ರೈತರಿಗೆ ಗುಡ್ ನ್ಯೂಸ್: ಯಂತ್ರೋಪಕರಣ ಖರೀದಿಸಲು ಸಬ್ಸಿಡಿ | Government Subsidy Scheme For Agricultural Machinery 2024

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ಕೃಷಿ ಇಲಾಖೆಯಿಂದ ರೈತರಿಗೆ ಗುಡ್ ನ್ಯೂಸ್, ರೈತರಿಗೆ ಯಂತ್ರೋಪಕರಣಗಳನ್ನು ಖರೀದಿಸಲು ಎಷ್ಟು ಸಹಾಯಧನ (Government Subsidy Scheme) ಸಿಗಲಿದೆ..? ಯಾವೇಲ್ಲಾ ಯಂತ್ರೋಪಕರಣಗಳನ್ನು ಪಡೆಯಲು ಸಬ್ಸಿಡಿ ದೊರೆಯಲಿದೆ..? ಅರ್ಜಿ ಸಲ್ಲಿಸಲು ಯಾವ ದಾಖಲೆಗಳು ಬೇಕಾಗುತ್ತವೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ ಓದಿರಿ.

ಕೃಷಿ ಇಲಾಖೆಯ ವತಿಯಿಂದ 2024-25ನೇ ಸಾಲಿನ ಯಂತ್ರೋಪಕರಣಗಳನ್ನು ಖರೀದಿಸಲು ಸಬ್ಸಿಡಿ ದರದಲ್ಲಿ ಸಹಾಯಧನ ಸೌಲಭ್ಯಕ್ಕಾಗಿ ಅರ್ಹ ರೈತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ನೀವು ಕೂಡ ಅರ್ಜಿ ಸಲ್ಲಿಸಿ ಲಾಭ ಪಡೆದುಕೊಳ್ಳಬಹುದು.

ಕೃಷಿ ಯಾಂತ್ರೀಕರಣ, ಕೃಷಿ ಸಂಸ್ಕರಣ ಯೋಜನೆಯ ಅಡಿಯಲ್ಲಿ ಸಾಮಾನ್ಯ ವರ್ಗದ ರೈತರಿಗೆ ಶೇ.50 ರವರೆಗೆ ಸಬ್ಸಿಡಿ ದೊರೆಯಲಿದೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇ.90 ವರೆಗೆ ಸಹಾಯಧನವನ್ನು ಇಲಾಖೆಯ ವತಿಯಿಂದ ನೀಡಲಾಗುತ್ತದೆ. ಸೂಕ್ಷ್ಮ ನೀರಾವರಿ ಯೋಜನೆಯಡಿ ತುಂತುರು ನೀರಾವರಿ ಘಟಕಗಳಿಗೆ ಎಲ್ಲಾ ವರ್ಗದ ರೈತರಿಗೆ ಶೇ.90 ರಷ್ಟು ಸಹಾಯಧನ ಸಿಗಲಿದೆ.

ಈ ಕೆಳಗಿನ ಯಂತ್ರಗಳನ್ನು ಖರೀದಿಸಲು ಸಬ್ಸಿಡಿ ದೊರೆಯಲಿದೆ

  • ಮಿನಿ ಟ್ರ್ಯಾಕ್ಟರ್
  • ಪ್ಲೋರ್ ಮಿಲ್
  • ಮಿನಿ ರೈಸ್ ಮಿಲ್
  • ರಾಗಿ ಕ್ಲೀನಿಂಗ್ ಯಂತ್ರ
  • ಚಿಲ್ಲಿ ಪೌಡರಿಂಗ್ ಯಂತ್ರ
  • ಪವರ್ ಟಿಲ್ಲರ್
  • ಕಳೆ ಕೊಚ್ಚುವಂತ ಯಂತ್ರ
  • ಪವರ್ ವೀಡರ್
  • ರೋಟೋವೇಟರ್
  • ಪವರ್ ಸ್ಟ್ರೇಯರ್
  • ಡೀಸೆಲ್ ಪಂಪ್ ಸೆಂಟ್
  • ಮೊಟೋಕರ್ಟಗಳು
  • ಮೋಟಾರ್ ಚಾಲಿತ ಸಣ್ಣ ಎಣ್ಣೆಗಾಣದ ಯಂತ್ರ

ಕೃಷಿ ಇಲಾಖೆಯಿಂದ ಈ ಮೇಲಿನ ಯಂತ್ರಗಳನ್ನು ಖರೀದಿಸಲು ರೈತರಿಗೆ ಸಬ್ಸಿಡಿ ದರದಲ್ಲಿ ಸಹಾಯಧನ (Government Subsidy Scheme) ದೊರೆಯಲಿದೆ.

Government Subsidy Scheme ಅಗತ್ಯ ದಾಖಲೆಗಳು:

  • ಅರ್ಜಿದಾರರ ಆಧಾರ್ ಕಾರ್ಡ್
  • ಭಾವಚಿತ್ರ
  • ಬ್ಯಾಂಕ್ ಪಾಸ್ ಬುಕ್
  • ರೇಷನ್ ಕಾರ್ಡ್
  • ಜಮೀನಿನ ಪಹಣಿ (ಉತಾರ)
  • 100 ರೂ. ಬಾಂಡ್ ಪೇಪರ್

ಅರ್ಜಿ ಸಲ್ಲಿಕೆ ವಿಧಾನ:
ಅರ್ಹ ಮತ್ತು ಆಸಕ್ತ ರೈತರು ನಿಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ, ಅಲ್ಲಿ ಅರ್ಜಿಯನ್ನು ಪಡೆದುಕೊಂಡು, ಸಬ್ಸಿಡಿ ದರದಲ್ಲಿ ಯಂತ್ರೋಪಕರಣಗಳನ್ನು ಖರೀದಿಸಲು ಅರ್ಜಿಯನ್ನು ಸಲ್ಲಿಸಿ ನೋಂದಾಯಿಸಿಕೊಳ್ಳಬಹುದು.

ಅರ್ಜಿ ಸಲ್ಲಿಸಲು ಬಯಸುವ ರೈತರು ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಿ ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದು ಕೃಷಿ ಇಲಾಖೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಸೂಚನೆ: ಈ ಲೇಖನವನ್ನು ಮಾಹಿತಿ ನೀಡಲು ಬರೆಯಲಾಗಿದೆ ಅರ್ಜಿ ಸಲ್ಲಿಸುವ ರೈತರು ಸರಿಯಾಗಿ ಮಾಹಿತಿಯನ್ನು ಪಡೆದುಕೊಂಡು ಅರ್ಜಿ ಸಲ್ಲಿಸಿ.

ಇತರೆ ಮಾಹಿತಿಗಳನ್ನು ಓದಿ:

ಗೃಹಲಕ್ಷ್ಮೀ ಯೋಜನೆಯ 2000 ರೂ. ಹಣ ಜಮಾ, DBT Status ಚೆಕ್ ಮಾಡಿ

ಕೃಷಿ ಭಾಗ್ಯ ಯೋಜನೆ: ರೈತರಿಗೆ ಶೇ.90 ರಷ್ಟು ಸಹಾಯಧನ

ಉಚಿತ ಹೊಲಿಗೆ ಯಂತ್ರ ಯೋಜನೆ 2024

ಸ್ವಾವಲಂಬಿ ಸಾರಥಿ ಯೋಜನೆ: 3 ಲಕ್ಷ ರೂ. ಸಹಾಯಧನ

ಉಚಿತ ಬೋರ್‌ವೇಲ್: ಗಂಗಾ ಕಲ್ಯಾಣ ಯೋಜನೆಗಾಗಿ ಅರ್ಜಿ ಆಹ್ವಾನ

Leave a Comment