Free Training: ಸ್ವಯಂ ಉದ್ಯೋಗ ಆರಂಭಿಸಲು ಉಚಿತ ತರಬೇತಿ

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ನೀವೇನಾದರೂ ಸ್ವಂತ ಉದ್ಯಮ ಸ್ಥಾಪಿಸಲು (Free Training) ಯೋಚಿಸುತ್ತಿದ್ದೀರಾ..? ಹಾಗಿದ್ದರೇ ಇಲ್ಲಿದೆ ನಿಮಗೆ ಗುಡ್ ನ್ಯೂಸ್. ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಬೆಂಗಳೂರು ಇವರ ಪ್ರಾಯೋಜಕತ್ವದಲ್ಲಿ ಕರ್ನಾಟಕ ಉದ್ಯಮಶೀಲತಾಭಿವೃದ್ದಿ ಕೇಂದ್ರ, ಧಾರವಾಡ (ಸಿಡಾಕ್) ಸಂಸ್ಥೆಯಿಂದ ಉದ್ಯಮಶೀಲಾಭಿವೃದ್ದಿ ತರಬೇತಿ ಅರ್ಜಿ ಆಹ್ವಾನಿಸಲಾಗಿದೆ.

ಕರ್ನಾಟಕ ಉದ್ಯಮಶೀಲತಾಭಿವೃದ್ದಿ ಕೇಂದ್ರ, ಧಾರವಾಡ ಸಂಸ್ಥೆಯ ವತಿಯಿಂದ ಸ್ವಯಂ ಉದ್ಯೋಗ ಆರಂಭಿಸಲು ಆಸಕ್ತಿ ಹೊಂದಿರುವ ಜಿಲ್ಲೆಯ ಪ.ಜಾತಿ/ಪ.ಪಂಗಡದ ಮಹಿಳಾ ಉದ್ಯಮಾಕಾಂಕ್ಷಿಗಳಿಗೆ 10 ದಿನಗಳ ಉದ್ಯಮಶೀಲಾಭಿವೃದ್ದಿ ತರಬೇತಿ ಕಾರ್ಯಕ್ರಮನ್ನು ಆಯೋಜಿಸಿದ್ದಾರೆ. ಅರ್ಹರು ಅರ್ಜಿ ಸಲ್ಲಿಸಬಹುದು.

ಮಹಿಳೆಯರಿಗೆ ತರಬೇತಿಯಲ್ಲಿ ಉದ್ಯಮ ನಿರ್ವಹಣೆ, ಸರ್ಕಾರದ ಸ್ವಯಂ ಉದ್ಯೋಗ, ಉದ್ಯಮಾವಕಾಶ ಕುರಿತು ಪರಿಣಿತ ಅತಿಥಿ ಬೋಧಕರಿಂದ ಉಪನ್ಯಾಸಗಳನ್ನು ಏರ್ಪಡಿಸಲಾಗುವುದು. ಮತ್ತು ಕೈಗಾರಿಕಾ ಭೇಟಿ ಮಾಡಿಸಲಾಗುವುದು.

ವಯೋಮಿತಿ:
ಈ ತರಬೇತಿಗೆ ಅರ್ಜಿ ಸಲ್ಲಿಸಲು ಬಯಸುವ ಮಹಿಳೆಯರಿಗೆ ಕನಿಷ್ಠ 18 ವರ್ಷ ಪೂರೈಸಿರಬೇಕು ಹಾಗೂ ಗರಿಷ್ಠ 55 ವರ್ಷ ಮೀರಿರಬಾರದು.

ಶೈಕ್ಷಣಿಕ ಅರ್ಹತೆ:
ಅರ್ಜಿದಾರರು 10 ನೇ ತರಗತಿಯಲ್ಲಿ ಪಾಸಾಗಿರಬೇಕು.

Free Training ಅರ್ಜಿ ಸಲ್ಲಿಸುವ ವಿಧಾನ:

ಪ.ಜಾತಿ/ಪ.ಪಂ ಮಹಿಳಾ ಉದ್ಯಮಾಕಾಂಕ್ಷಿಗಳು ಜಂಟಿ ನಿರ್ದೇಶಕರ ಕಚೇರಿ, ಸಿಡಾಕ್, ಜಿಲ್ಲಾ ಕೈಗಾರಿಕಾ ಕೇಂದ್ರ, 3ನೇ ಮಹಡಿ, ಶಿವಪ್ಪನಾಯಕ ಕಾಂಪ್ಲೆಕ್ಸ್, ನೆಹರು ರಸ್ತೆ, ಶಿವಮೊಗ್ಗ, ಅವಿನಾಶ್ ಎ, ಸಿಡಾಕ್ ತರಬೇತುದಾರರು ಇವರನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು.

ತರಬೇತಿಯ ಅವಧಿ:
ಅರ್ಜಿ ಸಲ್ಲಿಸಿದ ಅರ್ಹ ಮಹಿಳೆಯರಿಗೆ 10 ದಿನಗಳ ಉಚಿತ ಉದ್ಯಮಶೀಲಾಭಿವೃದ್ದಿ ತರಬೇತಿಯನ್ನು ನೀಡುತ್ತಾರೆ. ತರಬೇತಿಯು ಉಚಿತವಾಗಿದ್ದು ತರಬೇತಿ ವೇಳೆ ಊಟೋಪಚಾರ ಒದಗಿಸಲಾಗುವುದು ಎಂದು ಸಿಡಾಕ್ ಜಂಟಿ ನಿರ್ದೇಶಕರು ತಿಳಿಸಿದ್ದಾರೆ

ಅಗತ್ಯ ದಾಖಲೆಗಳು:
ಅರ್ಜಿಯೊಂದಿಗೆ 2 ಪಾಸ್‌ಪೋರ್ಟ್ ಅಳತೆ ಫೋಟೊ ಹಾಗೂ ಆಧಾರ್ ಕಾರ್ಡ್‌ ನ ಪ್ರತಿ ಸಲ್ಲಿಸಬೇಕು.

ತರಬೇತಿ ದಿನಾಂಕ:
ಉದ್ಯಮಶೀಲಾಭಿವೃದ್ದಿ ತರಬೇತಿ ಕಾರ್ಯಕ್ರಮನ್ನು ನವೆಂಬರ್ 15 ರಿಂದ 26 ರವರೆಗೆ ಆಯೋಜಿಸಲಾಗುವುದು.

ಇತರೆ ಮಾಹಿತಿಗಳನ್ನು ಓದಿ:

ಉಚಿತ ಹೊಲಿಗೆ ಯಂತ್ರ ಯೋಜನೆ 2024

ಗೃಹಲಕ್ಷ್ಮೀ ಯೋಜನೆ DBT Status ಚೆಕ್ ಮಾಡಿ

ಸಬ್ಸಿಡಿ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ

Leave a Comment