ಗೃಹಲಕ್ಷ್ಮಿ ಯೋಜನೆ: ಈ ಕಂತಿನ ಹಣ ನಿಮಗೆ ಬಂತಾ..? | Gruhalakshmi 4th Installment Rs.2000 Credited

Telegram Group Join Now
WhatsApp Group Join Now

ನಮಸ್ಕಾರ ಎಲ್ಲರಿಗೂ.. ಸಿಎಂ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದ ಜಾರಿಗೆ ತಂದಿರುವ ಗೃಹಲಕ್ಷ್ಮೀ ಯೋಜನೆಯ (Gruhalakshmi 4th Installment) ನಾಲ್ಕನೇ ಕಂತಿನ ಹಣ ವರ್ಗಾವಣೆ ಮಾಡಿರುವ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಈ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿರುವ ಅರ್ಹ ಫಲಾನುಭವಿಗಳಿಗೆ ಇದು ಉಪಯುಕ್ತ ಮಾಹಿತಿಯಾಗಿದೆ.

ರಾಜ್ಯದಲ್ಲಿ ಅಧಿಕಾರಕ್ಕೆ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಲಾಗಿತ್ತು. ಚುನಾವಣೆ ಸಂಧರ್ಭದಲ್ಲಿ ತಿಳಿಸಿದಂತೆ 5 ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಅರ್ಹ ಫಲಾನುಭವಿಗಳಿಗೆ ಸರ್ಕಾರ ಈ ಯೋಜನೆಗಳನ್ನು ಸೌಲಭ್ಯ ನೀಡಲಾಗುತ್ತಿದೆ.

Gruhalakshmi 4th Installment Credited

ಕಾಂಗ್ರಸ್‌ ಸರ್ಕಾರ ಅನುಷ್ಠಾನಕ್ಕೆ ತಂದಿರುವ ಪಂಚ ಯೋಜನೆಗಳು ಜನರಲ್ಲಿ ಬಹಳ ಪ್ರಭಾವ ಬೀರಿದ್ದು, ರಾಜ್ಯದ ಮಹಿಳೆಯರಿಗೆ ತುಂಬ ಅನುಕೂಲ ಆಗಿದೆ. 2023ರ ಆಗಸ್ಟ 30 ರಿಂದ ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೆ ತರಲಾಗಿದೆ. ಈಗಾಗಲೇ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ 2,000 ರೂ. ಜಮಾ ಮಾಡಲಾಗಿದೆ.

ಗೃಹ ಲಕ್ಷ್ಮೀ ಯೋಜನೆಯ 4ನೇ ಕಂತಿನ ಹಣವನ್ನು ಜಿಲ್ಲಾವಾರು ವರ್ಗಾವಣೆ ಮಾಡಲಾಗುತ್ತೀದೆ. ಅರ್ಹ ಫಲಾನುಭವಿಗಳ ಬ್ಯಾಂಕ್‌ ಖಾತೆಗಳಿಗೆ 2,000 ರೂ. ಯನ್ನು Gruhalakshmi DBT ಮೂಲಕ ಸರ್ಕಾರ ಜಮಾ ಮಾಡಿದೆ.

ಎರಡೂ ಕಂತಿನ 2,000 ರೂ. ಜಮಾ:

ನಮ್ಮ ಪರಿಚಯದವರಿಗೆ 3ನೇ ಕಂತಿನ ಹಣ ಜನವರಿ 01, 2024 ರಂದು ಜಮಾ ಆಗಿದ್ದು, ಮತ್ತೆ ನಾಲ್ಕನೇ ಕಂತಿನ 2,000 ರೂ. 03-01-2024 ರಂದು ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಲಾಗಿದೆ.

3ನೇ ಕಂತಿನ ಹಣ ಜಮಾ ಆಗಿರುವ SMS
4ನೇ ಕಂತಿನ ಹಣ ಜಮಾ ಆಗಿರುವ SMS (Gruhalakshmi 4th Installment)

ಕೆಲವೊಮ್ಮೆ ತಾಂತ್ರಿಕ ದೋಷದಿಂದಾಗಿ ಬ್ಯಾಂಕ್‌ ಖಾತೆಗೆ ಹಣ ಜಮಾ ಆಗುವುದು ತಡವಾಗುತ್ತದೆ. ಯಾವುದೇ ಕಾರಣಕ್ಕೂ ಫಲಾನುಭವಿಗಳು ಗಾಬರಿಯಾಗದೆ ಇರುವುದು ಒಳಿತು. ಇನ್ನೂವರೆಗೂ ನಿಮಗೆ ಒಂದೂ ಕಂತಿನ ಹಣ ಜಮಾ ಆಗಿಲ್ಲವಾದರೆ ನಿಮ್ಮ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು.

ಕೆಲವೊಬ್ಬರಿಗೆ ಗೃಹಲಕ್ಷ್ಮೀ ಯೋಜನೆಯ 2,000 ರೂ. ತಾಂತ್ರಿಕ ಸಮಸ್ಯೆಯಿಂದಾಗಿ ದೊರೆತಿಲ್ಲ. ದಾಖಲೆಗಳಲ್ಲಿ ದೋಷ ಇರುವುದರಿಂದ ಹಣ ವರ್ಗಾವಣೆ ಆಗಿಲ್ಲ ಎನ್ನುತ್ತಾರೆ ಅಧಿಕಾರಿಗಳು. ಅಂತಹ ಫಲಾನುಭವಿಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಅಥವಾ ಅಂಗನವಾಡಿ ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು.

ಕೊನೆಯ ಮಾತು: ನಾವು ನೀಡಿರುವ Gruha Lakshmi 4th Installment ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಇದೇ ರೀತಿಯ ಯೋಜನೆಗಳ ಮಾಹಿತಿಗಳನ್ನು ಪಡೆಯಲು kannadasiri.in ಭೇಟಿ ನೀಡಿ.

ಈ ಕೇಳಗಿನ ಮಾಹಿತಿ ಓದಿ:

ಗೃಹಲಕ್ಷ್ಮಿ : ನಿಮ್ಮ ಖಾತೆಗೆ 2000 ರೂ. ಹಣ ಜಮಾ ಆಗಿದೆಯೇ?

ಕಾರ್ಮಿಕರಿಗೆ ಸಿಹಿ ಸುದ್ದಿ: ಲೇಬರ್‌ ಕಾರ್ಡ್‌ ನೋಂದಣಿ ಶುರು

ಯುವ ನಿಧಿ ಅರ್ಜಿ ಸಲ್ಲಿಸಿ, 3000 ರೂ. ಪಡೆಯಿರಿ

ಶೈಕ್ಷಣಿಕ ಪ್ರೋತ್ಸಾಹ ಧನ ಸಹಾಯಕ್ಕಾಗಿ ಅರ್ಜಿ ಆಹ್ವಾನ

1 thought on “ಗೃಹಲಕ್ಷ್ಮಿ ಯೋಜನೆ: ಈ ಕಂತಿನ ಹಣ ನಿಮಗೆ ಬಂತಾ..? | Gruhalakshmi 4th Installment Rs.2000 Credited”

  1. Thank for our government I had received all the four months amount of gruhalakshmi which was very useful thank u once again🙏

    Reply

Leave a Comment