ಎಲ್ಲರಿಗೂ ನಮಸ್ಕಾರ, ಫ್ಲಿಪ್‌ಕಾರ್ಟ್ ತನ್ನ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದೆ. ಫ್ಲಿಪ್‌ಕಾರ್ಟ್ ಕಂಪನಿಯು ಅಧಿಕೃತವಾಗಿ ಸೇಲ್ ಡೇಟ್ (Flipkart Big Billion Days Sale) ಘೋಷಣೆ ಮಾಡಿದೆ. ಇದೆ ತಿಂಗಳು ಸೆಪ್ಟೆಂಬರ್ನಲ್ಲೇ ಸೇಲ್ ಪ್ರಾರಂಭವಾಗಲಿದೆ. ಫ್ಲಿಪ್‌ಕಾರ್ಟ್ ನ ಚಂದಾದಾರರಿಗೆ ಒಂದು ದಿನ ಮುಂಚಿತವಾಗಿ ಸೇಲ್ ಆರಂಭವಾಗಲಿದೆ. ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ ಓದಿರಿ.
ಜನಪ್ರಿಯ ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್ ನ ಬಿಗ್ ಬಿಲಿಯನ್ ಡೇಸ್ ಸೇಲ್ ಯಾವಾಗ ಆರಂಭವಾಗಲಿದೆ ಎಂದು ನೀವು ಕೂಡ ಕಾತರದಿಂದ ಕಾಯುತ್ತಿದ್ದೀರಾ..? ಫ್ಲಿಪ್ಕಾರ್ಟ್ನಲ್ಲಿ ಸೇಲ್ ಡೇಟ್ ಅನೌನ್ಸ್ ಆಗಿದೆ. ಫ್ಲಿಪ್ಕಾರ್ಟ್ನಲ್ಲಿ ಬಿಗ್ ಬಿಲಿಯನ್ ಡೇ ಸೇಲ್ ಪ್ರಾರಂಭವಾಗುವ ಪೋಸ್ಟರ್ ಕೂಡ ಕಾಣುತ್ತದೆ.
Flipkart Big Billion Days Sale 2024 Date:
Flipkart Big Billion Day ಸೇಲ್ ಸೆಪ್ಟೆಂಬರ್ 27 ರಂದು ಪ್ರಾರಂಭವಾಗಲಿದೆ. ಫ್ಲಿಪ್‌ಕಾರ್ಟ್ ಪ್ಲಸ್ ಚಂದಾದಾರರಿಗೆ ಒಂದು ದಿನ ಮುಂಚಿತವಾಗಿ (ಸೆಪ್ಟೆಂಬರ್ 26 ರಂದು) ಸೇಲ್ ಆರಂಭವಾಗಲಿದೆ. ಹಲವಾರು ವಸ್ತುಗಳು ರೀಯಾಯಿತಿ ದರದಲ್ಲಿ ಗ್ರಾಹಕರಿಗೆ ಲಭ್ಯವಿರುತ್ತವೆ.
ಫ್ಲಿಪ್‌ಕಾರ್ಟ್ ‘ಬಿಗ್ ಬಿಲಿಯನ್ ಡೇಸ್ ಸೇಲ್’ ಆರಂಭಕ್ಕೆ ಶಾಪಿಂಗ್ ಪ್ರೀಯರು ಯಾವಾಗ ಸೇಲ್ ಆರಂಭವಾಗಲಿದೆ ಎಂದು ಕಾತುರದಿಂದ ಕಾಯುತ್ತಿರುತ್ತಾರೆ. ಈ ಸೇಲ್ ನಲ್ಲಿ ಗ್ರಾಹಕರು ರೀಯಾಯಿತಿ ದರದಲ್ಲಿ ಮತ್ತು ಅತ್ಯುತ್ತಮ ಕೊಡುಗೆಗಳಲ್ಲಿ ತಮ್ಮ ಇಷ್ಟದ ವಸ್ತುಗಳನ್ನು ಆನ್‌ಲೈನ್ ಮೂಲಕ ವಸ್ತುಗಳನ್ನು ಖರೀದಿಸಬಹುದಾದ.
Flipkart ಸಂಸ್ಥೆಯು, ಬಿಗ್ ಬಿಲಿಯನ್ ಡೇಸ್ ಸೇಲ್ ಗಾಗಿ ಫ್ಲಿಪ್‌ಕಾರ್ಟ್ ಕಂಪನಿಯು HDFC ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಹಾಗಾಗಿ, ಗ್ರಾಹಕರು ಈ ಸಮಯದಲ್ಲಿ ತ್ವರಿತ ರಿಯಾಯಿತಿ ಕೊಡುಗೆಗಳು ಹಾಗೂ ಕ್ಯಾಶ್‌ಬ್ಯಾಕ್ ಆಫರ್ ಗಳನ್ನು ಪಡೆದುಕೊಳ್ಳಬಹುದು.
ಬಿಗ್ ಬಿಲಿಯನ್ ಡೇಸ್ ಸೇಲ್ (Flipkart Big Billion Days Sale) ನಲ್ಲಿ ಕಡಿಮೆ ಬೆಲೆಗೆ ಹೆಚ್ಚು ಆಕರ್ಷಕ ಕೊಡುಗೆಗಳನ್ನು ನೋಡಬಹುದಾಗಿದೆ. ಈ ಸೇಲ್ ನಲ್ಲಿ ಸ್ಮಾರ್ಟ್‌ಫೋನ್, ಸ್ಮಾರ್ಟ್‌ಟಿವಿಗಳು, ಗ್ಯಾಜೆಟ್ ಉತ್ಪನ್ನಗಳು, ಸೌಂಡ್ ಬಾರ್‌ಗಳು, ವೈರ್‌ಲೆಸ್ ಹೆಡ್‌ಸೆಟ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಸ್ಮಾರ್ಟ್ ವಾಚ್, ರೆಫ್ರಿಜರೇಟರ್, ಫ್ಯಾನ್, ಅಡುಗೆ ಸಾಮಾಗ್ರಿಗಳು, ಲೈಫ್ಸ್ಟೈಲ್, ಬಟ್ಟೆ ಸೇರಿದಂತೆ ಹಲವಾರು ವಸ್ತುಗಳ ಮೇಲೆ ರಿಯಾಯಿತಿ ಸಿಗಲಿದೆ.
ಇತರೆ ಮಾಹಿತಿಗಳನ್ನು ಓದಿ: