ಸಂತೂರ್ ವಿದ್ಯಾರ್ಥಿವೇತನ 2024; 24,000 ರೂ. ಸ್ಕಾಲರ್ಶಿಪ್ ಪಡೆಯಿರಿ | Santoor Scholarship Programme 2024-25 Apply Online @buddy4study.com

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ಪದವಿ ಕೊರ್ಸ್ ಗಳಲ್ಲಿ ಅಧ್ಯಯನ ಮಾಡಬಯಸುವ ವಿದ್ಯಾರ್ಥಿಗಳಿಗೆ ಗುಡ್​ ನ್ಯೂಸ್​. ಯಾವುದು ಈ ವಿದ್ಯಾರ್ಥಿವೇತನ..? Santoor Scholarship Programme ಯಾರು ಅರ್ಜಿ ಸಲ್ಲಿಸಲು ಅರ್ಹರು..? ಅರ್ಜಿ ಸಲ್ಲಿಸವರಿಗೆ ಎಷ್ಟು ಸ್ಕಾಲರ್ಶಿಪ್ ದೊರೆಯಲಿದೆ..? ಅರ್ಜಿ ಸಲ್ಲಿಕೆ ದಿನಾಂಕ ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ಓದಿರಿ.

ಸಂತೂರ್ ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು, 2016-17 ರಲ್ಲಿ ಪ್ರಾರಂಭವಾಯಿತು, ಇದು ವಿಪ್ರೋ ಕನ್ಸ್ಯೂಮರ್ ಕೇರ್ ಮತ್ತು ಲೈಟಿಂಗ್ ಗ್ರೂಪ್ (WCCLG) ಮತ್ತು ವಿಪ್ರೋ ಕೇರ್ಸ್‌ನ ಜಂಟಿ ಉಪಕ್ರಮವಾಗಿದೆ. 12th ನಂತರ ಉನ್ನತ ಶಿಕ್ಷಣವನ್ನು ಮುಂದುವರೆಸಲು ಬಯಸುವ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಯರಿಗೆ ಆರ್ಥಿಕ ನೆರವು ನೀಡುವ ಗುರಿಯನ್ನು ಈ ವಿದ್ಯಾರ್ಥಿವೇತನ ಹೊಂದಿದೆ.

ವಿದ್ಯಾರ್ಥಿಗಳು ತಮ್ಮ ಪದವಿ ಕೊರ್ಸ್ ಗಳನ್ನು ಪೂರ್ಣಗೊಳಿಸುವವರೆಗೆ ಆರ್ಥಿಕ ಬೆಂಬಲವನ್ನು ನೀಡುತ್ತಾರೆ. ಯುವತಿಯರಿಗಾಗಿ ಸಂತೂರ್ ವಿದ್ಯಾರ್ಥಿವೇತನ ಕಾರ್ಯಕ್ರಮದ ಒಂಬತ್ತನೇ ಆವೃತ್ತಿಯನ್ನು ಪ್ರಾರಂಭಿಸಲಾಗಿದೆ‌. ಆಂಧ್ರ ಪ್ರದೇಶ, ಛತ್ತೀಸ್‌ಗಢ, ಕರ್ನಾಟಕ ಮತ್ತು ತೆಲಂಗಾಣದಲ್ಲಿ ಮಹಿಳಾ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಬಹುದು.

Santoor Scholarship Programme ಅರ್ಹತೆಗಳು:

  • ಸಂತೂರ್ ಶಿಷ್ಯವೇತನಕ್ಕೆ ಆಂಧ್ರ ಪ್ರದೇಶ, ಕರ್ನಾಟಕ, ತೆಲಂಗಾಣ ಮತ್ತು ಛತ್ತೀಸ್‌ಗಢದ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದು.
  • ಅರ್ಜಿದಾರರು ಸ್ಥಳೀಯ ಸರಕಾರಿ ಶಾಲೆಯಲ್ಲಿ 10th ಪೂರ್ಣಗೊಳಿಸಿರಬೇಕು.
  • 2023-24 ನೇ ಶೈಕ್ಷಣಿಕ ವರ್ಷದಲ್ಲಿ 12 ನೇ ತರಗತಿಯಲ್ಲಿ ಪಾಸಾಗಿರಬೇಕು.
  • 2024-25 ರಿಂದ ಪ್ರಾರಂಭವಾಗುವ ಪೂರ್ಣ ಅವಧಿಯ ಪದವಿ ಕೊರ್ಸ್ ಗಳಲ್ಲಿ ದಾಖಲಾಗಿರಬೇಕು.

ಪ್ರಯೋಜನಗಳು:
ಸಂತೂರ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿದ ಯುವತಿಯರಿಗೆ ವಾರ್ಷಿಕ 24,000 ರೂ. ಸ್ಕಾಲರ್ಶಿಪ್ ದೊರೆಯಲಿದೆ. ಅರ್ಹ ಹಾಗೂ ಆಸಕ್ತ ವಿದ್ಯಾರ್ಥಿನಿಯರು ಈ ವಿದ್ಯಾರ್ಥಿವೇತನದ ಲಾಭ ಪಡೆದುಕೊಳ್ಳಬಹುದು.

Santoor Scholarship Programme ಅಗತ್ಯ ದಾಖಲೆಗಳು:

  • 10th ಅಂಕಪಟ್ಟಿ
  • 12th ಅಂಕಪಟ್ಟಿ
  • ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಪೋಟೋ
  • ಪದವಿ ಕಾಲೇಜು ಗುರುತಿನ ಚೀಟಿ
  • ಗುರುತಿನ ಪುರಾವೆ (ಆಧಾರ್ ಕಾರ್ಡ್, ರೇಷನ್ ಕಾರ್ಡ್ ಇತ್ಯಾದಿ)
  • ಪಾಸ್‌ ಬುಕ್‌ ಫೋಟೋ ಕಾಪಿ (ಗ್ರಾಮೀಣ ಬ್ಯಾಂಕ್ ಹೊರತುಪಡಿಸಿ)

ಪ್ರಮುಖ ದಿನಾಂಕಗಳು:
ಸಂತೂರ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-10-2024

ಪ್ರಮುಖ ಲಿಂಕ್’ಗಳು:
Apply Online ಲಿಂಕ್:‌ Apply ಮಾಡಿ

SSP Scholarship 2024 For OBC:

SSP ಮೆಟ್ರಿಕ್ ನಂತರ ಶುಲ್ಕ ಮರುಪಾವತಿ ಯೋಜನೆ

ಮಹಿಳೆಯರಿಗೆ ಗುಡ್‌ ನ್ಯೂಸ್:‌ ಸರ್ಕಾರದಿಂದ 3 ಲಕ್ಷ ರೂ. ಸಹಾಯಧನ

Leave a Comment