ಎಲ್ಲರಿಗೂ ನಮಸ್ಕಾರ, ರಾಜ್ಯ ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್, ಬೆಳೆಹಾನಿ ಪರಿಹಾರ (Bele Parihara 2024) ವಿತರಣೆ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ. ರಾಜ್ಯದಲ್ಲಿ ಅಕ್ಟೋಬರ್ ತಿಂಗಳಲ್ಲಿ ಸರಾಸರಿ 10.4 ಸೆಂ.ಮೀ. ವಾಡಿಕೆ ಮಳೆ ಆಗಬೇಕಿತ್ತು. ಆದರೆ 16.6 ಸೆಂ.ಮೀ. ಮಳೆ ಸುರಿದಿದೆ. ಅಂದಾಜು 56,993 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಹಾನಿಯಾಗಿದೆ.
ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಜಂಟಿ ಸಮೀಕ್ಷೆ ಇನ್ನು ಮೂರು-ನಾಲ್ಕು ದಿನಗಳಲ್ಲಿ ಪೂರ್ಣಗೊಳ್ಳಲಿದ್ದು, 15 ದಿನಗಳಲ್ಲಿ ಪರಿಹಾರ ವಿತರಿಸುತ್ತೇವೆ ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ.
Bele Parihara 2024:
ಮಾಧ್ಯಮದವರೊಂದಿಗೆ ಮಾತನಾಡಿದ ಅವರು ‘ಸಮೀಕ್ಷೆ ಪೂರ್ಣಗೊಂಡ ನಂತರವೇ ಬೆಳೆ ಹಾನಿ ಪ್ರಮಾಣದ ನಿಖರ ಅಂಕಿ ಅಂಶ ತಿಳಿಯಲಿದೆ. ಅಂದಾಜಿಸಿದ ಪ್ರಮಾಣಕ್ಕಿಂತ ಹೆಚ್ಚು ಪ್ರದೇಶದಲ್ಲಿ ಬೆಳೆ ಹಾನಿಯಾಗಿರುವ ಸಾಧ್ಯತೆಗಳಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ, ಹೆಚ್ಚು ಮಳೆಯಾದ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು’ ಎಂದು ತಿಳಿಸಿದರು.
ಹಿಂಗಾರು ಮಳೆಯಿಂದ ಮನೆ, ಬೆಳೆ ಕಳೆದುಕೊಂಡಿರುವವರಿಗೆ ತಕ್ಷಣವೇ ಪರಿಹಾರ ನೀಡಲು ಇದಕ್ಕೆ ಬೇಕಾಗುವ 666 ಕೋಟಿ ರೂ. ಅನುದಾನ ರಾಜ್ಯದ ಎಲ್ಲಾ DC ಮತ್ತು ತಹಸೀಲ್ದಾರ್ ಖಾತೆಯಲ್ಲಿ ಹಣ ಲಭ್ಯವಿದೆ ಎಂದು ಹೇಳಿದರು.
ಇತರೆ ಮಾಹಿತಿಗಳನ್ನು ಓದಿ: