ಎಲ್ಲರಿಗೂ ನಮಸ್ಕಾರ, ಸೆಪ್ಟೆಂಬರ್ ತಿಂಗಳಿನಲ್ಲಿ ಕೆಲವು ಬದಲಾವಣೆಗಲಾಗುತ್ತವೆ. LPG ಸಿಲಿಂಡರ್ ನ ಬೆಲೆ, ಕ್ರೆಡಿಟ್ ಕಾರ್ಡ್ ಸೇರಿದಂತೆ ಯಾವೇಲ್ಲಾ ನಿಯಮಗಳ (September New Rules ) ಬದಲಾವಣೆಯಾಗಲಿದೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ಓದಿರಿ.
LPG ಸಿಲಿಂಡರ್ ಬೆಲೆ:
ಪ್ರತಿ ತಿಂಗಳು ಮೊದಲ ದಿನದಂದು LPG ಸಿಲಿಂಡರ್ ನ ಬೆಲೆಯಲ್ಲಿ ಬದಲಾವಣೆಗಳಾಗುತ್ತದೆ. ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳು, ಹಾಗೂ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ ಬದಲಾವಣೆ ಆಗುತ್ತದೆ. ಸೆಪ್ಟೆಂಬರ್ ನಲ್ಲು LPG ಸಿಲಿಂಡರ್ ಗಳ ಬೆಲೆಯಲ್ಲಿ ಬದಲಾವಣೆ ಆಗುವ ಸಾಧ್ಯತೆಗಳಿವೆ. ಆಗಸ್ಟ್ ನಲ್ಲಿ ವಾಣಿಜ್ಯ LPG ಗ್ಯಾಸ್ ಸಿಲಿಂಡರ್ ಬೆಲೆ 8.50 ರೂ. ಹೆಚ್ಚಳವಾಗಿತ್ತು. ಜುಲೈ ತಿಂಗಳಿನಲ್ಲಿ ವಾಣಿಜ್ಯ ಸಿಲಿಂಡರ್ ನ ಬೆಲೆಯಲ್ಲಿ 30 ರೂ. ಇಳಿಕೆಯಾಗಿತ್ತು.
September New Rules:
CNG PNG ಬೆಲೆ:
LPG ಸಿಲಿಂಡರ್‌ಗಳ ಬೆಲೆಯೊಂದಿಗೆ, ತೈಲ ಮಾರುಕಟ್ಟೆ ಕಂಪನಿಗಳು ಏವಿಯೇಷನ್ ಟರ್ಬೈನ್ ಇಂಧನ (ಎಟಿಎಫ್) , CNG-PNG ಬೆಲೆಯನ್ನು ಸಹ ಬದಲಾವಣೆ ಆಗುವ ಸಾಧ್ಯತೆಗಳಿವೆ. ಈ ತಿಂಗಳ ಮೊದಲ ದಿನಾಂಕದಂದು ಇವುಗಳ ಬೆಲೆಯಲ್ಲಿ ಬದಲಾವಣೆಗಳಾಗಬಹುದು.
ಟ್ರಾಯ್:
Fake Calls, ನಕಲಿ ಸಂದೇಶಗಳನ್ನು ತಡೆಯಲು ಟ್ರಾಯ್ ದೂರಸಂಪರ್ಕ ಕಂಪನಿಗಳಿಗೆ ಎಚ್ಚರಿಕೆ ನೀಡಿದೆ. ಟ್ರಾಯ್ ಕಠಿಣ ಮಾರ್ಗಸೂಚಿಗಳನ್ನು ಹೊರಡಿಸಿದೆ. ಏರ್‌ಟೆಲ್, ಜಿಯೋ, ವೊಡಾಫೋನ್, ಐಡಿಯಾ, ಬಿಎಸ್‌ಎನ್‌ಎಲ್ ಮುಂತಾದ ದೂರಸಂಪರ್ಕ ಕಂಪನಿಗಳು 140 ಮೊಬೈಲ್ ಸಂಖ್ಯೆಗಳೊಂದಿಗೆ ಪ್ರಾರಂಭಿಸಿ ಬ್ಲಾಕ್‌ಚೈನ್ ಆಧಾರಿತ ಡಿಎಲ್‌ಟಿ (ಡಿಸ್ಟ್ರಿಬ್ಯೂಟೆಡ್ ಲೆಡ್ಜರ್ ಟೆಕ್ನಾಲಜಿ ಪ್ಲಾಟ್‌ಫಾರ್ಮ್) ಗೆ ಟೆಲಿಮಾರ್ಕೆಟಿಂಗ್ ಕರೆಗಳು, ವಾಣಿಜ್ಯ ಸಂದೇಶಗಳನ್ನು ಕಳುಹಿಸಬೇಕೆಂದು ಟ್ರಾಯ್ ಕೋರಿದೆ.
ಕ್ರೆಡಿಟ್ ಕಾರ್ಡ್ ನಿಯಮ:
ಸೆಪ್ಟೆಂಬರ್ 1 ರಿಂದ, HDFC ಬ್ಯಾಂಕ್ ಯುಟಿಲಿಟಿ ಬಿಲ್ ಪಾವತಿ ವಹಿವಾಟುಗಳ ಮೇಲಿನ ರಿವಾರ್ಡ್ ಪಾಯಿಂಟ್‌ಗಳ ಮಿತಿಯನ್ನು ನಿಗದಿಪಡಿಸಲಿದೆ. ಗ್ರಾಹಕರಿಗೆ ಈ ವಹಿವಾಟುಗಳ ಮೇಲೆ ತಿಂಗಳಿಗೆ 2,000 ಪಾಯಿಂಟ್‌ಗಳನ್ನು ಮಾತ್ರ ಪಡೆಯಬಹುದು. ಬೇರೆ ಅಪ್ಲಿಕೇಶನ್‌ಗಳ ಮೂಲಕ ಹಣ ಪಾವತಿ ಮಾಡಿದರೆ HDFC ಬ್ಯಾಂಕ್ ಯಾವುದೇ ರಿವಾರ್ಡ್ ನೀಡುವುದಿಲ್ಲ.
IDFC ಬ್ಯಾಂಕ್:
IDFC ಫಸ್ಟ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಮೇಲೆ ಪಾವತಿಸಬೇಕಾದ ಕನಿಷ್ಠ ಮೊತ್ತವನ್ನು ಕಡಿಮೆ ಮಾಡಲಿದೆ. ಪಾವತಿ ದಿನಾಂಕವನ್ನು ಸಹ 18 ರಿಂದ 15 ದಿನಗಳಿಗೆ ಇಳಿಸಲಾಗುವುದು. UPI ಜೊತೆಗೆ ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ಪಾವತಿಗಳನ್ನು ಮಾಡಲು RuPay ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವ ಗ್ರಾಹಕರು ಇತರೆ ಪಾವತಿ ಸೇವಾ ಪೂರೈಕೆದಾರರ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವವರಿಗೆ ಸಿಗುವ ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯುತ್ತಾರೆ.
ಉಚಿತ ಆಧಾರ್ ನವೀಕರಣ:
ಆಧಾರ್ ಕಾರ್ಡ್ ಅನ್ನು ಉಚಿತವಾಗಿ ಅಪ್ಡೇಟ್ ಮಾಡಿಸಲು ಸೆಪ್ಟೆಂಬರ್ 14 ಕೊನೆಯ ದಿನಾಂಕವಾಗಿದೆ. ತದನಂತರ ಆಧಾರ್‌ಗೆ ಸಂಬಂಧಿಸಿದ ಕೆಲವು ವಿಷಯಗಳನ್ನು ಉಚಿತವಾಗಿ ಅಪ್ಡೇಟ್ ಮಾಡಲು ಸಾಧ್ಯವಾಗುವುದಿಲ್ಲ. ಸೆಪ್ಟೆಂಬರ್ 14 ರ ನಂತರ, ಆಧಾರ್ ಅಪ್ಡೇಟ್ ಮಾಡಲು ನೀವು ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದೆ ತಿಂಗಳು 14 ರ ಒಳಗಾಗಿ ಉಚಿತವಾಗಿ ಅಪ್ಡೇಟ್ ಮಾಡಿಸಿಕೊಳ್ಳಿ.
ಇತರೆ ಮಾಹಿತಿಗಳನ್ನು ಓದಿ: