ರೈತರಿಗೆ ಗುಡ್‌ ನ್ಯೂಸ್: ಕೃಷಿ ಭಾಗ್ಯ ಯೋಜನೆ, ಕೃಷಿ ಕಾರ್ಯಕ್ಕೆ ಸಬ್ಸಿಡಿ | Krishi Bhagya Scheme 2024 Application

Telegram Group Join Now
WhatsApp Group Join Now

ಎಚ್ಚರಿಕೆ: ನಾವು ಬರೆದ ಕಂಟೆಂಟ್‌ ಮತ್ತು ನಾವು Create ಮಾಡಿದ Image ಗಳು ನಮ್ಮ Copyright ವ್ಯಾಪ್ತಿಗೆ ಒಳಪಟ್ಟಿರುತ್ತವೆ. ನಮ್ಮ ಒಪ್ಪಿಗೆ ಇಲ್ಲದೆ ನಮ್ಮ ಕಂಟೆಂಟ್‌ ಕದ್ದರೆ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು. ನಮ್ಮ ಕಂಟೆಂಟ್‌ ಕದ್ದಿರುವುದು ಈಗಾಗಲೇ ನಮ್ಮ ಗಮನಕ್ಕೆ ಬಂದಿದ್ದು ಅಂತವರು ಕೂಡಲೇ ಡಿಲೀಟ್‌ ಮಾಡಿ.

ನಮಸ್ಕಾರ, ಕೃಷಿ ಭಾಗ್ಯ ಯೋಜನೆಯ ಅಡಿಯಲ್ಲಿ ಸಹಾಯಧನ ಪಡೆದುಕೊಳ್ಳಬೇಕೆ..? ಈ ಲೇಖನ ನಿಮಗಾಗಿ. ಸರ್ಕಾರದಿಂದ Krishi Bhagya Scheme ಅಡಿಯಲ್ಲಿ ವಿವಿಧ ಕೃಷಿ ಕಾರ್ಯಗಳಿಗೆ ಸಬ್ಸಿಡಿ ನೀಡಲಾಗುತ್ತಿದೆ. ಅರ್ಹ ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು.

2023-24 ನೇ ಸಾಲಿನಲ್ಲಿ ರಾಜ್ಯದ 24 ಜಿಲ್ಲೆಗಳ 106 ತಾಲ್ಲೂಕುಗಳಲ್ಲಿ ಪ್ಯಾಕೇಜ್ ಮಾದರಿಯಲ್ಲಿ ಕೃಷಿ ಭಾಗ್ಯ ಯೋಜನೆಯನ್ನು ಅನುಷ್ಠಾನ ಮಾಡಲು ಸರ್ಕಾರ ಮುಂದಾಗಿದೆ. ಅಂತರ್ಜಲ ವೃದ್ಧಿ ಮತ್ತು ಮಳೆಯಾಶ್ರಿತ ಕೃಷಿ ಭೂಮಿಯಲ್ಲಿ ಬೇಸಿಗೆಯಲ್ಲಿಯೂ ಕೃಷಿ ಚಟುವಟಿಕೆ ಕೈಗೊಳ್ಳಲು ಅನುಕೂಲ ಕಲ್ಪಿಸಲು ಈ ಯೋಜನೆ.

Krishi Bhagya Scheme 2024

ಕೃಷಿ ಭಾಗ್ಯ ಯೋಜನೆಯ ಅಡಿಯಲ್ಲಿ ಕೃಷಿ ಹೊಂಡ ನಿರ್ಮಾಣ, ಕ್ಷೇತ್ರ ಬದು ನಿರ್ಮಾಣ, ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ ನಿರ್ಮಾಣ, ಕೃಷಿ ಹೊಂಡದಿಂದ ನೀರು ಎತ್ತಲು ಪಂಪ್ ಸೆಟ್ ಖರೀದಿಸಲು ಅವಕಾಶ, ನೀರನ್ನು ಬೆಳೆಗೆ ಹಾಯಿಸಲು ತುಂತುರು, ಹನಿ ನೀರಾವರಿ ಘಟಕ ಅನುಷ್ಠಾನಕ್ಕೆ ಸಬ್ಸಿಡಿ ನೀಡಲಾಗುತ್ತದೆ.

ಕೃಷಿ ಭಾಗ್ಯ ಪ್ಯಾಕೇಜ್‌ನಲ್ಲಿ ಈ ಕೆಳಕಂಡ ಘಟಕಗಳು ಒಳಗೊಂಡಿದ್ದು, ಯೋಜನೆಯ ಸಮಗ್ರ ಸದುಪಯೋಗ ಪಡೆಯಲು ರೈತ ಬಾಂಧವರಲ್ಲಿ ವಿನಂತಿ ಎಂದು ಸರ್ಕಾರದಿಂದ ತಿಳಿಸಲಾಗಿದೆ.

  • ಕ್ಷೇತ್ರ ಬದು ನಿರ್ಮಾಣ
  • ಕೃಷಿ ಹೊಂಡ ನಿರ್ಮಾಣ
  • ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ
  • ಕೃಷಿ ಹೊಂಡದಿಂದ ನೀರು ಎತ್ತಲು ಪಂಪ್ ಸೆಟ್
  • ನೀರನ್ನು ಬೆಳೆಗೆ ಹಾಯಿಸಲು ಸೂಕ್ಷ್ಮ (ತುಂತುರು/ಹನಿ) ನೀರಾವರಿ

Krishi Bhagya Scheme 2024 ದಾಖಲೆಗಳು:

  • ರೈತರ ಅರ್ಜಿ
  • ರೈತರ ಭಾವಚಿತ್ರ
  • FID (FID ಇಲ್ಲವಾದಲ್ಲಿ ಆಧಾ‌ರ್ ಪ್ರತಿ, ಪಹಣಿ ಪ್ರತಿ, ಜಾತಿ ಪ್ರಮಾಣ ಪತ್ರ ಹಾಗೂ ಬ್ಯಾಂಕ್ ಪಾಸ್ ಬುಕ್ ಪ್ರತಿ)

ಅರ್ಜಿ ಸಲ್ಲಿಸುವುದು ಹೇಗೆ?:
ಅರ್ಹ ರೈತರು ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಸ್ವೀಕೃತವಾದ ಅರ್ಹ ಅರ್ಜಿಗಳ ಜೇಷ್ಠತೆಯನ್ವಯ ಹಾಗೂ ಹೋಬಳಿಗೆ ನಿಗದಿಪಡಿಸಿದ ಗುರಿಗಳನ್ವಯ ಕಾರ್ಯಕ್ರಮ ಅನುಷ್ಠಾನ ಮಾಡಲಾಗುತ್ತದೆ ಎಂದು ಕೃಷಿ ಇಲಾಖೆ ತಿಳಿಸಿದೆ.

ಇತರೆ ಮಾಹಿತಿಗಳನ್ನು ಓದಿ:

ರೈತರಿಗೆ ಹೈನುಗಾರಿಕೆ, ಕುರಿ ಕೋಳಿ ಸಾಕಾಣಿಕೆಗೆ ಕಡಿಮೆ ಬಡ್ಡಿದರ ಸಾಲ ಸೌಲಭ್ಯ

ಕಾರ್ಮಿಕರಿಗೆ ಸಿಹಿ ಸುದ್ದಿ: ಲೇಬರ್‌ ಕಾರ್ಡ್‌ ನೋಂದಣಿ

ಹೊಸ ರೇಷನ್‌ ಕಾರ್ಡ್‌ ಅರ್ಜಿ

Leave a Comment