ಎಲ್ಲರಿಗೂ ನಮಸ್ಕಾರ, ರೋಲ್ಸ್ ರಾಯ್ಸ್ ಇಂಡಿಯಾ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬೇಕೆ..? Rolls-Royce Wings4Her Scholarship ಗೆ ಯಾರು ಅರ್ಜಿ ಸಲ್ಲಿಸಬಹುದು..? ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳೇನು..? ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ ಓದಿರಿ.
ರೋಲ್ಸ್ ರಾಯ್ಸ್ ಇಂಡಿಯಾ ಪ್ರೈ. ಲಿಮಿಟೆಡ್ ವತಿಯಿಂದ Rolls-Royce Wings4Her ವಿದ್ಯಾರ್ಥಿವೇತನವನ್ನು ವಿದ್ಯಾರ್ಥಿಗಳಿಗೆ ನೀಡುತ್ತಾರೆ. ಇಂಜಿನಿಯರಿಂಗ್ ಪದವಿ ಓದುತ್ತಿರುವ ಅರ್ಹ ವಿದ್ಯಾರ್ಥಿನಿಯರಿಗೆ ಹಣಕಾಸಿನ ನೆರವು ನೀಡಲು. ಈ ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು ರೂಪಿಸಲಾಗಿದೆ.
ಭಾರತದಲ್ಲಿ AICTE- ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ 1, 2, ಅಥವಾ 3 ನೇ ವರ್ಷದ ಎಂಜಿನಿಯರಿಂಗ್ ಪದವಿ ಕೊರ್ಸ ಗಳಿಗೆ ದಾಖಲಾದ ಮಹಿಳಾ ವಿದ್ಯಾರ್ಥಿನಿಯರನ್ನು ಬೆಂಬಲಿಸುವ ಗುರಿಯನ್ನು ಈ ಸ್ಕಾಲರ್ಶಿಪ್ ಹೊಂದಿದೆ. ಅರ್ಜಿ ಸಲ್ಲಿಸಿದ ವಿದ್ಯಾರ್ಥಿನಿಯರಿಗೆ 35,000 ರೂ. ವಿದ್ಯಾರ್ಥಿವೇತನ ದೊರೆಯಲಿದೆ.
Rolls-Royce Wings4Her Scholarship 2024 ಅರ್ಹತೆಗಳು:
- ಎಐಸಿಟಿಇ-ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಇಂಜಿನಿಯರಿಂಗ್ ಪದವಿ ಕಾರ್ಯಕ್ರಮದ (ಏರೋಸ್ಪೇಸ್, ಮೆರೈನ್, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ಗಳು ಇತ್ಯಾದಿ ಕ್ಷೇತ್ರಗಳಲ್ಲಿ) 1ನೇ/2ನೇ/3ನೇ ವರ್ಷಕ್ಕೆ ದಾಖಲಾದ ಹೆಣ್ಣು ವಿದ್ಯಾರ್ಥಿನಿಯರು ಅರ್ಹರು.
- 10th ಹಾಗೂ 12th ಪರೀಕ್ಷೆಗಳಲ್ಲಿ 60% ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರಬೇಕು.
- ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ವಾರ್ಷಿಕ 4 ಲಕ್ಷವನ್ನು ಮೀರಬಾರದು.
ಪ್ರಯೋಜನಗಳು:
ರೋಲ್ಸ್ ರಾಯ್ಸ್ ವಿಂಗ್ಸ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿನಿಯರಿಗೆ 35,000 ರೂ. ಸ್ಕಾಲರ್ಶಿಪ್ ದೊರೆಯಲಿದೆ. ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ಇದರ ಲಾಭ ಪಡೆದುಕೊಳ್ಳಬಹುದು.
Rolls-Royce Wings4Her Scholarship 2024 ಅಗತ್ಯ ದಾಖಲೆಗಳು:
- ಪಾಸ್ಪೋರ್ಟ್ ಅಳತೆಯ ಪೋಟೋ
- ಆಧಾರ್ ಕಾರ್ಡ್
- ಪ್ರಸ್ತುತ ಶೈಕ್ಷಣಿಕ ವರ್ಷದ ಪ್ರವೇಶ ಪುರಾವೆ
- 10th ಮತ್ತು 12th ಅಂಕಪಟ್ಟಿ (ಸ್ವಯಂ-ದೃಢೀಕರಿಸಿದ ಪ್ರತಿ)
- ಅರ್ಜಿದಾರರ ಹಿಂದಿನ ಶೈಕ್ಷಣಿಕ ವರ್ಷದ ಅಂಕಪಟ್ಟಿ (2023-24)
- ಅರ್ಜಿದಾರರ ಬ್ಯಾಂಕ್ ಖಾತೆ ವಿವರಗಳು (ರದ್ದಾದ ಚೆಕ್/ಪಾಸ್‌ಬುಕ್ ಪ್ರತಿ)
- ಕುಟುಂಬದ ಆದಾಯ ಪುರಾವೆ
ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 05-09-2024
ಪ್ರಮುಖ ಲಿಂಕ್’ಗಳು:
Scholarship Apply Online ಲಿಂಕ್: Apply ಮಾಡಿ
ಇತರೆ ಮಾಹಿತಿಗಳನ್ನು ಓದಿ: