ಎಲ್ಲರಿಗೂ ನಮಸ್ಕಾರ, ರಾಜ್ಯದಲ್ಲಿ 22 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್ ಗಳು ಪತ್ತೆಯಾಗಿದ್ದು, ಅನರ್ಹ BPL ಕಾರ್ಡ್ (BPL Ration Card) ಹೊಂದಿದವರಿಗೆ ರಾಜ್ಯ ಸರ್ಕಾರವು ಬಿಗ್ ಶಾಕ್ ನೀಡಿದೆ. ಅನರ್ಹ ಬಿಪಿಎಲ್ ಕಾರ್ಡ್ ಗಳನ್ನು ರದ್ದುಪಡಿಸಲು ಆಹಾರ ಇಲಾಖೆಯು ಮುಂದಾಗಿದೆ.
ಬಡತನ ರೇಖೆಗಿಂತ ಕೆಳಗಿರುವವರಿಗೆ ಸರ್ಕಾರ ಪಡಿತರ ಚೀಟಿಯನ್ನು ನೀಡುತ್ತದೆ. ಆದರೆ ಆರ್ಥಿಕವಾಗಿ ಸಭಲಾಗಿದ್ದರು ಸಹ ಸುಳ್ಳು ದಾಖಲೆಯನ್ನು ನೀಡಿ ರೇಷನ್ ಕಾರ್ಡ್ ಅನ್ನು ಪಡೆದುಕೊಂಡಿದ್ದಾರೆ. ಅಂತವರ ಕಾರ್ಡ್ ಗಳನ್ನು ಸರ್ಕಾರ ರದ್ದುಪಡಿಸುತ್ತಿದೆ.
Karnataka BPL Ration Card Cancellation:
ರಾಜ್ಯದಲ್ಲಿನ ಅನರ್ಹ ರೇಷನ್ ಕಾರ್ಡ್ ಹೊಂದಿರುವ ಅನರ್ಹಫಲಾನುಭವಿಗಳನ್ನು ಪತ್ತೆ ಹಚ್ಚಲು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ಮುಂದಾಗಿದೆ. ಸುಳ್ಳು ದಾಖಲೆಯನ್ನು ನೀಡಿ ರೇಷನ್ ಕಾರ್ಡ್ (BPL Ration Card) ಪಡೆದವರಿಗೆ ನಡುಕ ಶುರುವಾಗಿದೆ. ಅನರ್ಹ ಬಿಪಿಎಲ್ ಕಾರ್ಡ್ ಹೊಂದಿದವರು ಇದುವರೆಗೂ ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡೆದರುವ ಅಕ್ಕಿ ಹಾಗೂ ಇತರೆ ಧಾನ್ಯಗಳ ಹಣವನ್ನು ಮರಳಿಸಬೇಕು ಜೊತೆಗೆ ಕ್ರಿಮಿನಲ್ ಕೇಸ್ ಎದುರಸಬೇಕಾಗುತ್ತದೆ.
ರಾಜ್ಯದಲ್ಲಿ 22,62,413 ಅನರ್ಹ BPL ಹಾಗೂ ಅಂತ್ಯೋದಯ ಕಾರ್ಡುಗಳು ಇರುವುದನ್ನು ಇ ತಂತ್ರಾಂಶದ ಮೂಲಕ ಪತ್ತೆ ಮಾಡಲಾಗಿದೆ. ಪಡಿತರ ಚೀಟಿಗೆ ಸರ್ಕಾರವು ನಿಗದಿಪಡಿಸಿರುವ ಮಾನದಂಡಗಳಿಗೆ ವಿರುದ್ಧವಾಗಿ ಪಡೆದಿರುವ ಅನರ್ಹ ರೇಷನ್ ಕಾರ್ಡ್ ವಿವರ ನೀಡುವಂತೆ ಆಹಾರ ಇಲಾಖೆ ಇ- ಆಡಳಿತ ಕೇಂದ್ರಕ್ಕೆ ಮನವಿ ಮಾಡಿದ್ದು, ಇ ತಂತ್ರಾಂಶದಿಂದ ಲಭ್ಯವಾದ ಮಾಹಿತಿಯ ಅನ್ವಯ 10,97,621 BPL, ಹಾಗೂ ಅಂತ್ಯೋದಯ ಕಾರ್ಡ್ ಗಳು ಇರುವುದು ಪತ್ತೆಯಾಗಿವೆ.
10,54,368 ರೇಷನ್ ಕಾರ್ಡ್ ಗಳನ್ನು 1.20 ಲಕ್ಷ ಅಧಿಕ ಆದಾಯ ಪಡೆಯುತ್ತಿರುವವರು ಹೊಂದಿದ್ದಾರೆ. 1,06,152 ಕಾರ್ಡ್ ಗಳನ್ನು ಆದಾಯ ತೆರಿಗೆ ಪಾವತಿದಾರರು ಪಡೆದುಕೊಂಡಿದ್ದಾರೆ. 4272 ರೇಷನ್ ಕಾರ್ಡಗಳು ಕೆಜಿಐಡಿ ಹೆಚ್.ಆರ್.ಎಂ.ಎಸ್.ನಲ್ಲಿ ಜೋಡಣೆ ಆಗಿರುವುದನ್ನು ಕುಟುಂಬ ತಂತ್ರಾಂಶದಲ್ಲಿ ಇ- ಆಡಳಿತ ಕೇಂದ್ರ ಪತ್ತೆ ಮಾಡಿದೆ.
ಸರ್ಕಾರದ ಮಾನದಂಡಗಳ ಪ್ರಕಾರ ಆದಾಯ ತೆರಿಗೆ ಪಾವತಿಸುವವರು, ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರು, ಹಾಗೂ ಶ್ರೀಮಂತರು, 7.5 ಎಕರೆಗಿಂತ ಹೆಚ್ಚು ಭೂಮಿ ಹೊಂದಿರುವವರು ಬಿಪಿಎಲ್ ಕಾರ್ಡ್ ಗಳನ್ನು ಪಡೆಯುವಂತಿಲ್ಲ. ಆದರು ಸಹ ಸುಳ್ಳು ಮಾಹಿತಿಯನ್ನು ನೀಡಿ ರೇಷನ್ ಕಾರ್ಡ್ ಪಡೆದುಕೊಂಡಿದ್ದಾರೆ. ಅನರ್ಹ ಫಲಾನುಭವಿಗಳ ಪಡಿತರ ಚೀಟಿಯನ್ನು ರದ್ದುಪಡಿಸುವ ಕಾರ್ಯಕ್ಕೆ ಆಹಾರ ಇಲಾಖೆಯು ಮುಂದಾಗಿದೆ.
ಇತರೆ ಮಾಹಿತಿಗಳನ್ನು ಓದಿ: