ಭೂ ಒಡೆತನ ಯೋಜನೆ: ಭೂಮಿ ಖರೀದಿಸಲು 25 ಲಕ್ಷ ರೂ. ಸಹಾಯಧನ ಮತ್ತು ಸಾಲಸೌಲಭ್ಯ | Bhoo Odetana Yojane Karnataka 2024 Application Link

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ನೀವು ಕೂಡ ಭೂ ಒಡೆತನ ಯೋಜನೆಗೆ ಅರ್ಜಿ ಸಲ್ಲಿಸಬೇಕೆ..? ಯಾರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು..? Bhoo Odetana Yojane ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಎಷ್ಟು ಸಹಾಯಧನ ದೊರೆಯಲಿದೆ..? ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲು ಓದಿರಿ.

ರಾಜ್ಯ‌ ಸರ್ಕಾರವು ಜನರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಪರಿಶಿಷ್ಟ ಜಾತಿಯವರಿಗೆ ಸರ್ಕಾರವು ಗುಡ್ ನ್ಯೂಸ್ ನೀಡಿದೆ. ಭೂ ಒಡೆತನ ಯೋಜನೆಯ ಅಡಿಯಲ್ಲಿ 25 ಲಕ್ಷ ರೂ. ವರೆಗೆ ಶೇ.6 ರ ಬಡ್ಡಿದರದಲ್ಲಿ ಸಹಾಯಧನದ ನೀಡುವ ಮೂಲಕ ಜಮೀನು ಖರೀದಿಸಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಪರಿಶಿಷ್ಟ ಜಾತಿಯವರ ಆರ್ಥಿಕ ಅಭಿವೃದ್ಧಿಗಾಗಿ ಸರ್ಕಾರವು ಹಲವಾರು ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದೆ. ಪರಿಶಿಷ್ಟ ಜಾತಿಯವರಿಗಾಗಿ ಭೂ ಒಡೆತನ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಕೃಷಿ ಜಮೀನು ಖರೀದಿಸಿ ಸರ್ಕಾರದ ವತಿಯಿಂದ ಸಹಾಯಧನ ನೀಡಲಾಗುತ್ತದೆ.

ಎಷ್ಟು ಸಹಾಯಧನ ದೊರೆಯಲಿದೆ..?
ಈ ಯೋಜನೆಗೆ ಅರ್ಜಿ ಸಲ್ಲಿಸಿದವರಿಗೆ 20 ರಿಂದ 25 ಲಕ್ಷ ರೂ. ವರೆಗೆ ಘಟಕದ ವೆಚ್ಚ ಸಿಗಲಿದೆ. ಶೇ.50ರಷ್ಟು ಸಹಾಯಧನ ನೀಡಲಾಗುತ್ತದೆ. ಹಾಗೂ ಶೇ.50ರಷ್ಟು ಸಹಾಯಧನಕ್ಕೆ ಶೇ.6ರ ಬಡ್ಡಿದರದಲ್ಲಿ ಸಾಲ ನೀಡುತ್ತಾರೆ.

Bhoo Odetana Yojane 2024 ಬೇಕಾಗುವ ದಾಖಲೆಗಳು:

  • ಭಾವಚಿತ್ರ
  • ಜಾತಿ ಪ್ರಮಾಣಪತ್ರ (Caste Certificate)
  • ಆದಾಯ ಪ್ರಮಾಣಪತ್ರ (Income Certificate)
  • ಆಧಾರ್ ಕಾರ್ಡ್ ಪ್ರತಿ (ನಿವಾಸದ ಪುರಾವೆ)
  • ಕೃಷಿ ಕಾರ್ಮಿಕರ ದೃಡೀಕರಣ ಪತ್ರ

Land Purchase Scheme 2024 Karnataka: ಯಾರು ಅರ್ಜಿ ಸಲ್ಲಿಸಬಹುದು?
ಭೂ ಒಡೆತನ ಯೋಜನೆಗೆ ಈ ಕೆಳಗಿನ ನಿಗಮಗಳ ವ್ಯಾಪ್ತಿಯಲ್ಲಿ ಬರುವ ಸಮುದಾಯದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

  • ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ,
  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮ,
  • ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ,
  • ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ,
  • ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ,
  • ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗದು,

2024-2025 ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಗಳ ಆರ್ಥಿಕ ಅಭಿವೃದ್ಧಿಗಾಗಿ ಭೂ ಒಡೆತನ ಯೋಜನೆಗಾಗಿ ಆನ್‌ಲೈನ್ ಅರ್ಜಿ ಆಹ್ವಾನಿಸಲಾದೆ.

Bhoo Odethana Yojane‌ 2024 Karnataka ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಸೇವಾ ಸಿಂಧು ಪೊರ್ಟಲ್ ಮೂಲಕ ಆನ್‌ಲೈನ್‌ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆ ಲಿಂಕ್‌ನ್ನು ಕೇಳಗೆ ನೀಡಲಾಗಿದೆ.

ಪ್ರಮುಖ ದಿನಾಂಕಗಳು:
ಭೂ ಒಡೆತನ ಯೋಜನೆಗೆ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 10-10-2024

Land Purchase Scheme Karnataka 2024 Application Link:
ಆನ್‌ಲೈನ್‌ ಅರ್ಜಿ ಲಿಂಕ್‌:
ಇಲ್ಲಿ ಕ್ಲಿಕ್‌ ಮಾಡಿ
ಅಧಿಕೃತ ವೆಬ್‌ಸೈಟ್:‌ sevasindhu.karnataka.gov.in

ಅರ್ಹ ಮತ್ತು ಆಸಕ್ತರು ನಿಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ 9482300400 ಗೆ ಕರೆ ಮಾಡಿ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಇತರೆ ಮಾಹಿತಿಗಳನ್ನು ಓದಿ:

ಉಚಿತ ಬೋರ್‌ವೇಲ್: ಗಂಗಾ ಕಲ್ಯಾಣ ಯೋಜನೆಗಾಗಿ ಅರ್ಜಿ ಆಹ್ವಾನ

ಗೃಹಲಕ್ಷ್ಮೀ ಯೋಜನೆ DBT Status ಚೆಕ್ ಮಾಡಿ

ಮಹಿಳೆಯರಿಗೆ ಗುಡ್‌ ನ್ಯೂಸ್:‌ ಸರ್ಕಾರದಿಂದ 3 ಲಕ್ಷ ರೂ. ಸಹಾಯಧನ

ಉಚಿತ ಆಧಾರ್ ಅಪ್‌ಡೇಟ್‌​ ಈ ದಿನಾಂಕದೊಳಗೆ ಮಾಡಿಸಿ

Leave a Comment