ಎಲ್ಲರಿಗೂ ನಮಸ್ಕಾರ, ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್, ನೀವು ಕೂಡ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬೇಕೆ..? Nikon Scholarship 2024 ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳಿಗೆ ಎಷ್ಟು ವಿದ್ಯಾರ್ಥಿವೇತನ ನೀಡುತ್ತಾರೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ಓದಿರಿ.
ನಿಕಾನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ನಿಕಾನ್ ವಿದ್ಯಾರ್ಥಿವೇತನವನ್ನು ನೀಡುತ್ತಾರೆ. ಛಾಯಾಗ್ರಹಣ-ಸಂಬಂಧಿತ ಕೋರ್ಸ್‌ಗಳಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ನಿಕಾನ್ ಸ್ಕಾಲರ್ಶಿಪ್ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.
12 ನೇ ತರಗತಿಯ ಶಿಕ್ಷಣವನ್ನು ಪೂರ್ಣಗೊಳಿಸಿದ ಮತ್ತು ಪ್ರಸ್ತುತ ಮೂರು ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯೊಂದಿಗೆ ಛಾಯಾಗ್ರಹಣ-ಸಂಬಂಧಿತ ಕೋರ್ಸ್‌ಗಳಿಗೆ ದಾಖಲಾದ ವಿದ್ಯಾರ್ಥಿಗಳಿಗೆ ನಿಕಾನ್ ವಿದ್ಯಾರ್ಥಿವೇತನ ಕಾರ್ಯಕ್ರಮಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಹತೆಗಳು:
- 3 ತಿಂಗಳ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯೊಂದಿಗೆ ಛಾಯಾಗ್ರಹಣ-ಸಂಬಂಧಿತ ಕೋರ್ಸ್‌ಗಳನ್ನು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಹರು.
- ಅರ್ಜಿದಾರರು 12th ಪಾಸಾಗಿರಬೇಕು.
- ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ 6 ಲಕ್ಷ ಕ್ಕಿಂತ ಕಡಿಮೆಯಿರಬೇಕು.
- Nikon India Private Limited/Buddy4Study ಉದ್ಯೋಗಿಗಳ ಮಕ್ಕಳು ಈ ಕಾರ್ಯಕ್ರಮಕ್ಕೆ ಅರ್ಹರಾಗಿರುವುದಿಲ್ಲ.
ಪ್ರಯೋಜನಗಳು:
ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ 1,00,000 ರೂ. ಸ್ಕಾಲರ್ಶಿಪ್ ದೊರೆಯಲಿದೆ.
ಅಗತ್ಯ ದಾಖಲೆಗಳು:
- ಸರ್ಕಾರವು ನೀಡಿದ ಗುರುತಿನ ಪುರಾವೆ (ಆಧಾರ್ ಕಾರ್ಡ್ / ಮತದಾರರ ಗುರುತಿನ ಚೀಟಿ / ಚಾಲನಾ ಪರವಾನಗಿ / ಪ್ಯಾನ್ ಕಾರ್ಡ್)
- ಪಾಸ್‌ಪೋರ್ಟ್ ಗಾತ್ರದ ಪೋಟೋ
- ಆದಾಯ ಪುರಾವೆ
- ಕಾಲೇಜು ಗುರುತಿನ ಚೀಟಿ
- ಪ್ರಸಕ್ತ ವರ್ಷದ ಶಾಲಾ/ಕಾಲೇಜು ದಾಖಲಾತಿ ಪುರಾವೆ
- ಬ್ಯಾಂಕ್ ಖಾತೆ ವಿವರ (ರದ್ದಾದ ಚೆಕ್/ಪಾಸ್‌ಬುಕ್ ಪ್ರತಿ)
- ಹಿಂದಿನ ತರಗತಿಯ ಮಾರ್ಕ್‌ಶೀಟ್‌ಗಳು ಅಥವಾ ಗ್ರೇಡ್ ಕಾರ್ಡ್‌ಗಳು
- ಅಂಗವಿಕಲತೆ ಮತ್ತು ಜಾತಿ ಪ್ರಮಾಣಪತ್ರ (ಅನ್ವಯಿಸಿದರೆ)
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 30-11-2024
Nikon Scholarship 2024 ಪ್ರಮುಖ ಲಿಂಕ್‌ಗಳು:
ಅರ್ಜಿ ಸಲ್ಲಿಕೆ ಲಿಂಕ್: Apply ಮಾಡಿ
ಇತರೆ ಮಾಹಿತಿಗಳನ್ನು ಓದಿ: