ಲೇಬರ್ ಕಾರ್ಡ್ ಹೊಂದಿರುವವರಿಗೆ ಪ್ರಮುಖ ಮಾಹಿತಿ | Labour Card Scheme Karnataka Renewal 2024

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ರಾಜ್ಯ ಸರ್ಕಾರವು ಕಾರ್ಮಿಕರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಕಾರ್ಮಿಕ ಕಾರ್ಡ್ (Labour Card Scheme) ಹೊಂದಿರುವವರಿಗೆ ಸರ್ಕಾರವು ನೀಡುವ ಎಲ್ಲಾ ಸೌಲಭ್ಯಗಳು ದೊರೆಯುತ್ತವೆ. ನೀವು ಕೂಡ ಕಾರ್ಮಿಕ ಕಾರ್ಡ್ ಹೊಂದಿದ್ದೀರಾ..? ಕಾರ್ಮಿಕ ಕಾರ್ಡ್ ಹೊಂದಿರುವ ಫಲಾನುಭವಿಗಳು ಕೂಡಲೆ ಈ ಕೆಲಸ ಮಾಡಿಸಿಕೊಳ್ಳಿ.

ಕಾರ್ಮಿಕ ಮಂಡಳಿಯು ಕಾರ್ಮಿಕರಿಗೆ ಹಾಗೂ ಅವರ ಕುಟುಂಬದ ಸದಸ್ಯರುಗಳಿಗೆ ಹಲವಾರು ಸೌಲಭ್ಯಗಳನ್ನು ಇಲಾಖೆಯು ನೀಡುತ್ತದೆ. ಅರ್ಹ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ಈ ಕೆಳಗಿನ ಎಲ್ಲ ಸೌಲಭ್ಯಗಳು ಸಿಗಲಿದೆ.

Labour Card Scheme Karnataka:

  • ಶೈಕ್ಷಣಿಕ ಸಹಾಯಧನ
  • ವೈದ್ಯಕೀಯ ಸಹಾಯಧನ
  • ಪಿಂಚಣಿ ಸೌಲಭ್ಯ
  • ಅಪಘಾತ ಪರಿಹಾರ
  • ಹೆರಿಗ ಸೌಲಭ್ಯ
  • ತಾಯಿ ಮಗು ಸಹಾಯಹಸ್ತಾ
  • ಮದುವೆ ಸಹಾಯಧನ
  • ಪ್ರಮುಖ ವೈದ್ಯಕೀಯ ವೆಚ್ಚ ಸಹಾಯಧನ
  • ದುರ್ಬಲತೆ ಪಿಂಚಣಿ ಮುಂದುವರಿಕೆ
  • ಪಿಂಚಣಿ ಮುಂದುವರಿಕೆ
  • ದುರ್ಬಲತೆ ಪಿಂಚಣಿ ಸೌಲಭ್ಯಗಳು
  • ಅಂತ್ಯಕ್ರಿಯೆ ವೆಚ್ಚ
  • ಉಚಿತ ಸಾರಿಗೆ ಬಸ್‌ ಪಾಸ್ ಸೌಲಭ್ಯ
  • ಶ್ರಮಸಾಮರ್ಥ್ಯ ಟೂಲ್ ಕಿಟ್

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ಕಾರ್ಮಿಕರ ಕಾರ್ಡ್ ಅನ್ನು ನೀಡುತ್ತಾರೆ. ನೋಂದಾಯಿತ ಕಟ್ಟಡ ಕಾರ್ಮಿಕರು ತಮ್ಮ ಕಾರ್ಮಿಕರ ಕಾರ್ಡ್ (Labour Card Scheme) ಗಳನ್ನು ನವೀಕರಿಸುವುದು ಕಡ್ಡಾಯವಾಗಿದ್ದು, ನವೀಕರಣಕ್ಕೆ ಕಾರ್ಮಿಕ ಇಲಾಖೆಯು ಅರ್ಜಿಯನ್ನು ಆಹ್ವಾನಿಸಿದೆ.

ನೋಂದಾಯಿತ ಕಟ್ಟಡ ಕಾರ್ಮಿಕರು ಮಂಡಳಿಯು ನೀಡುವ ಉದ್ಯೋಗ ದೃಢೀಕರಣ ಪತ್ರ, ಸ್ವಯಂ ದೃಢೀಕರಣ ಪತ್ರ, ಮಂಡಳಿಯ ವತಿಯಿಂದ ವಿತರಿಸಿದ ಕಾರ್ಮಿಕ ಕಾರ್ಡ್ (Labour Card) , ಹಾಗೂ ನಿಮ್ಮ ಆಧಾರ್ ಕಾರ್ಡ್ ಪ್ರತಿಗಳನ್ನು ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ನೋಂದಣಿ ನವೀಕರಣ ಮಾಡಿಕೊಳ್ಳಬಹುದು.

ಕಾರ್ಮಿಕ ಕಾರ್ಡ್ ನೋಂದಣಿ ನವೀಕರಣಕ್ಕೆ ಬೇಕಾಗುವ ಅಗತ್ಯ ದಾಖಲೆಗಳು:

  • ಆಧಾರ್ ಕಾರ್ಡ್ ಪ್ರತಿ
  • ಉದ್ಯೋಗ ದೃಢೀಕರಣ ಪತ್ರ
  • ಸ್ವಯಂ ದೃಢೀಕರಣ ಪತ್ರ
  • ಮಂಡಳಿಯು ನೀಡುವ ಕಾರ್ಮಿಕ ಕಾರ್ಡ್

ಇತರೆ ಮಾಹಿತಿಗಳನ್ನು ಓದಿ:

ಗೃಹಲಕ್ಷ್ಮೀ ಯೋಜನೆ DBT Status ಚೆಕ್ ಮಾಡಿ

ಉಚಿತ ಹೊಲಿಗೆ ಯಂತ್ರ ಯೋಜನೆ 2024

Leave a Comment