ಎಲ್ಲರಿಗೂ ನಮಸ್ಕಾರ, ಗೃಹಲಕ್ಷ್ಮೀ ಯೋಜನೆಯ ಹಣವು ನಿಮ್ಮ ಖಾತೆಗೆ ಜಮಾ ಆಗಿಲ್ಲವೇ..? ಯಾಕೆ ಗೃಹಲಕ್ಷ್ಮೀ (Gruhalakshmi Scheme) ಹಣ ನಿಮಗೆ ಸಂದಾಯ ಆಗುತ್ತಿಲ್ಲ ಎಂದು ಚಿಂತಿಸುತ್ತಿದ್ದೀರಾ..? ಹಾಗಿದ್ದರೇ ಚಿಂತೆ ಬಿಡಿ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ ಓದಿರಿ.
ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮೀ ಯೋಜನೆಯು ಒಂದಾಗಿದೆ. ಈ ಯೋಜನೆಯ ಮೂಲಕ ಪ್ರತಿ ತಿಂಗಳು ಮನೆ ಯಜಮಾನಿ ಮಹಿಳೆಗೆ 2,000 ರೂ. ಅನ್ನು ಸಂದಾಯ ಮಾಡಲಾಗುತ್ತದೆ. ಇನ್ನು ಮುಂದೆ ಎರಡು ಲಕ್ಷಕ್ಕೂ ಅಧಿಕ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ ಹಣ ಬರುವುದಿಲ್ಲ.
Gruhalakshmi Scheme Update:
ಆದಾಯ ತೆರಿಗೆ ಮತ್ತು GST ಪಾವತಿಸುವ ಮಹಿಳೆಯರನ್ನು ಗೃಹಲಕ್ಷ್ಮೀ ಯೋಜನೆಯ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಆದಾಯ ತೆರಿಗೆ (ಐಟಿ) ಹಾಗೂ GST ಪಾವತಿಸುವವರ ಪಟ್ಟಿ ಸಿದ್ಧವಾಗಿದ್ದು, ಅಂತಹ ಫಲಾನುಭವಿಗಳಿ ಗೃಹಲಕ್ಷ್ಮೀ ಯೋಜನೆಯ ಹಣವು ಇನ್ನು ಮುಂದೆ ಸಿಗುವುದಿಲ್ಲ.
ಯಾರಿಗೆ ಗೃಹಲಕ್ಷ್ಮೀ ಯೋಜನೆಯ (Gruhalakshmi Scheme) ಹಣವು ಜಮಾ ಆಗಿರುವುದಿಲ್ಲ ಅಂತವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯಾಲಯಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು. ಎನ್ಪಿಸಿಐ ಇನ್ ಆಕ್ಟಿವ್ ಆದ ಫಲಾನುಭವಿಗಳಿಗೂ ಹಣ ಖಾತೆಗೆ ಜಮೆಯಾಗಿಲ್ಲ.
ನಿಮ್ಮ ಖಾತೆಗೆ ಬ್ಯಾಂಕ್ ಖಾತೆ ಆಧಾರ್ ಲಿಂಕ್ ಆಗಿದೆಯಾ ಎಂದು ಚೆಕ್ ಮಾಡಿಸಿಕೊಳ್ಳಿ, ತಾಂತ್ರಿಕ ಕಾರಣದಿಂದ ಹಣವು ಸಂದಾಯವಾಗದೆ ಇದ್ದರೆ ಸಮಸ್ಯೆಗಳನ್ನು ಸರಿಪಡಿಸಿಕೊಂಡ ನಂತರ ಗೃಹಲಕ್ಷ್ಮೀ ಯೋಜನೆಯ ಹಣವು ನಿಮ್ಮ ಖಾತೆಗೆ ಜಮೆ ಆಗಲಿದೆ.
ರಾಜ್ಯದಲ್ಲಿ 1.28 ಕೋಟಿ ಮಹಿಳೆಯರು ಗೃಹಲಕ್ಷ್ಮೀ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ. ಅದರಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಮಹಿಳೆಯರು ಐಟಿ, ಜಿಎಸ್ಟಿ ಪಾವತಿಸುವ ಕಾರಣದಿಂದ ಅಂತವರಿಗೆ ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳ ಪಟ್ಟಿಯಿಂದ ಕೈಬಿಡಲಾಗಿದೆ. ತುಮಕೂರು ಜಿಲ್ಲೆಯಲ್ಲಿಯೆ ಐಟಿ, ಜಿಎಸ್ಟಿ ಕಟ್ಟುವ 7,343 ಮಹಿಳೆಯರು ಇದ್ದರೆ. ಅವರಿಗೆ ಇನ್ನು ಮುಂದೆ ಗೃಹಲಕ್ಷ್ಮೀ ಯೋಜನೆಯ ಹಣ ಸಿಗುವುದಿಲ್ಲ.
ಇತರೆ ಮಾಹಿತಿಗಳನ್ನು ಓದಿ: