ಎಲ್ಲರಿಗೂ ನಮಸ್ಕಾರ, ಬಡತನ ರೇಖೆಗಿಂತ ಕೆಳಗಿರುವವರಿಗೆ ಸರ್ಕಾರವು ಪಡಿತರ ಚೀಟಿ (Ration Card) ಯನ್ನು ನೀಡುತ್ತದೆ. ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಅನ್ನಭಾಗ್ಯ ಯೋಜನೆಯು ಒಂದಾಗಿದೆ. ರೇಷನ್ ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ ಪ್ರತಿ ತಿಂಗಳು ಉಚಿತವಾಗಿ ಅಕ್ಕಿಯನ್ನು ನೀಡುತ್ತಾರೆ.
ಸರ್ಕಾರವು ಈ ಹಿಂದೆ ನೀಡುತ್ತಿದ್ದ ಅಕ್ಕಿ ಹಣದ ಬದಲಿಗೆ ಫುಡ್ ಕಿಟ್ ನೀಡಲು ಚಿಂತನೆ ನಡೆದಿತ್ತು. ಆದರೆ ಈಗ ಅನ್ನ ಭಾಗ್ಯ ಯೋಜನೆಯಲ್ಲಿ ಅನಗತ್ಯ ಗೊಂದಲ ಸೃಷ್ಟಿಗೆ ಕಾರಣವಾಗಬಹುದು ಎಂಬ ಕಾರಣಕ್ಕೆ ಅಕ್ಟೋಬರ್ ತಿಂಗಳಿಂದ BPL ಕಾರ್ಡ್ (BPL Ration Card) ಕುಟುಂಬಗಳಿಗೆ ‘ಫುಡ್ ಕಿಟ್’ ವಿತರಿಸುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪ್ರಸ್ತಾವನೆಯನ್ನು ಸಂಪುಟ ಕೈಬಿಟ್ಟಿದೆ.
ಸರ್ಕಾರವು ಮೂದಲಿನಂತೆ ತಲಾ 5 KG ಅಕ್ಕಿ, ಹಾಗೂ ಉಳಿದ ಐದು ಕೆ.ಜಿ ಅಕ್ಕಿಯ ಬದಲಿಗೆ 170 ರೂ. ಅಂತೆ ಹಣವನ್ನು ನೇರ ವರ್ಗಾವಣೆಯನ್ನು ಮುಂದುವರಿಸಲು ಸಂಪುಟ ಸಭೆಯು ನಿರ್ಧರಿಸಿದೆ.
Ration Card Food Kit Karnataka:
5 KG ಅಕ್ಕಿ ಜೊತೆಗೆ ಅರ್ಧ ಕಿಲೋ ತೊಗರಿ ಬೇಳೆ, ಅರ್ಧ ಲೀಟರ್ ಅಡುಗೆ ಎಣ್ಣೆ ಮತ್ತು ಅರ್ಧ ಕಿಲೋ ಸಕ್ಕರೆ ಒಳಗೊಂಡಿರುವ ಫುಡ್ ಕಿಟ್ ನೀಡಬೇಕಾ. ಅಥವಾ 5 KG ಅಕ್ಕಿಯ ಹಣ 170 ರೂ. DBT ವ್ಯವಸ್ಥೆಯನ್ನು ಮುಂದುವರಿಸುವುದೇ ಎಂಬುದರ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಿತು.
ಫುಡ್ ಕಿಟ್ ನೀಡುವುದು ಬೇಡ ಎಂದು ಬಹುತೇಕ ಸಚಿವರು ವಾದಿಸಿದ ಹಿನ್ನೆಲೆಯಲ್ಲಿ ಈ ಹಿಂದೆ ನೀಡುತ್ತಿದ್ದ ವ್ಯವಸ್ಥೆ ಮುಂದುವರೆಸುವಂತೆ ಸಿಎ ಸಿದ್ದರಾಮಯ್ಯ ಸೂಚಿಸಿದ್ದಾರೆ. ಪಡಿತರ ಚೀಟಿದಾರರಿಗೆ ಮುಂದೆಯೂ 5 KG ಅಕ್ಕಿ ಜೊತೆಗೆ 5 KG ಅಕ್ಕಿಯ ಬದಲಿಗೆ ಹಣ 170 ರೂ. ನಂತೆ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ.
ಇತರೆ ಮಾಹಿತಿಗಳನ್ನು ಓದಿ: