ಆದಿತ್ಯ ಬಿರ್ಲಾ ಕ್ಯಾಪಿಟಲ್ ವಿದ್ಯಾರ್ಥಿವೇತನ 2024, 60,000 ರೂ. ಸ್ಕಾಲರ್ಶಿಪ್ ಪಡೆಯಿರಿ | Aditya Birla Capital Scholarship 2024 Apply Online @www.buddy4study.com

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ಆದಿತ್ಯ ಬಿರ್ಲಾ ಕ್ಯಾಪಿಟಲ್ ವಿದ್ಯಾರ್ಥಿವೇತನಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. Aditya Birla Capital Scholarship ಗೆ ಅರ್ಹ ಮತ್ತು ಆಸಕ್ತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅರ್ಹತೆಗಳೇನು..? ಯಾರು ಅರ್ಜಿ ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಬಹುದು..? ಅಗತ್ಯ ದಾಖಲೆಗಳೇನು..? ಎಂಬ ಮಾಹಿತಿಯನ್ನು ನೀಡಲಿದ್ದೇವೆ ಓದಿರಿ.

ಆದಿತ್ಯ ಬಿರ್ಲಾ ಕ್ಯಾಪಿಟಲ್ ಫೌಂಡೇಶನ್‌ ವತಿಯಿಂದ ಆದಿತ್ಯ ಬಿರ್ಲಾ ಕ್ಯಾಪಿಟಲ್ ವಿದ್ಯಾರ್ಥಿವೇತನವನ್ನು ನೀಡುತ್ತಾರೆ. ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಅವರ ಶಿಕ್ಷಣವನ್ನು ಮುಂದುವರೆಸಲು ಹಣಕಾಸಿನ ನೆರವು ಮತ್ತು ಮಾರ್ಗದರ್ಶನ ಬೆಂಬಲವನ್ನು ಒದಗಿಸುವ ಗುರಿಯನ್ನು ಈ ವಿದ್ಯಾರ್ಥಿವೇತನ ಕಾರ್ಯಕ್ರಮ ಹೊಂದಿದೆ.

9ನೇ ತರಗತಿ ಯಿಂದ 12 ನೇ ತರಗತಿಯ ವಿದ್ಯಾರ್ಥಿಗಳು ಅಥವಾ ಪದವಿ ಕೋರ್ಸ್‌ಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಆದಿತ್ಯ ಬಿರ್ಲಾ ಕ್ಯಾಪಿಟಲ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿ ಈ ಸ್ಕಾಲರ್ಶಿಪ್ ನ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ವಿದ್ಯಾರ್ಥಿವೇತನದ ಪ್ರಯೋಜನಗಳು:

  • 9 ನೇ ತರಗತಿ ಯಿಂದ 12 ನೇ ತರಗತಿ ವಿದ್ಯಾರ್ಥಿಗಳಿಗೆ: 12,000 ರೂ.
  • ಸಾಮಾನ್ಯ ಪದವಿ ವಿದ್ಯಾರ್ಥಿಗಳಿಗೆ: 18,000 ರೂ.
  • ವೃತ್ತಿಪರ ಪದವಿ (3 ವರ್ಷಗಳು) ವಿದ್ಯಾರ್ಥಿಗಳಿಗೆ: 48,000 ರೂ.
  • ವೃತ್ತಿಪರ ಪದವಿ (4 ವರ್ಷಗಳು) ವಿದ್ಯಾರ್ಥಿಗಳಿಗೆ: 60,000 ರೂ.

Aditya Birla Capital Scholarship ಅರ್ಹತೆಗಳು:

  • 9 ರಿಂದ 12 ನೇ ತರಗತಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮುಕ್ತವಾಗಿದೆ.
  • ಭಾರತದಲ್ಲಿ ಮಾನ್ಯತೆ ಪಡೆದ ಕಾಲೇಜುಗಳು/ವಿಶ್ವವಿದ್ಯಾನಿಲಯಗಳಿಂದ ಯಾವುದೇ ಸಾಮಾನ್ಯ ಪದವಿ ಕೊರ್ಸ್, 3 ವರ್ಷಗಳು ವೃತ್ತಿಪರ ಪದವಿ, ಹಾಗೂ 4 ವರ್ಷಗಳು ವೃತ್ತಿಪರ ಪದವಿ ಕೋರ್ಸ್‌ಗಳ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
  • ವಿದ್ಯಾರ್ಥಿಗಳ ಹಿಂದಿನ ತರಗತಿಯಲ್ಲಿ ಕನಿಷ್ಠ 60% ಮಾರ್ಕ್ಸ್ ಪಡೆದಿರಬೇಕು.
  • ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ 6 ಲಕ್ಷ ರೂ. ಮೀರಬಾರದು.
  • ಆದಿತ್ಯ ಬಿರ್ಲಾ ಕ್ಯಾಪಿಟಲ್ ಲಿಮಿಟೆಡ್ ಮತ್ತು ಅದರ ಅಂಗಸಂಸ್ಥೆಗಳ ಮಕ್ಕಳು ಮತ್ತು Buddy4Study ಉದ್ಯೋಗಿಗಳು ಅರ್ಹರಲ್ಲ

ಅಗತ್ಯ ದಾಖಲೆಗಳು:

  • ಪಾಸ್‌ಪೋರ್ಟ್ ಗಾತ್ರದ ಪೋಟೋ
  • ಹಿಂದಿನ ಶೈಕ್ಷಣಿಕ ವರ್ಷದ ಮಾರ್ಕ್ಸ್‌ ಕಾರ್ಡ್‌
  • ಗುರುತಿನ ಪುರಾವೆ (ಆಧಾರ್ ಕಾರ್ಡ್/ವೋಟರ್ ಐಡಿ/ಚಾಲನಾ ಪರವಾನಗಿ/ಪ್ಯಾನ್ ಕಾರ್ಡ್)
  • ಪ್ರಸಕ್ತ ವರ್ಷದ ಪ್ರವೇಶ ಪುರಾವೆ
  • ವಿದ್ಯಾರ್ಥಿಯ (ಅಥವಾ ಪೋಷಕರು) ಬ್ಯಾಂಕ್ ಖಾತೆ ವಿವರ
  • ಆದಾಯ ಪ್ರಮಾಣ ಪತ್ರ.

ಪ್ರಮುಖ ದಿನಾಂಕಗಳು:
ಆದಿತ್ಯ ಬಿರ್ಲಾ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-10-2024

ಪ್ರಮುಖ ಲಿಂಕ್’ಗಳು:
Aditya Birla Capital Scholarship Apply Online ಲಿಂಕ್:‌ Apply ಮಾಡಿ

SSP Scholarship 2024 For OBC:

SSP ಮೆಟ್ರಿಕ್ ನಂತರ ಶುಲ್ಕ ಮರುಪಾವತಿ ಯೋಜನೆ

ಸಂತೂರ್ ವಿದ್ಯಾರ್ಥಿವೇತನ 2024

Leave a Comment