ಎಲ್ಲರಿಗೂ ನಮಸ್ಕಾರ, ಪ್ರತಿ ತಿಂಗಳ ಮೊದಲ ದಿನದಂದು LPG ಸಿಲಿಂಡರ್ ನ ಬೆಲೆಯಲ್ಲಿ ಏರಿಳಿತಗಳು ಆಗುತ್ತಿರುತ್ತವೆ. ಇಂದು ಕೂಡ ಎಲ್‌ಪಿಜಿ ಸಿಲಿಂಡರ್’ನ (LPG Gas Cylinder) ಬೆಲೆಯಲ್ಲಿ ಬದಲಾವಣೆಗಳಾಗಿವೆ. ಇಂದಿನಿಂದಲೇ ಹೊಸ ದರಗಳು ಅನ್ವಯವಾಗಲಿದೆ. ಯಾವ ಸಿಲಿಂಡರ್’ನ ಬೆಲೆಯಲ್ಲಿ ಏರಿಕೆಯಾಗಿದೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ ಓದಿರಿ.
ಇಂದು ತಿಂಗಳ ಮೂದಲ ದಿನ 01 ಅಕ್ಟೋಬರ್ 2024 ರಿಂದ ಇಂಧನ ಕಂಪನಿಗಳು LPG ಸಿಲಿಂಡರ್’ನ ಬೆಲೆಯಲ್ಲಿ ಹೆಚ್ಚಳ ಮಾಡಿದೆ. ವಾಣಿಜ್ಯ ಬಳಕೆಯ 19kg LPG ಸಿಲಿಂಡರ್ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದ್ದು, ಗೃಹ ಬಳಕೆಯ 14kg ಎಲ್ ಪಿಜಿ ಸಿಲಿಂಡರ್ ನ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
Oil ಅಧಿಕೃತ ವೆಬ್‌ಸೈಟ್ ಪ್ರಕಾರ, 19 kg ವಾಣಿಜ್ಯ ಸಿಲಿಂಡರ್‌ನ ಬೆಲೆಯಲ್ಲಿ ಏರಿಕೆಯಾಗಿದ್ದು, ಹೊಸ ಬೆಲೆಗಳು ಇಂದಿನಿಂದ ಅನ್ವಯವಾಗಲಿವೆ. ಆದರೆ ಸಿಲಿಂಡರ್’ನ ಬೆಲೆಗಳು ನಗರದಿಂದ ನಗರಕ್ಕೆ ಬೇರೆ ಬೇರೆಯಾಗಿರುತ್ತದೆ. 19 ಕೆಜಿ ಸಿಲಿಂಡರ್’ನ ಬೆಲೆಯಲ್ಲಿ 48 ರೂ. ಏರಿಕೆಯಾಗಿದೆ.
ಕಳೆದ ಮೂರು ತಿಂಗಳಿಂದ 19 kg ವಾಣಿಜ್ಯ ಬಳಕೆಯ LPG ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ ನಿರಂತರ ಬದಲಾವಣೆಯಾಗುತ್ತಿದೆ. ಆದರೆ ತೈಲ ಮಾರುಕಟ್ಟೆ ಕಂಪನಿಗಳು ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಬೆಲೆ ಯಾವುದೇ ಬದಲಾವಣೆ ಮಾಡಿಲ್ಲ.
ಬೆಂಗಳೂರಿನಲ್ಲಿ ಗೃಹ ಬಳಕೆಯ 14 ಕೆಜಿ LPG ಸಿಲಿಂಡರ್ ಬೆಲೆ: 805.50 ರೂ. ಇದೆ ಹಾಗೂ. 19 kg ವಾಣಿಜ್ಯ ಬಳಕೆಯ LPG ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ 48 ರೂ. ಏರಿಕೆಯಾಗಿದ್ದು 19 ಕೆಜಿ ಸಿಲಿಂಡರ್’ನ ಬೆಲೆ 1,818 ರೂ. ಇರಲಿದೆ.
ಇತರೆ ಮಾಹಿತಿಗಳನ್ನು ಓದಿ: