ಎಲ್ಲರಿಗೂ ನಮಸ್ಕಾರ, ಕೇಂದ್ರ ಸರ್ಕಾರವು ರೈತರಿಗಾಗಿ PM ಕಿಸಾನ್ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ರೈತರಿಗೆ ವಾರ್ಷಿಕವಾಗಿ 6,000 ರೂ. ಗಳನ್ನು ಮೂರು ಕಂತುಗಳಲ್ಲಿ ನಾಲ್ಕು ತಿಂಗಳಿಗೊಮ್ಮೆ 2000 ರೂ. ರಂತೆ ಅರ್ಹ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತದೆ. ರೈತರು ಕೂಡಲೆ PM Kisan eKYC ಮಾಡಿಸುವುದು ಕಡ್ಡಾಯವಾಗಿದೆ.
P.M ಕಿಸಾನ್ ಯೋಜನೆಯ ಅಡಿಯಲ್ಲಿ ರೈತರು ತಮ್ಮ ಅರ್ಜಿಯನ್ನು ನೊಂದಣಿ ಮಾಡಿಸುವ ಸಮಯದಲ್ಲಿ ತಮ್ಮ ಆಧಾರ್ ಗೆ ಲಿಂಕ್ ಇರುವ ಮೋಬೈಲ್ ನಂಬರ್ ಅನ್ನು ಸೇರಿಸುವ ಬದಲು ಬೇರೆಯವರ ಮೋಬೈಲ್ ನಂಬರ್ ಅನ್ನು ಸೇರಿಸಿ ನೋಂದಣಿ ಯಾಗಿದ್ದರೆ ಅಥವಾ ನೋಂದಣಿಯಾದ ನಂತರ ನೋಂದಣಿ ಸಮಯದಲ್ಲಿ ನೀಡಿರುವ ಮೊಬೈಲ್ ನಂಬರ್ ಕಳೆದು ಹೋಗಿದ್ದರೆ, ಹೊಸ ಮೊಬೈಲ್ ನಂಬರ್ ಅನ್ನು ತೆಗೆದುಕೊಂಡಿದ್ದರೆ ಅಂತರು ತಮ್ಮ ಚಾಲ್ತಿಯಲ್ಲಿರುವ ನಂಬರ್ ಅನ್ನು ನೀಡಿ ಲಿಂಕ್ ಮಾಡಿಸಲು ಅವಕಾಶ ನೀಡಲಾಗಿದೆ.
PM Kisan eKYC Online:
ಪಿ.ಎಂ.ಕಿಸಾನ್ ಯೋಜನೆಯಡಿ ನೊಂದಾಯಿಸಿಕೊಂಡಿರುವ ರೈತರಿಗೆ ತಮ್ಮ ಮೊಬೈಲ್ ನಂಬರ್ ಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಕೇಂದ್ರ ಸರ್ಕಾರವು PM ಕಿಸಾನ್ ಪೋರ್ಟಲ್‌ನಲ್ಲಿ ಅವಕಾಶವನ್ನು ನೀಡಿದೆ. ಫಲಾನುಭವಿಗಳು ತಮ್ಮ ಆಧಾರ್ ಕಾರ್ಡಗೆ ಲಿಂಕ್ ಇರುವ ಮೊಬೈಲ್ ನಂಬರ್ ಅನ್ನು ತಿದ್ದುಪಡಿ ಮಾಡಿಸಿಕೊಳ್ಳಲು ಅಪ್‍ಡೇಟ್ ಮೋಬೈಲ್ ನಂಬರ್ https://www.pmkisan.gov.in/MobileUpdation_Pub.aspx ಎಂಬ ಆಯ್ಕೆಯನ್ನು ನೀಡಿದೆ.
ಈ ಮೇಲೆ ನೀಡಿರುವ ಲಿಂಕ್ ಮೂಲಕ ಫಲಾನುಭವಿಗಳು ತಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಇರುವ ಮೊಬೈಲ್ ನಂಬರ್ ಅನ್ನು ತಿದ್ದುಪಡಿ ಮಾಡಿಸಿಕೊಳ್ಳಬೇಕು. P.M ಕಿಸಾನ್ ಯೋಜನೆಯ ಅಡಿಯಲ್ಲಿ ಹೊಸದಾಗಿ ನೋಂದಣಿ ಮಾಡಿಕೊಂಡ ಫಲಾನುಭವಿಗಳು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಿಕೊಳ್ಳಬೇಕು.
ಪಿ.ಎಂ.ಕಿಸಾನ್ ಯೋಜನೆಯಡಿ (PM Kisan eKYC) ನೊಂದಾಯಿತ ರೈತರು ಇ-ಕೆವೈಸಿ ಹಾಗೂ ಮೋಬೈಲ್ ನಂಬರ್ ಅನ್ನು ಸೆಪ್ಟಂಬರ್ 10 ರ ಒಳಗಾಗಿ ತಿದ್ದುಪಡಿ ಮಾಡಿಸಿಕೊಳ್ಳಬೇಕು. ಇ-ಕೆವೈಸಿ ಮತ್ತು ಮೋಬೈಲ್ ನಂಬರ್ ಲಿಂಕ್ ಇರದ ಫಲಾನುಭವಿಗಳಿಗೆ ಮುಂದಿನ ಕಂತಿನ ಹಣವನ್ನು ಸ್ಥಗಿತಗೊಳಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ರೈತರು ಹೆಚ್ಚಿನ ಮಾಹಿತಿಗಾಗಿ ನಿಮ್ಮ ಸಮೀಪದ ರೈತ ಸಂಪರ್ಕ ಕೇಂದ್ರಗಳಿಗೆ ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳಿಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಇತರೆ ಮಾಹಿತಿಗಳನ್ನು ಓದಿ: