ಎಲ್ಲರಿಗೂ ನಮಸ್ಕಾರ, ಕೋಲ್ಗೇಟ್ ಕೀಪ್ ಇಂಡಿಯಾ ಸ್ಮೈಲಿಂಗ್ ವಿದ್ಯಾರ್ಥಿವೇತನಕ್ಕೆ (Colgate Keep India Smiling Scholarship) ಅರ್ಜಿ ಸಲ್ಲಿಸಬೇಕೆ..? Colgate ಸ್ಕಾಲರ್ಶಿಪ್ ಗೆ ಯಾರು ಅರ್ಜಿ ಸಲ್ಲಿಸಬಹುದು…? ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಎಷ್ಟು ವಿದ್ಯಾರ್ಥಿವೇತನ ಸಿಗಲಿದೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ ಓದಿರಿ.
ಕೋಲ್ಗೇಟ್-ಪಾಮೋಲಿವ್ (ಇಂಡಿಯಾ) ಲಿಮಿಟೆಡ್ ವತಿಯಿಂದ ಕೋಲ್ಗೇಟ್ ಕೀಪ್ ಇಂಡಿಯಾ ಸ್ಮೈಲಿಂಗ್ ಸ್ಕಾಲರ್ಶಿಪ್ ಅನ್ನು ನೀಡುತ್ತಾರೆ. ಆರ್ಥಿಕವಾಗಿ ದುರ್ಬಲವಾಗಿರುವ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ನೀಡುವ ಗುರಿಯನ್ನು ಈ ವಿದ್ಯಾರ್ಥಿವೇತನ ಕಾರ್ಯಕ್ರಮ ಹೊಂದಿದೆ.
ಈ ವಿದ್ಯಾರ್ಥಿವೇತನ ಕಾರ್ಯಕ್ರಮವು ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ (BDS) (ಯಾವುದೇ ವರ್ಷ) ಅಥವಾ ಮಾಸ್ಟರ್ ಆಫ್ ಡೆಂಟಲ್ ಸರ್ಜರಿ (MDS) ಕೋರ್ಸ್ಗಳಿಗೆ ದಾಖಲಾದ ವಿದ್ಯಾರ್ಥಿಗಳಿಗೆ 75,000 ರೂ. ಸ್ಕಾಲರ್ಶಿಪ್ ಅನ್ನು ಒಂದು ಬಾರಿ ನೀಡುತ್ತಾರೆ.
Colgate Keep India Smiling Scholarship 2024 ಅರ್ಹತೆಗಳು:
- ಪ್ರಸ್ತುತ BDS, ಹಾಗೂ MDS ಕೋರ್ಸ್ನ ಯಾವುದೇ ವರ್ಷದಲ್ಲಿ ದಾಖಲಾದ ವಿದ್ಯಾರ್ಥಿಗಳು ಅರ್ಹರು.
- 12 ನೇ ತರಗತಿಯಲ್ಲಿ ಕನಿಷ್ಠ 65% ಅಂಕ ಪಡೆದಿರಬೇಕು.
- ಬಿಡಿಎಸ್ ಹಾಗೂ MDS ಕೋರ್ಸ್ನ ಯಾವುದೇ ವರ್ಷದ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು.
- ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ತಮ್ಮ ಕೊನೆಯ ಸೆಮಿಸ್ಟರ್ನಲ್ಲಿ ಕನಿಷ್ಠ 60% ಗಳಿಸಿರಬೇಕು.
- ಅರ್ಜಿದಾರರು ಮಾನ್ಯತೆ ಪಡೆದ ಸರ್ಕಾರಿ ಅಥವಾ ಖಾಸಗಿ ಕಾಲೇಜು ಅಥವಾ ಸಂಸ್ಥೆಯಲ್ಲಿ ದಾಖಲಾಗಿರಬೇಕು.
- ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯವು 8 ಲಕ್ಷ ರೂ. ಮೀರಿರಬಾರದು.
- Buddy4Study ಮತ್ತು Colgate India ಉದ್ಯೋಗಿಗಳ ಮಕ್ಕಳು ಅರ್ಹರಲ್ಲ.
ಪ್ರಯೋಜನಗಳು:
BDS ವಿದ್ಯಾರ್ಥಿಗಳಿಗೆ: 75,000 ರೂ. ಒಂದು ಬಾರಿ ವಿದ್ಯಾರ್ಥಿವೇತನ ಪಡೆದುಕೊಳ್ಳಬಹುದು.
MDS ವಿದ್ಯಾರ್ಥಿಗಳಿಗೆ: 75,000 ರೂ. ಒಂದು ಬಾರಿ ವಿದ್ಯಾರ್ಥಿವೇತನ ಪಡೆದುಕೊಳ್ಳಬಹುದು.
ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್
- ಪಾಸ್ಪೋರ್ಟ್ ಗಾತ್ರದ ಪೋಟೋ
- ಆದಾಯ ಪ್ರಮಾಣಪತ್ರ
- ಪ್ರವೇಶದ ಪುರಾವೆ
- ಶುಲ್ಕ ರಶೀದಿ
- ಬ್ಯಾಂಕ್ ಖಾತೆ ವಿವರ
- ಹಿಂದಿನ ತರಗತಿಯ ಅಂಕಪಟ್ಟಿ
- ಅಂಗವೈಕಲ್ಯ ಪ್ರಮಾಣಪತ್ರ (ಅನ್ವಯಿಸಿದರೆ)
ಸೂಚನೆ: ಮಹಾರಾಷ್ಟ್ರ, ಗೋವಾ, ಗುಜರಾತ್, ಹಿಮಾಚಲ ಪ್ರದೇಶ ಮತ್ತು ಆಂಧ್ರಪ್ರದೇಶದ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ಅರ್ಜಿ ಸಲ್ಲಿಕೆಯ ದಿನಾಂಕ:
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: 30-11-2024
ಪ್ರಮುಖ ಲಿಂಕ್’ಗಳು:
Colgate Keep India Smiling Scholarship 2024 Apply Online ಲಿಂಕ್: Apply ಮಾಡಿ
ಇತರೆ ಮಾಹಿತಿಗಳನ್ನು ಓದಿ: