ಎಲ್ಲರಿಗೂ ನಮಸ್ಕಾರ, ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬೇಕೆ..? ನೀವೆನಾದರೂ 9,ಮತ್ತು 10ನೇ ತರಗತಿ, 11 ಮತ್ತು 12 ನೇ ತರಗತಿಯಲ್ಲಿ ಓದುತ್ತಿದ್ದೀರಾ..? ಹಾಗಿದ್ದರೆ ಇಲ್ಲಿದೆ ನಿಮಗೆ ಗುಡ್ ನ್ಯೂಸ್. PM Young Achievers Scholarship ಅರ್ಜಿ ಸಲ್ಲಿಸಿದವರಿಗೆ ಎಷ್ಟು ಶಿಷ್ಯವೇತನ ದೊರೆಯಲಿದೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ ಓದಿರಿ.
ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯು ವೈವಿಧ್ಯಮಯ ಭಾರತ (ಪ್ರಧಾನಿ ಯಶಸ್ವಿ) ಪ್ರಧಾನಿ ಯುವ ಸಾಧಕರ ಶಿಷ್ಯವೇತನ ಪ್ರಶಸ್ತಿ ಯೋಜನೆಯನ್ನು ಜಾರಿ ಮಾಡಿದ್ದಾರೆ. ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಈ ವಿದ್ಯಾರ್ಥಿವೇತನ ಕಾರ್ಯಕ್ರಮಕ್ಕೆ 15,000 ಯುವ ಸಾಧಕರನ್ನು ಆಯ್ಕೆ ಮಾಡಿ ಸ್ಕಾಲರ್ಶಿಪ್ ನೀಡಲಾಗುತ್ತದೆ. ನೀವು ಕೂಡ ಅರ್ಜಿ ಸಲ್ಲಿಸಿ ಈ ಶಿಷ್ಯವೇತನದ ಲಾಭವನ್ನು ಪಡದುಕೊಳ್ಳಬಹುದಾಗಿದೆ.
ವೈವಿಧ್ಯಮಯ ಭಾರತಕ್ಕಾಗಿ ಪ್ರಧಾನಿ ಯುವ ಸಾಧಕರ ಶಿಷ್ಯವೇತನ ಪ್ರಶಸ್ತಿ ಯೋಜನೆ:
9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ: 75,000 ರೂ. ವರೆಗೆ ವಾರ್ಷಿಕ ಅನುದಾನ
11 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ: 1,25,000 ರೂ. ವರೆಗೆ ವಾರ್ಷಿಕ ಅನುದಾನ
ಅರ್ಹತೆಗಳು:
- ಅಗ್ರಮಾನ್ಯ ಶಾಲೆಗಳು, ಕಾಲೇಜುಗಳಲ್ಲಿ ಪ್ರವೇಶ ಪಡೆದಿರಬೇಕು.
- ಒಬಿಸಿ, ಇಬಿಸಿ ಮತ್ತು ಡಿಎನ್ ಟಿ ವಿದ್ಯಾರ್ಥಿಗಳಾಗಿರಬೇಕು.
- ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ 2.50 ಲಕ್ಷ ಮೀರಿರಬಾರದು.
- ಅಗ್ರಮಾನ್ಯ ಶಾಲೆಗಳಲ್ಲಿ 9 ಅಥವಾ 11 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು.
- ವಿದ್ಯಾರ್ಥಿಗಳು 8 ಅಥವಾ 10ನೇ ತರಗತಿಯಲ್ಲಿ ಶೇ.60ಕ್ಕಿಂತ ಹೆಚ್ಚಿನ ಅಂಕ ಪಡೆದಿರಬೇಕು.
PM Young Achievers Scholarship 2024 ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್
- ಮೊಬೈಲ್ ನಂಬರ್
- ಜಾತಿ ಪ್ರಮಾಣ ಪತ್ರ.
- ಆದಾಯ ಪ್ರಮಾಣ ಪತ್ರ.
- ಇ-ಮೇಲ್ ಐಡಿ
- ಬ್ಯಾಂಕ್ ಪಾಸ್ ಬುಕ್
- ವಿದ್ಯಾರ್ಥಿಗಳು 8 ಅಥವಾ 10ನೇ ತರಗತಿಯ ಪ್ರಮಾಣ ಪತ್ರ.
- ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ತರಗತಿ ಪ್ರವೇಶ ದಾಖಲೆ.
PM Young Achievers Scholarship 2024 ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-10-2024
ಅರ್ಜಿ ಸಲ್ಲಿಸುವ ವಿಧಾನ:
ವಿದ್ಯಾರ್ಥಿಗಳು ರಾಷ್ಟ್ರೀಯ ಸ್ಕಾಲರ್ಶಿಪ್ ಪೋರ್ಟಲ್ http://socialjustice.gov.in/schemes/ https://scholarships.gov.in ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದುಕೊಂಡು ಅರ್ಜಿ ಸಲ್ಲಿಸಬಹುದು.
ಇತರೆ ಮಾಹಿತಿಗಳನ್ನು ಓದಿ: