೂ ಅಧಿಕ ಮಹಿಳೆಯರು ಈ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ.
ಈ ಯೋಜನೆಯಿಂದ ಬಂದ ಹಣದಿಂದ ಚಿನ್ನ, ವಾಷಿಂಗ್ ಮಷಿನ್, ಫ್ರಿಡ್ಜ್ ಸೇರಿದಂತೆ ತಮ್ಮ ಅಗತ್ಯದ ವಸ್ತುಗಳನ್ನು ಖರೀದಿ ಮಾಡಿದ್ದಾರೆ. ಗೃಹಲಕ್ಷ್ಮೀ ಯೋಜನೆಯ ಹಣವನ್ನು ಕೂಡಿಟ್ಟು ಅಜ್ಜಿ ಊರಿಗೆ ಹೋಳಿಗೆ ಊಟ ಹಾಕಿಸಿದ್ದಾರೆ.
ಗೃಹಲಕ್ಷ್ಮೀ ಯೋಜನೆಯ ಹಣವು ನಿಮ್ಮ ಖಾತೆಗೆ ಜಮಾ ಆಗಿದೆಯಾ ಎಂದು ಈ ಕೆಳಗೆ ನೀಡಿರುವ DBT Status ಮೂಲಕ ಚೆಕ್ ಮಾಡಿಕೊಳ್ಳಬಹುದಾಗಿದೆ.
Karnataka GruhaLakshmi DBT Status Online 2025:
ಗೃಹಲಕ್ಷ್ಮೀ ಯೋಜನೆಯ 2 ಸಾವಿರ ರೂಪಾಯಿ ಹಣವು ನಿಮ್ಮ ಖಾತೆಗೆ ಸಂದಾಯವಾಗಿದೆಯಾ..? ಎಂಬುದನ್ನು ಈ ಕೆಳಗೆ ತಿಳಿಸಿರುವ ಹಂತಗಳ ಮೂಲಕ DBT Status ಚೆಕ್ ಮಾಡಿಕೊಳ್ಳಬಹುದು.
ಹಂತ-1: ಮೊದಲಿಗೆ ಈ ಕೇಳಗೆ ಕೊಟ್ಟಿರುವ ಲಿಂಕ್ ಮೂಲಕ DBT Karnataka ಅಧಿಕೃತ App ಅನ್ನು ಡೌನ್‌ಲೋಡ್ ಮಾಡಿ.
ಹಂತ-2: ನಂತರ App ಓಪನ್ ಮಾಡಬೇಕು. ಅಲ್ಲಿ Enter Aadhaar Number ಎಂಬಲ್ಲಿ ಫಲಾನುಭವಿಯ ಆಧಾರ ನಮಬರ್ ಅನ್ನು ನಮೂದಿಸಬೇಕು. GET OTP ಎಂಬುದರ ಮೇಲೆ ಕ್ಲಿಕ್ ಮಾಡಬೇಕು.
ಹಂತ-3: ಫಲಾನುಭವಿಯ ಆಧಾರಗೆ ಲಿಂಕ್ ಇರುವ ಮೊಬೈಲ್ ನಂಬರ್ ಗೆ OTP ಬರುತ್ತದೆ. Enter OTP ಎಂದಿರುವಲ್ಲಿ ಆರು ಸಂಖ್ಯೆಯ OTP ಎಂಟರ್ ಮಾಡಿ. Verify OTP ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ-4: ಫಲಾನುಭವಿಯ ವಯಕ್ತಿಕ ವಿವರ ನಿಮ್ಮ ಮುಂದೆ ಕಾಣಿಸುತ್ತದೆ. ಅಲ್ಲಿ ಮೊಬೈಲ್ ಸಂಖ್ಯೆ ಎಂಟರ್ ಮಾಡಲು ತಿಳಿಸಲಾಗಿರುತ್ತದೆ. ಆಧಾರಗೆ ಲಿಂಕ್ ಇರುವ ಮೊಬೈಲ್ ನಂಬರ್ ನಮೂದಿಸಿ. OK ಬಟನ್ ಮೇಲೆ ಕ್ಲಿಕ್ ಮಾಡಿಬೇಕು.
ಹಂತ-5: ತದನಂತರ Create mPIN ಎಂದಿರುತ್ತದೆ. ನಿಮ್ಮ ನೆನಪಿನಲ್ಲಿ ಉಳಿಯುವ ನಾಲ್ಕು ಸಂಖ್ಯೆಯ mPIN ಎಂಟರ್ ಮಾಡಿ. Submit ಬಟನ್ ಮೇಲೆ ಕ್ಲಿಕ್ ಮಾಡಿಬೇಕು.
ಹಂತ-6: ನಂತರ ಅಲ್ಲಿ Select Beneficiary ಎಂದು ಇರುತ್ತದೆ. ನೀವು Add ಮಾಡಿರುವ ಫಲಾನುಭವಿಯನ್ನು ಆಯ್ಕೆ ಮಾಡಿ.
ಹಂತ-7: ಫಲಾನುಭವಿಯನ್ನು ಆಯ್ಕೆ ಮಾಡಿದ ನಂತರ ನೀವು Create ಮಾಡಿದ mPIN ಅನ್ನು ಎಂಟರ್ ಮಾಡಿ. LOGIN ಬಟನ್ ಮೇಲೆ ಕ್ಲಿಕ್ ಮಾಡಬೇಕು.
ಹಂತ-8: ಮೊದಲ ಆಯ್ಕೆ Payment Status ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ-9: ನಂತರ ಅಲ್ಲಿ Gruhalakshmi DBT Status Check ಮಾಡುವ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
ಹಂತ-10: ನಿಮ್ಮ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮೀ ಯೋಜನೆಯ 2 ಸಾವಿರ ರೂ. ಹಣ ಸಂದಾಯ ಆಗಿರುವ ಮಾಹಿತಿ ಲಭ್ಯವಾಗುತ್ತದೆ. ನಿಮ್ಮ ಯಾವ ಬ್ಯಾಂಕ್ ಖಾತೆಗೆ, ಯಾವ ದಿನಾಂಕದಂದು ಹಣ ಜಮಾ ಆಗಿದೆ ಎಂಬ ವಿವರಗಳನ್ನು ನೀವು ಪರಿಶೀಲನೆ ಮಾಡಿಕೊಳ್ಳಬಹುದು.
Gruhalakshmi DBT Status Check Link:
DBT Karnataka App: Download ಮಾಡಿ
ಇದೆ ರೀತಿಯ Latest ಮಾಹಿತಿ ಪಡೆಯಲು ನಮ್ಮ WhatsApp Group ಗೆ Join ಆಗಿ ಹಾಗೂ ನಮ್ಮ ವೆಬ್‌ಸೈಟ್ ನೋಟಿಫಿಕೇಶನ್ ಆನ್ ಮಾಡಿಕೊಳ್ಳಿ.
ಇತರೆ ಮಾಹಿತಿಗಳನ್ನು ಓದಿ: