GruhaLakshmi Scheme 2024: ಗೃಹಲಕ್ಷ್ಮೀ ಯೋಜನೆಯ ಕುರಿತು ಹೊಸ ಅಪ್‌ಡೇಟ್:‌ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಸ್ಪಷ್ಟನೆ

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ಗೃಹಲಕ್ಷ್ಮೀ ಯೋಜನೆಯ (GruhaLakshmi Scheme) ಮೂಲಕ ಅರ್ಹ ಮನೆ ಯಜಮಾನಿ ಮಹಿಳೆಯರಿಗೆ ಪ್ರತಿ ತಿಂಗಳು 2000 ರೂ. ಗಳನ್ನು ಅವರ ಖಾತೆಗೆ ನೇರವಾಗಿ‌ ಸಂದಾಯ ಮಾಡಲಾಗುತ್ತದೆ. ಇದುವರೆಗೂ 11 ಕಂತುಗಳ ಹಣವು ಫಲಾನುಭವಿಗಳ ಖಾತೆ ಸೇರಿದೆ.

ಕೆಲವರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ. ಅರ್ಜಿ ಸಲ್ಲಿಸಿದರು‌ ಯಾಕ ಹಣ ಜಮಾ ಆಗಿಲ್ಲ ಎಂದು ಕೆಲವರು ಚಿಂತಿಸುತ್ತಿದ್ದಾರೆ. ಈ ಕುರಿತಾಗಿ ಬೆಳಗಾವಿಯಲ್ಲಿ ಮಾತನಾಡಿದ ಅವರು, ಜಿಎಸ್‌ಟಿ ಹಾಗೂ ಆದಾಯ ತೆರಿಗೆ ತುಂಬುವವರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರುವುದಿಲ್ಲ. ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ತಿಳಿಸಿದ್ದಾರೆ.

GruhaLakshmi Scheme Update:

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವವರಿಗೆ ಕೆಲವು ನಿಯಮಗಳನ್ನು ರೂಪಿಸಲಾಗಿತ್ತು. GST, ಮತ್ತು ಆದಾಯ ತೆರಿಗೆ ತುಂಬುವವರು ಗೃಹಲಕ್ಷ್ಮಿ ಯೋಜನೆಯ ವ್ಯಾಪ್ತಿಗೆ ಸೇರುವುದಿಲ್ಲ ಎಂದು ಹೇಳಿದ್ದೇವು. ಆದರೂ GST ಇದ್ದವರು ಕೂಡಾ ಈ ಯೋಜನೆಗೆ ಅರ್ಜಿ ಹಾಕಿದ್ದರು. ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ಹೇಳಿದ್ದಾರೆ.

ಗೃಹಲಕ್ಷ್ಮಿ ಯೋಜನೆ (GruhaLakshmi Scheme) ಗೆ ಅನರ್ಹವಾದ ಸುಮಾರು 15 ಸಾವಿರಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದವು. ಅರ್ಜಿದಾರರ ಹಿನ್ನೆಲೆ ಪರಿಶೀಲಿಸಿದಾಗ GST ಗೆ ಒಳಪಟ್ಟಿರುವ ಕಾರಣಕ್ಕೆ ಅಂತಹ ಅರ್ಜಿಗಳನ್ನು ರಿಜೆಕ್ಟ್‌ ಮಾಡಿದ್ದೇವೆ. ರಾಜ್ಯದಲ್ಲಿ ಶ್ರೀಮಂತರು, GST ಇದ್ದವರು ಸೇರಿ ಒಟ್ಟು 1 ಕೋಟಿ 58 ಲಕ್ಷ ಕುಟುಂಬಗಳಿವೆ.

ಜೂನ್ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣವು ಫಲಾನುಭವಿಗಳಿಗೆ ಸಂದಾಯವಾಗಿದ್ದು, ಇನ್ನೂ ಕೆಲವರಿಗೆ ಜೂನ್ ತಿಂಗಳಿನ ಹಣ ತಲುಪಿಲ್ಲ. ತಾಂತ್ರಿಕ ದೋಷವನ್ನ ಈಗಾಗಲೇ ಸರಿ ಮಾಡಿದ್ದೇವೆ. ಜುಲೈ ಮತ್ತು ಆಗಷ್ಟ್ ತಿಂಗಳಿನ ಗೃಹಲಕ್ಷ್ಮಿ ಯೋಜನೆಯ ಹಣದ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ನಿನ್ನೆ ಚರ್ಚೆ ಮಾಡಿದ್ದೇನೆ. ಒಂದು ವಾರದೊಳಗೆ ಈ ಎರಡೂ ತಿಂಗಳ ಹಣ ಕೂಡ ಜಮಾ ಆಗಲಿದೆ ಎಂದು ತಿಳಿಸಿದರು.

ಇತರೆ ಮಾಹಿತಿಗಳನ್ನು ಓದಿ:

ಗೃಹಲಕ್ಷ್ಮೀ ಯೋಜನೆಯ 2000 ರೂ. ಹಣ ಜಮಾ, DBT Status ಚೆಕ್ ಮಾಡಿ

Ration Card e-KYC Karnataka

ಮಹಿಳೆಯರಿಗೆ ಗುಡ್‌ ನ್ಯೂಸ್:‌ ಸರ್ಕಾರದಿಂದ 3 ಲಕ್ಷ ರೂ. ಸಹಾಯಧನ

Leave a Comment