ಎಲ್ಲರಿಗೂ ನಮಸ್ಕಾರ, ನಿಮ್ಮ ರೇಷನ್ ಕಾರ್ಡ್ಗೆ ಆಧಾರ ನಂಬರ್ ಲಿಂಕ್ ಮಾಡಿದ್ದೀರಾ? Ration Card Aadhar Card Link ಆಗಿರುವ Status ಚೆಕ್ ಮಾಡಬೇಕಾ..? ಹಾಗಿದ್ದರೆ ಈ ಲೇಖನ ನಿಮಗಾಗಿ. Ration Card eKYC ಮಾಡಿಸದಿದ್ದರೇ ನಿಮ್ಮ ರೇಷನ್ ಕಾರ್ಡ್ ರದ್ದಾಗುವ ಸಾಧ್ಯತೆ ಇದ್ದು, e-KYC ಆಗಿದೇಯಾ ಎಂಬುದನ್ನು ನೋಡಿ.
ರೇಷನ್ ಕಾರ್ಡ್ನಲ್ಲಿರುವ ಎಲ್ಲಾ ಸದಸ್ಯರ ಆಧಾರ ನಂಬರ್ಗಳನ್ನು Link ಮಾಡಿಸುವುದು ಕಡ್ಡಾಯವಾಗಿದೆ. ಇದೇ ಆಗಸ್ಟ್ 31 ರೊಳಗಾಗಿ ಇ ಕೆವೈಸಿ ಮಾಡದಿದ್ದರೆ ಅಂತವರ ಹೆಸರನ್ನು ರೇಷನ್ ಕಾರ್ಡ್ ನಿಂದ ತೆಗೆಯುತ್ತಾರೆ. ಆಧಾರ್ ಆಧಾರಿತ ದೃಢೀಕರಣ ಮಾಡಿಸುವುದು ಕೇಂದ್ರ ಸರಕಾರದ ಮಾರ್ಗಸೂಚಿಯನ್ವಯ ಕಡ್ಡಾಯವಾಗಿದೆ. ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಹೋಗಿ ಇ-ಕೆವೈಸಿ ಮಾಡಿಸಿಕೊಳ್ಳಬಹುದು. ಅಥವಾ ಆನ್ಲೈನ್ನಲ್ಲಿಯೂ ಮಾಡಿಸಬಹುದು.
How to Check Ration Card Aadhar Card Link Status Online:
ನಿಮ್ಮ ಪಡಿತರ ಚೀಟಿ ಗೆ ಆಧಾರ ಲಿಂಕ್ ಆಗಿದೆಯಾ ಅಥವಾ ಇಲ್ಲಾ ಎಂಬುದನ್ನು ತಿಳಿಯಲು ಈ ಕೇಳಗೆ ತಿಳಿಸಿರುವ ವಿಧಾನದ ಮೂಲಕ Ration Card Aadhar Link Status Check ಮಾಡಬಹುದು.
- Step-1: ಮೊದಲಿಗೆ ನೀವು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು. (ಕೇಳಗೆ ಲಿಂಕ್ ನೀಡಲಾಗಿದೆ.)
- Step-2: ಆಹಾರ ಇಲಾಖೆ ವೆಬ್ಸೈಟ್’ನಲ್ಲಿ ಮೇಲ್ಭಾಗದಲ್ಲಿ “ಇ-ಸೇವೆಗಳು” ಎಂಬ Option ಮೇಲೆ ಕ್ಲಿಕ್ ಮಾಡಿ.
- Step-3: ನಿಮ್ಮ ಎಡ ಭಾಗದಲ್ಲಿರುವ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಇ-ಸ್ಥಿತಿ ಅಂತ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿದರೆ ಅದರ ಕೇಳ ಭಾಗದಲ್ಲಿ ಹೊಸ/ಹಾಲಿ ಪಡಿತರ ಚೀಟಿಯ ಸ್ಥಿತಿ (Ration Card Status) ಎಂದಿರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
- Step-4: ನಂತರ ಒಂದು ಹೊಸ ಪುಟ ಓಪನ್ ಆಗುತ್ತದೆ. ಅಲ್ಲಿ ವಿಭಾಗಗಳಿಗೆ ಅನುಗುಣವಾಗಿ ಬೇರೆ ಬೇರೆ ಲಿಂಕ್ಗಳಿರುತ್ತವೆ. ನಿಮ್ಮ ಜಿಲ್ಲೆಯ ಹೆಸರು ಇರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
- Step-5: ಮತ್ತೊಂದು ಹೊಸ ಪೇಜ್ ಓಪನ್ ಆಗುತ್ತದೆ. ಅದರಲ್ಲಿ ಅನೇಕ ಆಯ್ಕೆಗಳಿರುತ್ತವೆ. ನೀವು ಎರಡನೇ ಆಯ್ಕೆ Status Of Ration Card ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
- Step-6: ಮುಂದಿನ ಪುಟದಲ್ಲಿ with Out OTP ಎಂಬುದನ್ನು ಆಯ್ಕೆ ಮಾಡಿ. Enter RC Number ಎಂದಿರುವಲ್ಲಿ ನಿಮ್ಮ ಪಡಿತರ ಚೀಟಿ ನಂಬರ್ ಎಂಟರ್ ಮಾಡಿ. Go ಬಟನ್ ಮೇಲೆ ಕ್ಲಿಕ್ ಮಾಡಿ.
- Step-7: ನಿಮ್ಮ ಕುಟುಂಬದಲ್ಲಿರುವ ಸದಸ್ಯರ ಸಂಖ್ಯೆ, ಎಷ್ಟು ಜನರ Ration Card eKYC (e Kyc Ration Card Online Karnataka) ಆಗಿದೆ ಮತ್ತು ಎಷ್ಟು ಜನರ eKYC ಆಗಿಲ್ಲ ಎಂಬುದು ಅಲ್ಲಿ ಕಾಣಿಸುತ್ತದೆ.
- Step-8: ಯಾರ eKYC ಆಗಿಲ್ಲ ಎಂಬುದನ್ನು ತಿಳಿಯಲು With OTP ಆಯ್ಕೆ ಮಾಡಿ. Enter RC Number ಎಂದಿರುವಲ್ಲಿ ನಿಮ್ಮ ರೇಷನ್ ಕಾರ್ಡ್ ನಂಬರ್ ಎಂಟರ್ ಮಾಡಿ. Go ಬಟನ್ ಮೇಲೆ ಕ್ಲಿಕ್ ಮಾಡಿ.
- Step-9: ನಿಮ್ಮ ರೇಷನ್ ಕಾರ್ಡ್ನಲ್ಲಿ ಆಧಾರ ನಂಬರ್ ಲಿಂಕ್ ಇರುವ ಸದಸ್ಯರ ಹೆಸರನ್ನು ಆಯ್ಕೆ ಮಾಡಿ Go ಬಟನ್ ಮೇಲೆ ಕ್ಲಿಕ್ ಮಾಡಿ. ಆಧಾರ್ ಕಾರ್ಡ್ ಗೆ ಲಿಂಕ್ ಇರುವ ಮೊಬೈಲ್ಗೆ ಓಟಿಪಿ ಬರುತ್ತದೆ ಅದನ್ನು Enter OTP ಎಂದಿರುವ ಬಾಕ್ಸ್ ನಲ್ಲಿ ನಮೂದಿಸಿ Go ಮೇಲೆ ಕ್ಲಿಕ್ ಮಾಡಿ.
- Step-10: ಮುಂದಿನ ಪುಟದಲ್ಲಿ ಯಾರ eKYC ಆಗಿಲ್ಲ ಎಂಬುದನ್ನು ನೋಡಿ ಈ ಕೇಳಗೆ ತಿಳಿಸಿರುವ Ration Card Aadhar Link ವಿಧಾನವನ್ನು ಅನುಸರಿಸಿ. Ration Card ಗೆ Aadhar ಲಿಂಕ್ ಮಾಡಬಹುದು.
ರೇಷನ್ ಕಾರ್ಡ್-ಆಧಾರ ಕಾರ್ಡ್ ಲಿಂಕ್ ಮಾಡುವುದು ಹೇಗೆ?
ಪಡಿತರ ಚೀಟಿ ಮತ್ತು ಆಧಾರ ಕಾರ್ಡ್ ಲಿಂಕ್ ಮಾಡುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ವಿತರಿಸುವ ರೇಷನ್ ಕಾರ್ಡ್ ಹೊಂದಿರುವವರು ಈ ಕೆಲಸವನ್ನು ಮಾಡಲೇಬೇಕು. Ration Card Aadhar Card Link ಮಾಡುವ ಸುಲಭ ವಿಧಾನಗಳನ್ನು ಈ ಕೇಳಗಿನಂತೆ ನೀಡಲಾಗಿದೆ.
How to Link Aadhar Card to Ration Card Karnataka?
- Step-1: ಮೊದಲು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ. (ಕೇಳಗೆ ಲಿಂಕ್ ನೀಡಲಾಗಿದೆ.)
- Step-2: ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ವೆಬ್ಸೈಟ್’ನಲ್ಲಿ ಮೇಲ್ಭಾಗದಲ್ಲಿ “ಇ-ಸೇವೆಗಳು” ಎಂಬ Option ಮೇಲೆ ಕ್ಲಿಕ್ ಮಾಡಿ.
- Step-3: ನಿಮ್ಮ ಎಡ ಭಾಗದಲ್ಲಿ ಕಾಣುವ ಇ-ಪಡಿತರ ಚೀಟಿ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
- Step-4: ನಂತರ ಅಲ್ಲಿ ಕೇಳಗೆ ಯುಐಡಿ ಲಿಂಕ್ ಮಾಡಿ ಅಂತ ಕಾಣಸಿಗುತ್ತದೆ. ಆ Option ಮೇಲೆ ಕ್ಲಿಕ್ ಮಾಡಬೇಕು.
- Step-5: ನಂತರ ಒಂದು ಹೊಸ ಪುಟ ಓಪನ್ ಆಗುತ್ತದೆ. ಅಲ್ಲಿ ವಿಭಾಗಗಳಿಗೆ ಅನುಗುಣವಾಗಿ ಬೇರೆ ಬೇರೆ ಲಿಂಕ್ಗಳಿರುತ್ತವೆ. ನಿಮ್ಮ ಜಿಲ್ಲೆಯ ಹೆಸರು ಇರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
- Step-6: ತದನಂತರ ಮತ್ತೊಂದು ಹೊಸ ಪುಟ ಓಪನ್ ಆಗುತ್ತದೆ. ಅದರಲ್ಲಿ ಅನೇಕ ಆಯ್ಕೆಗಳಿರುತ್ತವೆ. ನೀವು UID Linking For RC Members ಎಂಬ ಬಟನ್ ಮೇಲೆ ಕ್ಲಿಕ್ ಮಾಡಿಬೇಕು.
- Step-7: ಮತೊಂದು ಹೊಸ ಪುಟ ಓಪನ್ ಆಗುತ್ತದೆ. ಅಲ್ಲಿ ನೀವು ಯಾರ ಆಧಾರ ಸಂಖ್ಯೆ ಲಿಂಕ್ ಮಾಡಬೇಕು ಎಂದುಕೊಂಡಿದ್ದೀರಿ ಅವರ ಆಧಾರ್ ನಂಬರ್ ನಮೂದಿಸಿ ಹಾಗೂ GO ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
- Step-8: ನಿಮ್ಮ ಆಧಾರ ನಂಬರ್ ಗೆ ಲಿಂಕ್ ಇರುವ ಮೊಬೈಲ್ ನಂಬರ್ಗೆ ಒನ್ ಟೈಮ್ ಪಾಸ್ವರ್ಡ್ (OTP) ಬರುತ್ತದೆ. Enter OTP ಎಂದಿರುವ ಬಾಕ್ಸ್ನಲ್ಲಿ ಓಟಿಪಿ ನಮೂದಿಸಿ ಹಾಗೂ GO ಬಟನ್ ಮೇಲೆ ಕ್ಲಿಕ್ ಮಾಡಿ.
- Step-9: ಆಗ ಅಲ್ಲಿ “OTP has been validated successfully. Please enter RC No. to link the members.” ಎಂದು ಪಾಪ್ಅಪ್ ಬರುತ್ತದೆ. Ok ಬಟನ್ ಮೇಲೆ ಕ್ಲಿಕ್ ಮಾಡಿ.
- Step-10: Enter RC Number ಎಂದಿರುವ ಬಾಕ್ಸ್ನಲ್ಲಿ ನಿಮ್ಮ ಕುಟುಂಬದ ಪಡಿತರ ಚೀಟಿ ನಂಬರ್ ನಮೂದಿಸಿ ಮತ್ತು GO ಬಟನ್ ಮೇಲೆ ಕ್ಲಿಕ್ ಮಾಡಿ. ಅಲ್ಲಿಗೆ ನಿಮ್ಮ Ration Card Aadhar Card Link ಮಾಡುವ ಪ್ರಕ್ರೀಯೆ ಮುಕ್ತಾಯವಾಗುತ್ತದೆ.
ಪ್ರಮುಖ ಲಿಂಕ್ಗಳು:
Karnataka Ration Card e-KYC Online: Link Online
ಅಧಿಕೃತ ವೆಬ್ಸೈಟ್: ahara.kar.nic.in, https://ahara.kar.nic.in/lpg/
ಕೊನೆಯ ಮಾತು: ರೇಷನ್ ಕಾರ್ಡ್ ಮತ್ತು ಆಧಾರ ಕಾರ್ಡ್ ಲಿಂಕ್ (Ration Card Aadhar Card Link) ಮಾಡಲು ಈ ಲೇಖನ ನಿಮಗೆ ಸಹಾಯವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ಯೋಜನೆಗಳ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸ್ಆಪ್ ಗ್ರೂಪ್ಗೆ ಅಥವಾ ಟೆಲಿಗ್ರಾಮ್ ಗ್ರೂಪ್ಗೆ ಸೇರಬಹುದು. ಧನ್ಯವಾದಗಳು.
ಇತರೆ ಮಾಹಿತಿಗಳನ್ನು ಓದಿ: