ಎಲ್ಲರಿಗೂ ನಮಸ್ಕಾರ, ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಯುವ ನಿಧಿ ಯೋಜನೆ (Yuva Nidhi Scheme) ಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಆ ಯೋಜನೆಗಳಲ್ಲಿ ಒಂದಾಗಿರುವ ಯುವ ನಿಧಿ ಯೋಜನೆ (Yuva Nidhi) ಯನ್ನು ನಿರುದ್ಯೋಗಿ ಯುವಕರಿಗಾಗಿ ಜಾರಿಗೆ ತರಲಾಗಿದೆ. ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಿ ಯೋಜನೆಯ ಲಾಭ ಪಡೆಯಬಹುದು.
Karnataka Yuva Nidhi Scheme 2023-24
- ಯೋಜನೆಯ ಹೆಸರು: ಯುವ ನಿಧಿ ಯೋಜನೆ
- ನಿರುದ್ಯೋಗ ಭತ್ಯೆ: ಪ್ರತಿ ತಿಂಗಳು 3000 ರೂ. ಮತ್ತು 1500 ರೂ.
- ಅರ್ಜಿ ಸಲ್ಲಿಕೆ ವಿಧಾನ: ಆನ್ಲೈನ್
ರಾಜ್ಯದ ಪದವೀಧರ ಮತ್ತು ಡಿಪ್ಲೊಮಾ ಪಡೆದ ನಿರುದ್ಯೋಗಿ ವಿದ್ಯಾವಂತ ಯುವ ಜನರಿಗೆ ನಿರುದ್ಯೋಗ ಭತ್ಯೆ ಪಾವತಿಸಲು “ಕರ್ನಾಟಕ ಯುವ ನಿಧಿ ಯೋಜನೆ” ಯನ್ನು ಸರ್ಕಾರ ಜಾರಿ ಮಾಡಿದೆ. ಈ ಯೋಜನೆಯ ಅರ್ಜಿ ಸಲ್ಲಿಸುವ ವಿಧಾನ, ಬೇಕಾಗುವ ದಾಖಲೆಗಳು ಮತ್ತು ಇತರೆ ಮಾಹಿತಿಯನ್ನು ಈ ಕೇಳಗಿನಂತೆ ವಿವರಿಸಲಾಗಿದೆ.
- ಏನಿದು ಯುವನಿಧಿ ಯೋಜನೆ: ರಾಜ್ಯದ ನಿರುದ್ಯೋಗಿ ಪದವೀಧರರಿಗೆ ನಿರುದ್ಯೋಗ ಭತ್ಯೆ ನೀಡುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ‘ಯುವನಿಧಿ’.
- ಯುವನಿಧಿ ಯೋಜನೆ ಯಾರಿಗೆ ಸಿಗಲಿದೆ?: 2023 ರಲ್ಲಿ ಪದವಿ/ಡಿಪ್ಲೋಮಾ ಪಾಸಾಗಿ 6 ತಿಂಗಳಾದರೂ ಉದ್ಯೋಗ ಸಿಗದೇ ನಿರುದ್ಯೋಗಿಗಳಾಗಿರುವವರು ಅರ್ಜಿ ಸಲ್ಲಿಸಬಹುದು.
ಯುವನಿಧಿ ಯಾರಿಗೆ ಸಿಗುವುದಿಲ್ಲ?:
- ಸರ್ಕಾರಿ/ಸರ್ಕಾರಿ ಅನುದಾನಿತ ಸಂಸ್ಥೆ / ಖಾಸಗಿ ವಲಯದಲ್ಲಿ ಉದ್ಯೋಗ ಹೊಂದಿರುವ ಅಭ್ಯರ್ಥಿಗಳು
- ಸ್ವಯಂ ಉದ್ಯೋಗ ಹೊಂದಿರುವ ಅಭ್ಯರ್ಥಿಗಳು.
- ವಿದ್ಯಾಭ್ಯಾಸ ಮುಂದುವರೆಸುತ್ತಿರುವ ಅಭ್ಯರ್ಥಿಗಳು
ನಿರುದ್ಯೋಗ ಭತ್ಯೆ ವಿವರ:
ರಾಜ್ಯದಲ್ಲಿ 2023 ರಲ್ಲಿ ತೇರ್ಗಡೆಯಾದ ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ 3000 ರೂ. ಮತ್ತು ಡಿಪ್ಲೊಮಾ ಪಾಸಾದ ನಿರುದ್ಯೋಗಿಗಳಿಗೆ ಮಾಸಿಕ 1500 ರೂ. ರಂತೆ ನಿರುದ್ಯೋಗ ಭತ್ಯೆಯನ್ನು ಸರ್ಕಾರ ನೀಡುತ್ತದೆ.
2023 ರಲ್ಲಿ ತೇರ್ಗಡೆಯಾಗಿ, ತೇರ್ಗಡೆಯಾದ ದಿನಾಂಕದಿಂದ 180 ದಿನಗಳು ಕಳೆದರೂ ಉದ್ಯೋಗ ಸಿಗದ ಪದವೀಧರ ನಿರುದ್ಯೋಗಗಳಿಗೆ (ವೃತ್ತಿಪರ ಕೋರ್ಸ್ಗಳು ಸೇರಿದಂತೆ) ನಿರುದ್ಯೋಗ ಭತ್ಯೆಯನ್ನು ಉದ್ಯೋಗ ಸಿಗುವವರೆಗೆ ಅಥವಾ ಗರಿಷ್ಠ ಎರಡು ವರ್ಷಗಳ ಅವಧಿಗೆ ನೀಡಲಾಗುತ್ತದೆ.
Karnataka Yuva Nidhi Scheme 2023-24 ಷರತ್ತು ಮತ್ತು ನಿಬಂಧನೆಗಳು:
- ಪದವಿ ಹಾಗೂ ಡಿಪ್ಲೊಮಾ ಮುಗಿಸಿ 6 ತಿಂಗಳಾದರೂ ಉದ್ಯೋಗ ಲಭಿಸದೇ ಇರುವ ಕನ್ನಡಿಗರಿಗೆ (Domicile of Karnataka) ಮಾತ್ರ ಈ ಯೋಜನೆಯು ಅನ್ವಯವಾಗುತ್ತದೆ.
- ಈ ಸೌಲಭ್ಯವು ಎರಡು ವರ್ಷಗಳ ಅವಧಿಗೆ ಮಾತ್ರ ಅನ್ವಯಿಸುತ್ತದೆ, ಎರಡು ವರ್ಷಗಳ ಅವಧಿಯೊಳಗೆ ಉದ್ಯೋಗ ದೊರೆತಲ್ಲಿ ಫಲಾನುಭವಿಗೆ ಈ ಯೋಜನೆಯ ಸೌಲಭ್ಯವನ್ನು ಸ್ವಗಿತಗೊಳಿಸಲಾಗುವುದು.
- ಭತ್ಯಯನ್ನು DBT ಮೂಲಕ ಒದಗಿಸಲು ಉದ್ದೇಶಿಸಲಾಗಿದ್ದು, ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವುದು.
- ನಿರುದ್ಯೋಗ ಸ್ಥಿತಿಯ ಬಗ್ಗೆ ಸ್ವತಂತ್ರ ಪರಿಶೀಲನೆ ಇರಬೇಕು. ಉದ್ಯೋಗ ಪಡೆದ ನಂತರ ತಪ್ಪು ಘೋಷಣೆ ಅಥವಾ ಘೋಷಿಸಲು ವಿಫಲವಾದರೆ ದಂಡ ವಿಧಿಸಲಾಗುವುದು.
ಹಣ ವರ್ಗಾವಣೆಗೆ ಇವು ಮುಖ್ಯ:
- ನೇರ ನಗದು ವರ್ಗಾವಣೆ (Direct Benefit Transfer) ಸ್ವೀಕರಿಸಲು ಆಧಾರ್ ಸಂಖ್ಯೆಯೊಂದಿಗೆ ಸೇರ್ಪಡೆಯಾದ (Aadhar-seeded) ಬ್ಯಾಂಕ್ ಖಾತೆಯನ್ನು ನೀವು ಹೊಂದಿರಬೇಕು. (ನಿಮ್ಮ ಬ್ಯಾಂಕ್ ಖಾತೆಗೆ ಆಧಾರ ಲಿಂಕ್ ಆಗಿದೆಯಾ ಚೆಕ್ ಮಾಡಿ)
- Aadhar-linked mobile number ಅಂದರೆ ನಿಮ್ಮ ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಆಗಿರುವ ನಿಮ್ಮ ಮೊಬೈಲ್ ನಂಬರ್ ಅನ್ನು ನೀಡಬೇಕು.
Documents For Yuva Nidhi Scheme:
ಆನ್ಲೈನ್ನಲ್ಲಿ ಮಾಹಿತಿ ಲಿಂಕ್ ಆಗದೆ ಇದ್ದಲ್ಲಿ ಅಭ್ಯರ್ಥಿಗಳು ಈ ಕೆಳಗಿನ ದಾಖಲೆಗಳನ್ನು ಒದಗಿಸಬೇಕಾಗುತ್ತದೆ.
- ಎಸ್ಎಸ್ಎಲ್ಸಿ ಅಂಕಪಟ್ಟಿ,
- ಪಿಯುಸಿ ಅಂಕಪಟ್ಟಿ
- ಪದವಿ ಪ್ರಮಾಣ ಪತ್ರ/ಅಂಕಪಟ್ಟಿಗಳು
- ಡಿಪ್ಲೋಮಾ ಪ್ರಮಾಣ ಪತ್ರ ಅಥವಾ ಅಂಕಪಟ್ಟಿ
- ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ನೋಂದಣಿ ಸಂಖ್ಯೆ
ಅರ್ಜಿ ಸಲ್ಲಿಸುವುದು ಹೇಗೆ: ಅರ್ಹತೆ ಪರಿಶೀಲನೆಗಾಗಿ ‘ಸೇವಾ ಸಿಂಧು’ ಪೋರ್ಟಲ್ ನಲ್ಲಿ ಅಭ್ಯರ್ಥಿಗಳು ತಮ್ಮ ಪದವಿ/ ಡಿಪ್ಲೋಮಾ ನೋಂದಣಿ ಸಂಖ್ಯೆಯನ್ನು (ಐ.ಡಿ) ದಾಖಲಿಸಬೇಕಾಗಿರುತ್ತದೆ.
Yuva Nidhi Scheme ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 26-12-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ:
YuvaNidhi Karnataka ಪ್ರಮುಖ ಲಿಂಕ್ಗಳು:
ಅರ್ಜಿ ಸಲ್ಲಿಕೆ ಲಿಂಕ್: Apply Online
ಅಧಿಕೃತ ವೆಬ್ಸೈಟ್: sevasindhuservices.karnataka.gov.in
ಇತರೆ ಮಾಹಿತಿಗಳನ್ನು ಓದಿ