ವಿದ್ಯಾರ್ಥಿಗಳಿಗೆ ವಾರ್ಷಿಕ 1,05,000 ರೂ. ವಿದ್ಯಾರ್ಥಿವೇತನ | Sensodyne IDA Shining Star Scholarship 2024 Apply Online @buddy4study

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಕಾಯುತ್ತಿದ್ದೀರಾ..? Shining Star Scholarship ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಎಷ್ಟು ಶಿಷ್ಯವೇತನ ದೊರೆಯಲಿದೆ..? ಯಾವ ಕೋರ್ಸ್ ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ ಓದಿರಿ.

ಸೆನ್ಸೊಡೈನ್ ಐಡಿಎ ಶೈನಿಂಗ್ ಸ್ಟಾರ್ ವಿದ್ಯಾರ್ಥಿವೇತನವನ್ನು ಭಾರತದಲ್ಲಿನ ಪ್ರತಿಭಾವಂತ, ಹಿಂದುಳಿದ ವಿದ್ಯಾರ್ಥಿಗಳಿಗೆ ಆರ್ಥಿಕ ಬೆಂಬಲವನ್ನು ನೀಡುವ ಗುರಿಯನ್ನು ಹೊಂದಿದೆ. ನೀವು ಕೂಡ ಸೆನ್ಸೋಡೈನ್ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಿ ಇದರ ಲಾಭವನ್ನು ಪಡೆದುಕೊಳ್ಳಬಹುದು.

ಸೆನ್ಸೊಡೈನ್ ಐಡಿಎ ಶೈನಿಂಗ್ ಸ್ಟಾರ್ ಸ್ಕಾಲರ್‌ಶಿಪ್ ಅನ್ನು ಸರ್ಕಾರಿ ಅಥವಾ ಸರ್ಕಾರಿ-ಅನುದಾನಿತ ಕಾಲೇಜುಗಳಲ್ಲಿ 4-ವರ್ಷದ ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ (BDS) ಕೋರ್ಸ್‌ಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿವೇತನವನ್ನು ನೀಡುತ್ತಾರೆ.

Sensodyne IDA Shining Star Scholarship ಅರ್ಹತೆಗಳು:

  • ವಿದ್ಯಾರ್ಥಿಯು ಸರ್ಕಾರಿ/ಸರ್ಕಾರಿ ಅನುದಾನಿತ ಕಾಲೇಜುಗಳಿಂದ ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ (BDS) ಕೊರ್ಸ್ ಗಳಲ್ಲಿ ಮೊದಲ ವರ್ಷದಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಅರ್ಹರು.
  • ಹೈಯರ್ ಸೆಕೆಂಡರಿ ಶಿಕ್ಷಣದಲ್ಲಿ ಕನಿಷ್ಠ 60% ಅಂಕಗಳನ್ನು ಪಡೆದಿರಬೇಕು.
  • ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯವು 8 ಲಕ್ಷ ಮೀರಿರಬಾರದು.
  • ಪ್ಯಾನ್-ಇಂಡಿಯಾ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.
  • Haleon, IDA, Give India, ಮತ್ತು Buddy4Study ಉದ್ಯೋಗಿಗಳ ಮಕ್ಕಳು ಅಥವಾ ಕುಟುಂಬದ ಸದಸ್ಯರು ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಅರ್ಹರಲ್ಲ.

ಪ್ರಯೋಜನಗಳು:
ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಅವರ ಶೈಕ್ಷಣಿಕ ಮತ್ತು ಜೀವನ ವೆಚ್ಚಗಳನ್ನು ಸರಿದೂಗಿಸಲು 4 ವರ್ಷಗಳವರೆಗೆ 4,20,000 ರೂ. ವರ್ಷಕ್ಕೆ 1,05,000 ರೂ. ಹಣಕಾಸಿನ ನೆರವು ನೀಡುತ್ತಾರೆ.

ಅಗತ್ಯ ದಾಖಲೆಗಳು:

  • ಅರ್ಜಿದಾರರ ಪೋಟೋ
  • ಆದಾಯ ಪ್ರಮಾಣಬುಕ್
  • ಹಿಂದಿನ ತರಗತಿ/ಸೆಮಿಸ್ಟರ್‌ನ ಅಂಕಪಟ್ಟಿ
  • ಗುರುತಿನ ಪುರಾವೆ (ಆಧಾರ್/ವೋಟರ್ ಐಡಿ/ಚಾಲನಾ ಪರವಾನಗಿ/ಪ್ಯಾನ್ ಕಾರ್ಡ್)
  • ಪ್ರಸ್ತುತ ವರ್ಷದ ಪ್ರವೇಶ ಪುರಾವೆ (ಶುಲ್ಕ ರಸೀದಿ/ಪ್ರವೇಶ ಪತ್ರ/ಸಂಸ್ಥೆಯ ಗುರುತಿನ ಚೀಟಿ/ ಬೋನಾಫೈಡ್ ಪ್ರಮಾಣಪತ್ರ)
  • ವಿದ್ಯಾರ್ಥಿಯ ಅಥವಾ ಪೋಷಕರ ಬ್ಯಾಂಕ್ ಪಾಸ್ ಬುಕ್

ಅರ್ಜಿ ಸಲ್ಲಿಕೆ ದಿನಾಂಕ:
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 31-10-2024

ಪ್ರಮುಖ ಲಿಂಕ್’ಗಳು:
Shining Star Scholarship 2024 Apply Online ಲಿಂಕ್:‌ Apply ಮಾಡಿ

SSP Scholarship 2024 For OBC:

SSP ಮೆಟ್ರಿಕ್ ನಂತರ ಶುಲ್ಕ ಮರುಪಾವತಿ ಯೋಜನೆ

ಸಂತೂರ್ ವಿದ್ಯಾರ್ಥಿವೇತನ 2024

Leave a Comment