BPL Ration Card: 20 ಲಕ್ಷಕ್ಕೂ ಅಧಿಕ BPL ಕಾರ್ಡ್ ರದ್ದು

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ರೇಷನ್ ಕಾರ್ಡ್ ಅನ್ನು ಸರ್ಕಾರ ಬಡವರಿಗೆ ನೀಡುತ್ತದೆ. ರೇಷನ್ ಕಾರ್ಡ್ (BPL Ration Card) ಹೊಂದಿರುವ ಫಲಾನುಭವಿಗಳಿಗೆ ಸರ್ಕಾರವು ನೀಡುತ್ತಿರುವ ಹಲವಾರು ಯೋಜನೆಗಳ ಸೌಲಭ್ಯಗಳು ದೊರೆಯಲಿದೆ. ನೀವು ಕೂಡ ಪಡಿತರ ಚೀಟಿಯನ್ನು ಹೊಂದಿದ್ದರೆ ತಪ್ಪದೆ ಈ ಮಾಹಿತಿಯನ್ನೊಮ್ಮೆ ಓದಿರಿ.

ಆಹಾರ ಇಲಾಖೆಯು ರಾಜ್ಯದಲ್ಲಿ ಅಂತ್ಯೋದಯ ಹಾಗೂ ಬಿಪಿಎಲ್ ರೇಷನ್ ಕಾರ್ಡ್ ಅನ್ನು ಹೊಂದಿರುವ ಅನರ್ಹ ಫಲಾನುಭವಿಗಳನ್ನು ಗುರುತಿಸಿ ಅಂತವರ ಕಾರ್ಡ್ ಗಳನ್ನು ರದ್ದುಪಡಿಸಲು ಆಹಾರ ಇಲಾಖೆ ಚಿಂತನೆ ನಡೆಸಿದೆ. ಸುಮಾರು 20 ಲಕ್ಷಕ್ಕೂ ಅಧಿಕ ಕಾರ್ಡ್ ಗಳನ್ನು ರದ್ದಾಗಲಿವೆ.

BPL Ration Card Cancellation:

ರಾಜ್ಯದಲ್ಲಿ ಅನರ್ಹ ಅಂತ್ಯೋದಯ ಹಾಗೂ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಗುರುತಿಸಿ ಸರ್ವೆ ಮಾಡಲು ಖಾಸಗಿ ಕಂಪನಿಯೊಂದಕ್ಕೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ಜವಾಬ್ದಾರಿ ನೀಡಿದೆ. ರಾಜ್ಯದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ನಿಯಮ ಕ್ಕಿಂತ 14 ಲಕ್ಷ ಹೆಚ್ಚುವರಿ ರೇಷನ್ ಕಾರ್ಡ್ ಗಳಿವೆ ಎಂದು ಆಹಾರ ಇಲಾಖೆಯು ಮಾಹಿತಿ ನೀಡಿದೆ.

ಆರ್ಥಿಕವಾಗಿ ಸಬಲರಾಗಿದ್ದರು ಸುಳ್ಳು ದಾಖಲೆಗಳನ್ನು ನೀಡಿ ರೇಷನ್ ಕಾರ್ಡ್ ಅನ್ನು ತೆಗೆದುಕೊಂಡಿದ್ದಾರೆ. ಅಂತವರ
ಅನರ್ಹ ಕಾರ್ಡ್ ಗಳನ್ನು ರದ್ದು ಪಡಿಸಲು ಆಹಾರ ಇಲಾಖೆ ಸಿದ್ಧತೆ ನಡೆಸಿದೆ, ಅನರ್ಹ ಫಲಾನುಭವಿಗಳನ್ನು ಪತ್ತೆ ಮಾಡಲು ಆಹಾರ ಇಲಾಖೆಯು ಖಾಸಗಿ ಸಂಸ್ಥೆಗೆ ಸಮೀಕ್ಷೆ (ಸರ್ವೇ) ಮಾಡುವ ಹೊಣೆ ನೀಡಲು ನಿರ್ಧಾರ ಮಾಡಿದೆ.‌

ಅನ್ನಭಾಗ್ಯ ಯೋಜನೆಯ ಅನಗತ್ಯ ವೆಚ್ಚ ಉಳಿಸಲು ಈ ಅನರ್ಹ ರೇಷನ್ ಕಾರ್ಡ್ ಗಳನ್ನು ರದ್ದು ಪಡಿಸಲು ಆಹಾರ ಇಲಾಖೆಯು ಚಿಂತನೆ ನಡೆಸಿದೆ. ಆಹಾರ ಭದ್ರತೆ ಕಾಯ್ದೆಯ ಪ್ರಕಾರ ರಾಜ್ಯದಲ್ಲಿ 1.03 ಕೋಟಿ BPL ಕಾರ್ಡ್ ಗಳು ಇರಬೇಕು. ಆದರೆ, 1.16 ಕೋಟಿಗೂ ಹೆಚ್ಚು BPL ಕಾರ್ಡ್ ಗಳನ್ನು ವಿತರಣೆ ಮಾಡಲಾಗಿದೆ.

ಇತರೆ ಮಾಹಿತಿಗಳನ್ನು ಓದಿ:

ಗೃಹಲಕ್ಷ್ಮೀ ಯೋಜನೆಯ 2000 ರೂ. ಹಣ ಜಮಾ, DBT Status ಚೆಕ್ ಮಾಡಿ

ಉಚಿತ ಹೊಲಿಗೆ ಯಂತ್ರ ಯೋಜನೆ 2024

ರೈತರಿಗೆ ಗುಡ್ ನ್ಯೂಸ್: ಯಂತ್ರೋಪಕರಣ ಖರೀದಿಸಲು ಸಬ್ಸಿಡಿ

ಕೃಷಿ ಭಾಗ್ಯ ಯೋಜನೆ: ರೈತರಿಗೆ ಶೇ.90 ರಷ್ಟು ಸಹಾಯಧನ

Leave a Comment