ನಮಸ್ಕಾರ ಎಲ್ಲರಿಗೂ, ನೀವು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದೀರಾ..? ಕರ್ನಾಟಕ ಸರ್ಕಾರದಿಂದ ಇಲ್ಲಿದೆ ನಿಮಗೆ ಸಿಹಿ ಸುದ್ದಿ. ಕಾರ್ಮಿಕ ಇಲಾಖೆ ವತಿಯಿಂದ ಹಲವು ಯೋಜನೆಗಳನ್ನು ಕಾರ್ಮಿಕರಿಗಾಗಿ ಜಾರಿಗೆ ತರಲಾಗುತ್ತದೆ. ಆ ಯೋಜನೆಗಳ ಸೌಲಭ್ಯ ಪಡೆಯಲು ಕಾರ್ಮಿಕರು ನೋಂದಣಿ (Karnataka Labour Card) ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ.
ಕರ್ನಾಟಕ ಸರ್ಕಾರ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಮೂಲಕ ಅನೇಕ ಕಾರ್ಮಿಕ ಕಲ್ಯಾಣ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುತ್ತದೆ. ಅದಕ್ಕಾಗಿ ಕಡ್ಡಾಯವಾಗಿ ಕಾರ್ಮಿಕರು ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ.
Karnataka Labour Card Benefits:
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೋಂದಾಯಿತ ಅರ್ಹ ಫಲಾನುಭವಿಗಳಿಗೆ ಈ ಕೇಳ ಕಂಡ ಯೋಜನೆಗಳಿವೆ.
- ಅಪಘಾತ ಪರಿಹಾರ
- ವೈದ್ಯಕೀಯ ಸಹಾಯಧನ
- ಮದುವೆ ಸಹಾಯಧನ
- ಶೈಕ್ಷಣಿಕ ಸಹಾಯಧನ
- ಪ್ರಮುಖ ವೃದ್ಯಕೀಯ ವೆಚ್ಚ ಸಹಾಯಧನ
- ತಾಯಿ ಮಗು ಸಹಾಯಹಸ್ತಾ
- ದುರ್ಬಲತೆ ಪಿಂಚಣಿ ಮುಂದುವರಿಕೆ
- ಪಿಂಚಣಿ ಮುಂದುವರಿಕೆ
- ಹೆರಿಗ ಸೌಲಭ್ಯ
- ದುರ್ಬಲತೆ ಪಿಂಚಣಿ ಸಾಲಭ್ಯ
- ಪಿಂಚಣಿ ಸೌಲಭ್ಯ
- ಶ್ರಮಸಾಮರ್ಥ್ಯ ಟೂಲ್ ಕಿಟ್
- ಉಚತ ಸಾರಿಗೆ ಬಸ್ ಪಾಸ್ ಸೌಲಭ್ಯ
- ಅಂತ್ಯಕ್ರಿಯೆ ವೆಚ್ಚ
Karnataka Labour Card ಅರ್ಹತೆ: ಅರ್ಜಿ ಸಲ್ಲಿಸಲು ಬಯಸುವ ಫಲಾನುಭವಿಗಳು ನೋಂದಣಿ ಪೂರ್ವದಲ್ಲಿ 12 ತಿಂಗಳಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳಲ್ಲಿ ಕನಿಷ್ಠ 90 ದಿನಗಳು ಕೆಲಸ ಮಾಡಿರಬೇಕು.
ಬೇಕಾಗುವ ದಾಖಲೆಗಳು:
- 90 ದಿನಗಳ ಉದ್ಯೋಗ ದೃಢೀಕರಣ ಪತ್ರ,
- ಅರ್ಜಿದಾರರ ಬ್ಯಾಂಕ್ ಪಾಸ್ ಬುಕ್ ಪ್ರತಿ,
- ಅರ್ಜಿದಾರರ ಆಧಾರ್ ಕಾರ್ಡ್ʼಗೆ ಲಿಂಕ್ ಇರುವ ದೂರವಾಣಿ ಸಂಖ್ಯೆ
- ಅರ್ಜಿದಾರ ಹಾಗೂ ಅವಲಂಬಿತರ ಆಧಾರ್ ಕಾರ್ಡ್ ಪ್ರತಿ,
ವಯೋಮಿತಿ: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಮಂಡಳಿಯಲ್ಲಿ ನೋಂದಣಿಗಾಗಿ ವಯೋಮಿತಿಯು 18 ರಿಂದ 60 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ.
ಇನ್ನುಳಿದ ಭಾಗದ ಜನರು ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಅಧಿಕಾರಿಗಳು & ಹಿರಿಯ ಕಾರ್ಮಿಕ ನಿರೀಕ್ಷಕರು, ಕಾರ್ಮಿಕ ನಿರೀಕ್ಷಕರನ್ನು ಸಂಪರ್ಕಿಸಬಹುದು. ಸಹಾಯವಾಣಿ ಸಂಖ್ಯೆ 155214 ಕರೆ ಮಾಡಿ ಮಾಹಿತಿ ಪಡೆಯಬಹುದು.
ನೋಂದಣಿ ಮಾಡುವ ಕಛೇರಿಗಳು: ಹಿರಿಯ ಕಾರ್ಮಿಕ ನಿರೀಕ್ಷಕರು / ಕಾರ್ಮಿಕ ನಿರೀಕ್ಷಕರ ಕಛೇರಿ
ಸೂಚನೆ: ಕಟ್ಟಡ ಕಾರ್ಮಿಕರಲ್ಲದವರು ನಕಲಿ ದಾಖಲಾತಿ ಸೃಷ್ಟಿಸಿ ಮಂಡಳಿಯು ನೀಡುವ ಕಾರ್ಮಿಕರ ಗುರುತಿನ ಚೀಟಿಯನ್ನು ಪಡೆದು ಸೌಲಭ್ಯಗಳನ್ನು ಪಡೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು ಎಂದು ಇಲಾಖೆಯ ಅಧಿಕಾರಿಗಳು ಎಚ್ಚರಿಕೆ ನೀಡಿದಾರೆ.
ಪ್ರಮುಖ ಲಿಂಕ್ಗಳು:
ಇಲಾಖೆಯ ವೆಬ್ಸೈಟ್: karbwwb.karnataka.gov.in
ಈ ಕೇಳಗಿನ ಮಾಹಿತಿ ಓದಿ:
ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರದಿಂದ ವಿದ್ಯಾರ್ಥಿವೇತನ, ಬೇಗ ಅರ್ಜಿ ಸಲ್ಲಿಸಿ
ರೈತರಿಗೆ ಹೈನುಗಾರಿಕೆ, ಕುರಿ ಕೋಳಿ ಸಾಕಾಣಿಕೆಗೆ ಕಡಿಮೆ ಬಡ್ಡಿದರ ಸಾಲ ಸೌಲಭ್ಯ
Help me
Laber card
Labour card help me