ಎಲ್ಲರಿಗೂ ನಮಸ್ಕಾರ, ಪಿಎಂ ಸೂರ್ಯ ಘರ್ ಯೋಜನೆಯ (PM Surya Ghar Yojana) ಬಗ್ಗೆ ನಿಮಗೆ ತಿಳಿದಿದೆಯೇ..? ಈ ಯೋಜನೆಯಡಿಯಲ್ಲಿ ಮನೆಗಳ ಛಾವಣಿಯ ಮೇಲೆ ಸೌರ ಫಲಕಗಳನ್ನು ಸ್ಥಾಪಿಸಲು ಸರ್ಕಾರವು ಆರ್ಥಿಕ ನೆರವು ನೀಡುತ್ತದೆ. ಎಷ್ಟು ಸಬ್ಸಿಡಿ ದೊರೆಯಲಿದೆ, ಇದರ ಪ್ರಯೋಜನಗಳೇನು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ ಓದಿರಿ.
ನಮ್ಮ ಪರಿಸರದಲ್ಲಿ ಎರಡು ರೀತಿಯ ಸಂಪನ್ಮೂಲಗಳಿವೆ. ಒಂದು ನವೀಕರಿಸಬಹುದಾದ ಸಂಪನ್ಮೂಲಗಳು ಹಾಗೂ ಇನ್ನೊಂದು ನವೀಕರಿಸಲಾಗದ ಸಂಪನ್ಮೂಲಗಳು. ನವೀಕರಿಸಲಾರದ ಸಂಪನ್ಮೂಲವು ನಾವು ಬಳಸಿದಂತೆ ಕಾಲಿಗುತ್ತಾ ಹೊಗುತ್ತದೆ. ಆದರೆ ನಾವು ಎಷ್ಟೇ ಬಳಕೆ ಮಾಡಿದರು ಕಡಿಮೆಯಾಗದೆ ಇರುವುದೆ ಇದುವೇ ನವೀಕರಿಸಬಹುದಾದ ಸಂಪನ್ಮೂಲ.
ಸೂರ್ಯನು ನವೀಕರಿಸಬಹುದಾದ ಸಂಪನ್ಮೂಲ, ಸೂರ್ಯನಿಂದ ಉತ್ಪತ್ತಿಯಾಗುವ ಸೌರಶಕ್ತಿ ಬಳಸಿ ವಿದ್ಯುತ್’ಅನ್ನು ಉತ್ಪಾದಿಸುವ ಮೂಲಕ ನೈಸರ್ಗಿಕ ಸಂಪನ್ಮೂಲಗಳ ಬಹಳ ಮಾಡಿಕೊಳ್ಳಬೇಕು. ಸೋಲಾರ್ ಪ್ಯಾನಲ್’ಗಳನ್ನು ಅಳವಡಿಕೆ ಮಾಡಲು ಹೆಚ್ಚು ವೆಚ್ಚ ತಗಲುತ್ತದೆ. ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆ ಅಡಿಯಲ್ಲಿ ಸಬ್ಸಿಡಿ ದೊರೆಯಲಿದೆ. ಈ ಯೋಜನೆ ಲಾಭವನ್ನು ಫಲಾನುಭವಿಗಳು ಪಡೆದುಕೊಳ್ಳಬಹುದು.
PM Surya Ghar Yojana ವಿವರ:
ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ (PM ಸೂರ್ಯ ಗೃಹ ಉಚಿತ ವಿದ್ಯುತ್) ಯೋಜನೆಯಡಿಯಲ್ಲಿ ಮನೆಗಳ ಛಾವಣಿಯ ಮೇಲೆ ಸೋಲಾರ್ ಪ್ಯಾನಲ್’ಗಳನ್ನು ಅಳವಡಿಸಿಕೊಳ್ಳಲು ಸರ್ಕಾರವು ಆರ್ಥಿಕ ಸಹಾಯವನ್ನು ನೀಡುತ್ತದೆ. ಸೌರ ಫಲಕಗಳನ್ನು ಅಳವಡಿಕೆ ಮಾಡಲು ಖರ್ಚಾಗುವ ವೆಚ್ಚದ 40% ವರೆಗೆ ಸಬ್ಸಿಡಿಯನ್ನು ಸರ್ಕಾರವು ಫಲಾನುಭವಿಗಳಿಗೆ ನೀಡುತ್ತದೆ.
ಭಾರತದಲ್ಲಿನ ಮನೆಗಳಿಗೆ ಉಚಿತ ವಿದ್ಯುತ್ ಒದಗಿಸುವ ಗುರಿಯನ್ನು ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಯು ಹೊಂದಿದ್ದೆ, 15-02-2024 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಈ ಯೋಜನೆಗೆ ಚಾಲನೆ ನೀಡಿದರು.
ಈ ಯೋಜನೆಯು ಭಾರತದಾದ್ಯಂತ ಒಂದು ಕೋಟಿ ಮನೆಗಳಿಗೆ ಉಚಿತ ವಿದ್ಯುತ್ ಒದಗಿಸುವ ಗುರಿಯನ್ನು ಹೊಂದಿದೆ. ಸೂರ್ಯ ಘರ್ ಯೋಜನೆಯು ಕೇವಲ ಕುಟುಂಬಗಳಿಗೆ ಉಪಯೋಗವಾಗುವುದಷ್ಟೇ ಅಲ್ಲದೆ, ಸರಕಾರಕ್ಕೂ ವಿದ್ಯುತ್ ವೆಚ್ಚದಲ್ಲಿ ವರ್ಷಕ್ಕೆ 75,000 ಕೋಟಿ ರೂಪಾಯಿಗಳ ಉಳಿತಾಯವಾಗಲಿದೆ.
PM ಸೂರ್ಯ ಘರ್ ಯೋಜನೆಯು ದೇಶದ ಬಡ ಹಾಗೂ ಮಧ್ಯಮ ವರ್ಗದವರಿಗೆ ವಿದ್ಯುತ್ ಬಿಲ್ ಕಡಿಮೆಗೊಳಿಸುವ, ಅಂದರೆ ಉಚಿತ ವಿದ್ಯುತ್ ಒದಗಿಸುವ ಯೋಜನೆ ಇದಾಗಿದೆ. ಇದರಿಂದ ಮನೆಗಳಿಗೆ ಪ್ರತಿ ತಿಂಗಳು 300 ಯೂನಿಟ್ ವಿದ್ಯುತ್ ಉಚಿತವಾಗಿ ದೊರೆಯಲಿದೆ.
ಸಬ್ಸಿಡಿ ಎಷ್ಟು ದೊರೆಯಲಿದೆ:
- 150 ಯೂನಿಟ್ವರೆಗೂ ವಿದ್ಯುತ್ ಬಳಸುವ ಮನೆಗಳಿಗೆ 1 ರಿಂದ 2 ಕಿಲೋ ವ್ಯಾಟ್ ಘಟಕ ಅಗತ್ಯ ಇದೆ. ಅದಕ್ಕಾಗಿ 30,000 ರೂ ನಿಂದ 60,000 ರೂ. ವರೆಗೂ ಸಬ್ಸಿಡಿ ಸಿಗಲಿದೆ.
- 150 ರಿಂದ 300 ಯೂನಿಟ್ವರೆಗೂ ವಿದ್ಯುತ್ ಬಳಸುವ ಮನೆಗಳಿಗೆ 2 ರಿಂದ 3 ಕಿಲೋ ವ್ಯಾಟ್ ಘಟಕ ಅಗತ್ಯ ಇದೆ. ಅದಕ್ಕಾಗಿ 60,000 ರೂ.ನಿಂದ 78,000 ರೂ.ವರೆಗೂ ಸಬ್ಸಿಡಿ ದೊರೆಯಲಿದೆ.
- 300 ಯೂನಿಟ್ಗೂ ಹೆಚ್ಚು ವಿದ್ಯುತ್ ಬಳಸುವ ಮನೆಗಳಿಗೆ 3 ಕ್ಕಿಂತ ಹೆಚ್ಚು ಕಿಲೋ ವ್ಯಾಟ್ ಘಟಕ ಅಗತ್ಯ ಇದೆ. ಅದಕ್ಕಾಗಿ 78,000 ರೂ. ಸಬ್ಸಿಡಿ ಸಿಗಲಿದೆ.
PM Surya Ghar Yojana ಪ್ರಯೋಜನಗಳು:
- ಮನೆಗಳಿಗೆ ಉಚಿತ ವಿದ್ಯುತ್ ಪೂರೈಕೆ
- ಸರ್ಕಾರಕ್ಕೆ ಒಟ್ಟು ವಿದ್ಯುತ್ ವೆಚ್ಚದಲ್ಲಿ ಉಳಿತಾಯ
- ನವೀಕರಿಸಬಹುದಾದ ಸಂಪನ್ಮೂಲಗಳ ಸದ್ಬಳಕೆ
- ಕಡಿಮೆಯಾಗುವ ಇಂಗಾಲದ ಹೊರಸೂಸುವಿಕೆ.
ಪಿಎಂ ಸೂರ್ಯ ಘರ್ ಯೋಜನೆಯ ಅಗತ್ಯ ದಾಖಲೆಗಳು:
- ಗುರುತಿನ ಪುರಾವೆ
- ವಿದ್ಯುತ್ ಬಿಲ್
- ವಿಳಾಸದ ಪುರಾವೆ
- ಛಾವಣಿಯ ಮಾಲೀಕತ್ವದ ಪ್ರಮಾಣಪತ್ರ
PM Surya Ghar Yojana ಮಾನದಂಡಗಳು:
- ಭಾರತೀಯ ಪ್ರಜೆಯಾಗಿರಬೇಕು
- ಸೌರ ಫಲಕಗಳನ್ನು ಅಳವಡಿಸಲು ಸೂಕ್ತವಾದ ಮೇಲ್ಛಾವಣಿ ಇರುವ ಮನೆಯನ್ನು ಹೊಂದಿರಬೇಕು.
- ಮನೆಗೆ ಮಾನ್ಯವಾದ ವಿದ್ಯುತ್ ಸಂಪರ್ಕ ಹೊಂದಿರಬೇಕು
- ಬೇರಾವುದೇ ಸೌರ ಯೋಜನೆಯಲ್ಲಿ ಈಗಾಗಲೇ ಇತರ ಸಬ್ಸಿಡಿ ಪಡೆದಿರಬಾರದು.
ಪ್ರಮುಖ ಲಿಂಕ್ ಗಳು:
ಅರ್ಜಿ ಸಲ್ಲಿಸುವ ಲಿಂಕ್: Apply ಮಾಡಿ
ಅಧಿಕೃತ ವೆಬ್ಸೈಟ್: https://pmsuryaghar.gov.in
ಇತರೆ ಮಾಹಿತಿಗಳನ್ನು ಓದಿ: