ಬೆಳೆ ವಿಮೆ Status Check ಮಾಡಿ, ಹಣ ಬಿಡುಗಡೆ ಆಗಿದೆಯಾ ನೋಡಿ | Karnataka Crop Insurance Status Check 2024 @samrakshane.karnataka.gov.in

Telegram Group Join Now
WhatsApp Group Join Now

ಎಚ್ಚರಿಕೆ: ನಾವು ಬರೆದ ಕಂಟೆಂಟ್‌ ಮತ್ತು ನಾವು Create ಮಾಡಿದ Image ಗಳು ನಮ್ಮ Copyright ವ್ಯಾಪ್ತಿಗೆ ಒಳಪಟ್ಟಿರುತ್ತವೆ. ನಮ್ಮ ಒಪ್ಪಿಗೆ ಇಲ್ಲದೆ ನಮ್ಮ ಕಂಟೆಂಟ್‌ ಕದ್ದರೆ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು. ನಮ್ಮ ಕಂಟೆಂಟ್‌ ಕದ್ದಿರುವುದು ಈಗಾಗಲೇ ನಮ್ಮ ಗಮನಕ್ಕೆ ಬಂದಿದ್ದು ಅಂತವರು ಕೂಡಲೇ ಡಿಲೀಟ್‌ ಮಾಡಿ.

ನಮಸ್ಕಾರ ರೈತ ಮಿತ್ರರೇ.. ನೀವು ಕೂಡ ಬೆಳೆ ವಿಮೆಯ ಅರ್ಜಿ ಸಲ್ಲಿಸಿದ್ದೀರಾ..? ನಿಮ್ಮ ಬೆಳೆ ವಿಮೆಯ ಅರ್ಜಿ ಸ್ಥಿತಿಯನ್ನು ತಿಳಿದಕೊಳ್ಳಬೇಕಾ..? ಹಾಗಿದ್ದರೆ ಈ ಲೇಖನ ನಿಮಗಾಗಿ ಇದೆ. ಇಲ್ಲಿ ನಾವು ಬೆಳೆ ವಿಮೆಯ ಅರ್ಜಿ ಸ್ಥಿತಿಯನ್ನು (Karnataka Crop Insurance Status Check) ಯಾವ ರೀತಿಯಾಗಿ ಚೆಕ್ ಮಾಡಬೇಕು ಎಂಬುದನ್ನು ಸುಲಭ ಹಂತಗಳಲ್ಲಿ ವಿವರಿಸಲಾಗಿದೆ.

ಈ ವರ್ಷ ದೇಶದ ಅನೇಕ ಕಡೆಗಳಲ್ಲಿ ಮಳೆಯಾಗದೆ ಬರಗಾಲ ಸ್ಥಿತಿ ನಿರ್ಮಾಣವಾಗಿದೆ. ಮಳೆ ನಂಬಿರುವ ನಮ್ಮ ಅನ್ನದಾತರಿಗೆ ಪ್ರಕೃತಿ ಬರೆ ನೀಡಿದೆ. ಇದು ತುಂಬ ನೋವಿನ ಸಂಗತಿ. ಇದರಿಂದಾಗಿ ಮಳೆಯನ್ನು ಅವಲಂಬಿತರಾಗಿವ ರೈತರು ಸರಿಯಾಗಿ ಬೆಳೆ ಬೆಳೆಯಲು ಆಗದೆ ಕಂಗಾಲಾಗಿದ್ದಾರೆ.

Karnataka Crop Insurance Status Check 2024

ಇಂತಹ ಸಂದರ್ಭದಲ್ಲಿ ಬೆಳೆ ವಿಮೆ ಬಹು ದೊಡ್ಡ ಪಾತ್ರವನ್ನು ವಹಿಸುತ್ತದೆ. ರೈತರಿಂದ ಒಂದಿಷ್ಟು ಪ್ರೀಮಿಯಂ ಕಟ್ಟಿಸಿಕೊಂಡು ಸರ್ಕಾರ ಮತ್ತು ವಿಮಾ ಕಂಪನಿಗಳು ಬೆಳೆ ವಿಮೆ ನೀಡುತ್ತವೆ.

ಬೆಳೆ ವಿಮೆಗಾಗಿ ನೀವು ಅರ್ಜಿ ಸಲ್ಲಿಸಿದ್ದರೆ ಸರ್ಕಾರದ ಸಂರಕ್ಷಣೆ ಬೆಳೆ ವಿಮೆ 2024 ವೆಬ್‌ಸೈಟ್‌ ಮೂಲಕ ನೀವು Samrakshane Status Check ಮಾಡಬಹುದಾಗಿದೆ. ಈ ಕೇಳಗಿನ ವಿಧಾನವನ್ನು ಅನುಸರಿಸಿ ನಿಮ್ಮ ಅರ್ಜಿಯ ಸ್ಥಿತಿ ನೋಡಿ.

Step-1: ಮೊದಲನೇಯದಾಗಿ ಕೇಳಗೆ ನೀಡಿರುವ ಅಧಿಕೃತ ವೆಬ್‌ಸೈಟ್‌ ಮೂಲಕ Crop Insurance Status ಅನ್ನು ಚೆಕ್‌ ಮಾಡಬಹುದು. ಈ ಕೇಳಗಿನ Photo ದಲ್ಲಿ ಮಾರ್ಕ್‌ ಮಾಡಿರುವಂತೆ 2024 ಮತ್ತು Kharif ಅನ್ನು ಆಯ್ಕೆ ಮಾಡಿ Go ಬಟನ್‌ ಮೇಲೆ ಕ್ಲಿಕ್‌ ಮಾಡಿ.

Step-2: ನಂತರ ಹೊಸ ಪುಟ ಓಪನ್‌ ಆಗುತ್ತದೆ. ಅಲ್ಲಿ Check Status ಎಂದಿರುತ್ತದೆ ಅದರ ಮೇಲೆ ಕ್ಲಿಕ್‌ ಮಾಡಿ.

Step-3: ಮತ್ತೊಂದು ಹೊಸ ಪುಟ ತೆರೆಯುತ್ತದೆ ಅದರಲ್ಲಿ Proposal, Mobile No, Aadhaar ಅದರಲ್ಲಿ ಒಂದನ್ನು ಆಯ್ಕೆ ಮಾಡಿ ನೀವು ಬೆಳೆ ವಿಮೆ ಅರ್ಜಿ ಸಲ್ಲಿಸುವಾಗ ನೀಡಿದ ಮೊಬೈಲ್‌ ನಂಬರ್‌ ಮತ್ತು Captcha ಎಂಟರ್‌ ಮಾಡಿ Search ಬಟನ್‌ ಮೇಲೆ ಕ್ಲಿಕ್‌ ಮಾಡಿ.

Step-4: ನೀವು ಸಲ್ಲಿಸಿರುವ ಅರ್ಜಿ ಸ್ಥಿತಿ ಮತ್ತು ಯಾವ ಕಂಪನಿ ನಿಮಗೆ ಬೆಳೆ ವಿಮೆ ನೀಡಲಿದೆ ಎಂಬ ಮಾಹಿತಿ ದೊರೆಯುತ್ತದೆ. ಹೆಚ್ಚಿನ ವಿವರ ಪಡೆಯಲು Select ಎಂಬುದರ ಮೇಲೆ ಕ್ಲಿಕ್‌ ಮಾಡಿ.

Step-5: ಅಂತಿಮವಾಗಿ ನಿಮ್ಮ ಅರ್ಜಿ ಯಾವ ಹಂತದಲ್ಲಿ ಇದೆ ಎಂಬುದು ತಿಳಿದು ಬರುತ್ತದೆ. ಅರ್ಜಿ ಸ್ವೀಕೃತವಾಗಿದೆಯಾ ಅಥವಾ ರಿಜೆಕ್ಟ್‌ ಆಗಿದೆ ಎಂಬ ಮಾಹಿತಿಯನ್ನು ತಿಳಿಯಬಹುದು.

Karnataka Crop Insurance Status

Samrakshane Karnataka Gov in 2024 Status Check Links:
Samrakshane Status Check Link: Check Status
ಅಧಿಕೃತ ವೆಬ್‌ಸೈಟ್:‌ samrakshane.karnataka.gov.in

ಅಂತಿಮ ನುಡಿ: ರೈತ ಮಿತ್ರರೇ ನಾವು ನೀಡಿರುವ Bele Vime Status Check ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ನಾವು ಭಾವಿಸುತ್ತೆವೆ. ಇದೆ ರೀತಿಯ ಮಾಹಿತಿ ಪಡೆಯಲು ನಮ್ಮ WhatsApp ಗ್ರುಪ್‌ ಗೆ Join ಆಗಿರಿ ಮತ್ತು Notification ಅನ್ನು On ಮಾಡಿಕೊಳ್ಳಿ. ಧನ್ಯವಾದಗಳು.

ಇತರೆ ಮಾಹಿತಿಗಳನ್ನು ಓದಿ

ರೈತರಿಗೆ ಹೈನುಗಾರಿಕೆ, ಕುರಿ ಕೋಳಿ ಸಾಕಾಣಿಕೆಗೆ ಕಡಿಮೆ ಬಡ್ಡಿದರ ಸಾಲ ಸೌಲಭ್ಯ

ಕೃಷಿ ಭಾಗ್ಯ ಯೋಜನೆಯಡಿ ಸಬ್ಸಿಡಿಗಾಗಿ ಅರ್ಜಿ ಆಹ್ವಾನ

Leave a Comment