ಗಂಗಾ ಕಲ್ಯಾಣ ನೀರಾವರಿ ಯೋಜನೆ: 4.75 ಲಕ್ಷ ಸಹಾಯಧನ | Ganga Kalyana Yojane Online Application 2024 Apply Online

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ರಾಜ್ಯ ಸರ್ಕಾರವು ರೈತರಿಗೆ ಗುಡ್ ನ್ಯೂಸ್ ನೀಡಿದೆ. ವಿವಿಧ ನಿಗಮಗಳ ವತಿಯಿಂದ Ganga Kalyana Yojane ಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಹಾಗೂ ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ ಓದಿರಿ.

ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಗಂಗಾ ಕಲ್ಯಾಣ ನೀರಾವರಿ ಯೋಜನೆಯಡಿ ವೈಯಕ್ತಿಕ ಕೊಳವೆ ಬಾವಿಯನ್ನು ಕೊರೆದು, ಪಂಪ್ ಮೋಟಾ‌ರ್ ಹಾಗೂ ವಿದ್ಯುದ್ದೀಕರಣ ಮಾಡಿ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯವನ್ನು ಒದಗಿಸುವ ಈ ಯೋಜನೆಯಡಿಯಲ್ಲಿ ಸಂಪೂರ್ಣ ಸಹಾಯಧನವನ್ನು ರೈತರು ಪಡೆಯಬಹುದಾಗಿದೆ.

Ganga Kalyana Yojane Karnataka 2024:

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳಿಗೆ ವೈಯಕ್ತಿಕ ಕೊಳವೆ ಬಾವಿ ಯೋಜನೆಗೆ ಒಟ್ಟು ಘಟಕ ವೆಚ್ಚ 4.75 ಲಕ್ಷ ಇದರಲ್ಲಿ ವಿದ್ಯುದ್ದೀಕರಣ ವೆಚ್ಚ ಪ್ರತಿ ಕೊಳವೆ ಬಾವಿಗೆ 75,000 ರೂ. ಗಳನ್ನು ಎಸ್ಕಾಂಗಳಿಗೆ ಪಾವತಿ ಮಾಡಲಾಗುವುದು. ಇನ್ನುಳಿದ ಜಿಲ್ಲೆಗಳಿಗೆ ರೂ.3.75 ಲಕ್ಷ ಇದರಲ್ಲಿ ವಿದ್ಯುದ್ದೀಕರಣ ವೆಚ್ಚ ಪ್ರತಿ ಕೊಳವೆ ಬಾವಿಗೆ 75,000 ರೂ. ಗಳನ್ನು ಎಸ್ಕಾಂಗಳಿಗೆ ಪಾವತಿಸಲಾಗುವುದು. ಘಟಕ ಪೂರ್ಣಗೊಳಿಸಲು ಸಾಧ್ಯವಾಗದಿದ್ದಲ್ಲಿ ರೂ. 50 ಸಾವಿರ ರೂ. ಗಳ ಸಾಲವನ್ನು ಶೇ.4 ರ ಬಡ್ಡಿದರದಲ್ಲಿ ನೀಡುತ್ತಾರೆ

ಉಡುಪಿ, ದಕ್ಷಿಣ ಕನ್ನಡ, ಕೊಡಗು, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳ ರೈತರು ಕನಿಷ್ಠ 1 ಎಕರೆ ಜಮೀನು ಹೊಂದಿರಬೇಕು. ಇತರೆ ಜಿಲ್ಲೆಗಳಲ್ಲಿ ಒಂದೇ ಸ್ಥಳದಲ್ಲಿ ಇರುವ ಕನಿಷ್ಠ 2 ಎಕರೆ, ಹಾಗೂ ಗರಿಷ್ಠ 5 ಎಕರೆ ಜಮೀನು ಹೊಂದಿರಬೇಕು.

ಅರ್ಹತೆಗಳು:

  • ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
  • ಸಣ್ಣ ಮತ್ತು ಅತಿ ಸಣ್ಣ ರೈತರಾಗಿರಬೇಕು.
  • ಅರ್ಜಿದಾರರ ವಯಸ್ಸು 18 ರಿಂದ 60 ವರ್ಷದೊಳಗಿರಬೇಕು
  • ಕುಟುಂಬ ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶದವರಿಗೆ 98,000 ರೂ. ಹಾಗೂ ಪಟ್ಟಣ ಪ್ರದೇಶದವರಿಗೆ 1.20,000 ರೂ. ಗಳ ಒಳಗಿರಬೇಕು.

Ganga Kalyana Scheme 2024 ಅಗತ್ಯ ದಾಖಲೆಗಳು:

  • ರೇಷನ್ ಕಾರ್ಡ್
  • ಆಧಾರ್ ಕಾರ್ಡ್ ಪ್ರತಿ
  • ಇತ್ತೀಚಿನ RTC
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಸಣ್ಣ / ಅತಿ ಸಣ್ಣ ಹಿಡುವಳಿದಾರ ದೃಢೀಕರಣ ಪತ್ರ
  • ಬ್ಯಾಂಕ್ ಪಾಸ್ ಬುಕ್ ಪ್ರತಿ
  • ಸ್ವಯಂ ಘೋಷಣಾ ಪತ್ರ
  • ಅರ್ಜಿದಾರರ ಪೋಟೋ
  • ಭೂ ಕಂದಾಯ ಪಾವತಿಸಿದ ರಸೀದಿ
  • ಜಾಮೀನುದಾರರ ಸ್ವಯಂ ಘೋಷಣಾ ಪತ್ರ

ಪ್ರಮುಖ ದಿನಾಂಕಗಳು:
ಗಂಗಾ ಕಲ್ಯಾಣ ಯೋಜನೆ (Ganga Kalyana Yojane) ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-09-2024

ಪ್ರಮುಖ ಲಿಂಕ್ ಗಳು:
ಆನ್‌ಲೈನ್ ಅರ್ಜಿ ಸಲ್ಲಿಕೆ ಲಿಂಕ್: Apply ಮಾಡಿ
ಅಧಿಕೃತ ವೆಬ್‌ಸೈಟ್‌: sevasindhu.karnataka.gov.in, sevasindhuservices.karnataka.gov.in

ಇತರೆ ಮಾಹಿತಿಗಳನ್ನು ಓದಿ:

ಕೃಷಿ ಭಾಗ್ಯ ಯೋಜನೆ: ರೈತರಿಗೆ ಶೇ.90 ರಷ್ಟು ಸಹಾಯಧನ

ಸ್ವಾವಲಂಬಿ ಸಾರಥಿ ಯೋಜನೆ: 3 ಲಕ್ಷ ರೂ. ಸಹಾಯಧನ

ಉಚಿತ ಹೊಲಿಗೆ ಯಂತ್ರ ಯೋಜನೆ 2024

ಗೃಹಲಕ್ಷ್ಮೀ ಯೋಜನೆಯ 2000 ರೂ. ಹಣ ಜಮಾ, DBT Status ಚೆಕ್ ಮಾಡಿ

Leave a Comment