ಸ್ವಾವಲಂಬಿ ಸಾರಥಿ, ಭೂ ಒಡೆತನ ಯೋಜನೆ, ಗಂಗಾ ಕಲ್ಯಾಣ, ಸ್ವಯಂ ಉದ್ಯೋಗ ಯೋಜನೆಗಳಿಗಾಗಿ ಆನ್‌ಲೈನ್‌ ಅರ್ಜಿ ಆಹ್ವಾನ | Govt Subsidy Loan Schemes In Karnataka 2024 For SC Online Application Apply @sevasindhu.karnataka.gov.in

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ 2024-2025ನೇ ಸಾಲಿನ ವಿವಿಧ ಯೋಜನೆಗಳಿಗೆ (Govt Subsidy Loan Schemes) ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅರ್ಜಿ ಸಲ್ಲಿಸಬಹುದ. ಯಾವ ಯಾವ ಯೋಜನೆಗಳಿಗೆ ಅರ್ಜಿ ಸಲ್ಲಿಸಬಹುದು…? ಅರ್ಜಿ ಸಲ್ಲಿಕೆ ದಿನಾಂಕ ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ ಓದಿರಿ.

ಪರಿಶಿಷ್ಟ ಜಾತಿಯವರ ಆರ್ಥಿಕ ಅಭಿವೃದ್ಧಿಗಾಗಿ ಸರ್ಕಾರವು ಈ ಕೆಳಗಿನ ಕಲ್ಯಾಣ ಯೋಜನೆಗಳನ್ನು (Govt Subsidy Loan Schemes) ಜಾರಿಗೆ ತರಲಾಗಿದೆ. ನೀವು ಕೂಡ ಅರ್ಜಿ ಸಲ್ಲಿಸಿ ಈ ಯೋಜನೆಗಳ ಲಾಭ ಪಡೆದುಕೊಳ್ಳಬಹುದು.

ಈ ಯೋಜನೆಗಳಿಗೆ ಅರ್ಜಿ ಸಲ್ಲಿಸಬಹುದು

  • ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ
  • ಸ್ವಾವಲಂಬಿ ಸಾರಥಿ
  • ಸ್ವಯಂ ಉದ್ಯೋಗ ನೇರಸಾಲ ಯೋಜನೆ
  • ಮೈಕ್ರೋ ಕ್ರೆಡಿಟ್ (ಪ್ರೇರಣಾ) ಯೋಜನೆ
  • ಭೂ ಒಡೆತನ ಯೋಜನೆ
  • ಗಂಗಾ ಕಲ್ಯಾಣ ಯೋಜನೆ

ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ:
ವ್ಯಾಪಾರ ಮತ್ತು ಇತರೆ ಉದ್ಯಮಗಳಿಗೆ ಈ ಕೆಳಕಂಡತೆ ಸಹಾಯಧನ ನೀಡಲಾಗುತ್ತದೆ. ಉಳಿದ ಹಣವು ಬ್ಯಾಂಕ್ ಸಾಲವಾಗಿರುತ್ತದೆ. ಬ್ಯಾಂಕ್ ಸಾಲದ ಶೇ 20 ರಷ್ಟು ಸಹಾಯಧನ ಅಥವಾ ಗರಿಷ್ಠ 1 ಲಕ್ಷ ರೂ. ಘಟಕ ವೆಚ್ಚದ ಶೇ 70 ರಷ್ಟು ಸಹಾಯಧನ ಅಥವಾ ಅಥವಾ ಗರಿಷ್ಠ 2 ಲಕ್ಷ ರೂ ಅನ್ನು ನೀಡುತ್ತಾರೆ‌.

ಸ್ವಾವಲಂಬಿ ಸಾರಥಿ:
ನಿರುದ್ಯೋಗಿ ಯುವಕರಿಗೆ ಸ್ವಂತ ಉದ್ಯೋಗ ನಡೆಸಲು ಸ್ವಾವಲಂಬಿ ಸಾರಥಿ ಯೋಜನೆಯ ಮೂಲಕ ಸರ್ಕಾರವು ಸಹಾಯಧನ ನೀಡುತ್ತದೆ. ಸರಕು ವಾಹನ/ಟ್ಯಾಕ್ಸಿ (ಹಳದಿ ಬೋರ್ಡ್) ವಾಹನ ಖರೀದಿಸುವ ಉದ್ದೇಶಕ್ಕೆ ಸಾಲದ ಮೊತ್ತ ಶೇ 75 ರಷ್ಟು ಸಹಾಯಧನ ಅಥವಾ ಗರಿಷ್ಠ 4 ಲಕ್ಷ ರೂ.

ಸ್ವಯಂ ಉದ್ಯೋಗ ನೇರಸಾಲ ಯೋಜನೆ:
ಕಿರು ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಸಹಾಯಧನ ಹಾಗೂ ಸಾಲ ನೀಡುತ್ತಾರೆ. ಘಟಕ ವೆಚ್ಚ 1 ಲಕ್ಷ ಸಹಾಯಧನ 50,000 ರೂ. ಸಾಲ: 50 ಸಾವಿರ ರೂ. ( ಶೇ 4 ರಷ್ಟು ಬಡ್ಡಿ ದರ)

ಭೂ ಒಡೆತನ ಯೋಜನೆ:
ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಈ ಕೆಳಕಂಡ ಘಟಕ ವೆಚ್ಚದಲ್ಲಿ ಕೃಷಿ ಜಮೀನು ಖರೀದಿಸಲು ಸಹಾಯಧನ ನೀಡಲಾಗುತ್ತದೆ. ಘಟಕ ವೆಚ್ಚ: 25 ಲಕ್ಷ / 20 ಲಕ್ಷ ರೂ. ಸಹಾಯಧನ 50% ಸಾಲ: 50% (ಶೇಕಡ 6ರಷ್ಟು ಬಡ್ಡಿ ದರ)

ಗಂಗಾ ಕಲ್ಯಾಣ ಯೋಜನೆ:
1.20 ಎಕರೆ ಯಿಂದ 5 ಎಕರೆ ಜಮೀನು ಹೊಂದಿರು ಸಣ್ಣ ಮತ್ತು ಅತಿಸಣ್ಣ ರೈತರಿಗೆ ಕೊಳವೆಬಾವಿ ಕೊರೆದು ಪಂಪ್‌ಸೆಟ್ ಅಳವಡಿಸಿ, ವಿದ್ಯುದ್ದೀಕರಣಗೊಳಿಸಿ ನೀರಾವರಿ ಸೌಲಭ್ಯ ಒದಗಿಸಿಕೊಡಲಾಗುವುದು. ಘಟಕ ವೆಚ್ಚ: 4.75 ಲಕ್ಷ / 3.75 ಲಕ್ಷ ಇದರಲ್ಲಿ 50,000 ರೂ. ಸಾಲವೂ ಸೇರಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ನಿಗಮದ ಜಿಲ್ಲಾ ವ್ಯವಸ್ಥಾಪಕರುಗಳ ಕಛೇರಿ ಅಥವಾ ನಿಗಮಗಳ ವೆಬ್ ಸೈಟ್ ಅಥವಾ ಕಲ್ಯಾಣಮಿತ್ರ ಏಕೀಕೃತ SC/ST ಸಹಾಯವಾಣಿ 9482-300-400

ವಿಶೇಷ ಸೂಚನೆ: ನಿಗಮದ ನಿರ್ದೇಶಕ ಮಂಡಳಿ ವಿವೇಚನಾ ಕೋಟಾ ಅಥವಾ ಸರ್ಕಾರದ ಸಾಂಸ್ಥಿಕ ಕೋಟಾದಡಿ ಸ್ವೀಕರಿಸುವ ಅರ್ಜಿಗಳನ್ನು ಸಹ ಸೇವಾ ಸಿಂಧು ಪೋರ್ಟಲ್ ಮೂಲಕವೇ ಸಲ್ಲಿಸುವುದು.

Govt Subsidy Loan Schemes ಅರ್ಜಿ ಸಲ್ಲಿಕೆ ದಿನಾಂಕ:
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 10-10-2024

Govt Subsidy Loan Schemes Online Application Link:

ಆನ್‌ಲೈನ್‌ ಅರ್ಜಿ ಲಿಂಕ್‌: ಇಲ್ಲಿ ಕ್ಲಿಕ್‌ ಮಾಡಿ
ಅಧಿಕೃತ ವೆಬ್‌ಸೈಟ್:‌ sevasindhu.karnataka.gov.in, sevasindhuservices.karnataka.gov.in

ಅರ್ಜಿ ಸಲ್ಲಿಸುವುದು ಹೇಗೆ..?
sevasindhu.karnataka.gov.in ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರದ CSC ಕೇಂದ್ರ ಅಥವಾ ಗ್ರಾಮ್ ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಇತರೆ ಮಾಹಿತಿಗಳನ್ನು ಓದಿ:

ಗೃಹಲಕ್ಷ್ಮೀ ಯೋಜನೆಯ 2000 ರೂ. ಹಣ ಜಮಾ, DBT Status ಚೆಕ್ ಮಾಡಿ

ಉಚಿತ ಹೊಲಿಗೆ ಯಂತ್ರ ಯೋಜನೆ 2024

ರೈತರಿಗೆ ಗುಡ್ ನ್ಯೂಸ್: ಯಂತ್ರೋಪಕರಣ ಖರೀದಿಸಲು ಸಬ್ಸಿಡಿ

ಕೃಷಿ ಭಾಗ್ಯ ಯೋಜನೆ: ರೈತರಿಗೆ ಶೇ.90 ರಷ್ಟು ಸಹಾಯಧನ

Leave a Comment