PM Kisan 18th Installment: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ; 18 ನೇ ಕಂತಿನ 2000 ರೂ. ಹಣ ಶೀಘ್ರದಲ್ಲೇ ಬಿಡುಗಡೆ

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ನೀವು ಕೂಡ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಿದ್ದೀರಾ..? PM ಕಿಸಾನ್ ಯೋಜನೆಯ 18 ನೇ ಕಂತಿನ ಹಣ (PM Kisan 18th Installment) ಯಾವಾಗ ಜಮಾ ಆಗಲಿದೆ ಎಂದು ಕಾಯುತ್ತಿದ್ದೀರಾ..? ಹಾಗಿದ್ದರೆ ಈ ಲೇಖನದಲ್ಲಿ ಮಾಹಿತಿ ನೀಡಲಿದ್ದೇವೆ ಓದಿರಿ.

ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರವು ರೈತರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ. ಅದರಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ಒಂದಾಗಿದೆ. ಈ ಯೋಜನೆಯ ಮೂಲಕ ಅರ್ಹ ರೈತರಿಗೆ ವಾರ್ಷಿಕವಾಗಿ 6,000 ರೂ. ಗಳನ್ನು ನೇರವಾಗಿ ಅವರ ಖಾತೆಗೆ ಜಮಾ ಮಾಡಲಾಗುತ್ತದೆ.

PM Kisan 18th Installment Amount:

ಈ ಯೋಜನೆಯ ಮೂಲಕ ಸರಕಾರವು ವಾರ್ಷಿಕವಾಗಿ ಆರು ಸಾವಿರ ರೂ.ಗಳ ಈ ಆರ್ಥಿಕ ನೆರವನ್ನು 3 ಕಂತುಗಳ ರೂಪದಲ್ಲಿ ಬಿಡುಗಡೆ ಮಾಡುತ್ತದೆ. ಪ್ರತಿ ನಾಲ್ಕು ತಿಂಗಳ ಅಂತರದಲ್ಲಿ ರೈತರ ಖಾತೆಗಳಿಗೆ 2,000 ರೂ. ಅನ್ನು ನೇರವಾಗಿ ಅವರ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.

PM ಕಿಸಾನ್ ಯೋಜನೆಯ ಲಾಭವನ್ನು ದೇಶಾದ್ಯಂತ ಕೋಟ್ಯಂತರ ರೈತರು ಪಡೆದುಕೊಳ್ಳುತ್ತಿದ್ದಾರೆ. ಯಾರು ಇದುವರೆಗೂ ಇ-ಕೆವೈಸಿ ಮಾಡಿಸಿಕೊಂಡಿರುವುದಿಲ್ಲ ಅಂತವರು ಕೂಡಲೆ ಇ-ಕೆವೈಸಿ ಮಾಡಿಸಿಕೊಳ್ಳಿ. eKYC ಮಾಡಿಸಿಕೊಳ್ಳದ ರೈತರಿಗೆ 18 ನೇ ಕಂತಿನ 2,000 ರೂ. ಬರುವುದಿಲ್ಲ.

PM ಕಿಸಾನ್ ಯೋಜನೆಯ 18 ನೇ ಕಂತಿನ ಹಣವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಈ ಯೋಜನೆಯ ಅಡಿಯಲ್ಲಿ, ಭೂಮಿಯ ದಾಖಲೆಗಳನ್ನು ಪರಿಶೀಲಿಸದ ಮತ್ತು e-KYC ಮಾಡಿಸದ ರೈತರು ಈ ಯೋಜನೆಯ ಲಾಭ ದೊರೆಯುವುದಿಲ್ಲ. ಇತ್ತೀಚಿನ ವರದಿಗಳ ಪ್ರಕಾರ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 18 ನೇ ಕಂತನ್ನು (PM Kisan 18th Installment) ಶೀಘ್ರದಲ್ಲೇ ಬಿಡುಗಡೆ ಮಾಡಬಹುದು. ಆದರೆ 18ನೇ ಕಂತಿನ ಬಿಡುಗಡೆ ದಿನಾಂಕ ಕುರಿತಾಗಿ ಸರ್ಕಾರ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ.

ರೈತರ ತಮ್ಮ ಬ್ಯಾಂಕ್ ಖಾತೆಯನ್ನು ಅವರ ಆಧಾರ್‌ನೊಂದಿಗೆ ಲಿಂಕ್ ಮಾಡಿಕೊಳ್ಳಬೇಕು. ನಿಮ್ಮ PM ಕಿಸಾನ್ ಯೋಜನೆಗೆ e-KYC ಆಗಿದೆಯಾ..? ಎಂದು ಚೆಕ್ ಮಾಡಿಕೊಳ್ಳಿ. ಇ-ಕೆವೈಸಿ ಆಗದಿದ್ದರೆ ಕೂಡಲೇ ಕೆವೈಸಿ ಮಾಡಿಸಿಕೊಳ್ಳಿ. ನಿಮ್ಮ ಹತ್ತಿರದ CSC ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಅಥವಾ pmkisan.gov.in ವೆಬ್‌ಸೈಟ್‌ ಮೂಲಕ ಇ-ಕೆವೈಸಿಯನ್ನು ಪೂರ್ಣಗೊಳಿಸಬಹುದು.

ಇತರೆ ಮಾಹಿತಿಗಳನ್ನು ಓದಿ:

ಗೃಹಲಕ್ಷ್ಮೀ ಯೋಜನೆ DBT Status ಚೆಕ್ ಮಾಡಿ

ಮಹಿಳೆಯರಿಗೆ ಗುಡ್‌ ನ್ಯೂಸ್:‌ ಸರ್ಕಾರದಿಂದ 3 ಲಕ್ಷ ರೂ. ಸಹಾಯಧನ

ಉಚಿತ ಬೋರ್‌ವೇಲ್: ಗಂಗಾ ಕಲ್ಯಾಣ ಯೋಜನೆಗಾಗಿ ಅರ್ಜಿ ಆಹ್ವಾನ

Leave a Comment