ಉಚಿತ ಹೊಲಿಗೆ ಯಂತ್ರ ಯೋಜನೆ: ಅರ್ಜಿ ಸಲ್ಲಿಸಿ | Free Sewing Machine Scheme Online Apply

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ನೀವು ಉಚಿತ ಹೊಲಿಗೆ ಯಂತ್ರ ಪಡೆಯಬೇಕೆ? ಹಾಗಿದ್ದರೆ ಇಲ್ಲಿದೆ ನಿಮಗೆ ಗುಡ್ ನ್ಯೂಸ್. ಕೇಂದ್ರ ಸರ್ಕಾರವು ಉಚಿತ ಹೊಲಿಗೆ ಯಂತ್ರ (Free Sewing Machine) ವನ್ನು ನೀಡುತ್ತೀದ್ದು, ಅದರ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೆವೆ.

ಯಾರು ಅರ್ಜಿ ಸಲ್ಲಿಸಬಹುದು, ಯಾವ ದಾಖಲೆಗಳು ಬೇಕಾಗುತ್ತವೆ, ಹಾಗೂ ಅರ್ಜಿ ಸಲ್ಲಿಸುವ ಮಾಹಿತಿಯನ್ನು ನೀಡಲಿದ್ದೆವೆ. ಕೇಂದ್ರ ಸರ್ಕಾರವು ಸ್ವಯಂ ಉದ್ಯೋಗಕ್ಕೆ ಉತ್ತೇಜನ ನೀಡಲು ಉಚಿತ ಹೊಲಿಗೆ ಯಂತ್ರ ಮತ್ತು ಇತರೆ ಯಂತ್ರಗಳನ್ನು ನೀಡುತ್ತಿದೆ. ಈ ಲೇಖನವನ್ನೊಮ್ಮೆ ಓದಿ. ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಿ.

Free Sewing Machine ಯೋಜನೆ ಮಾಹಿತಿ:

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ವಿಶ್ವಕರ್ಮ (PM Vishwakarma Scheme) ಯೋಜನೆಯ ಅಡಿಯಲ್ಲಿ ಸಂಪ್ರದಾಯಿಕ ಕಲೆಗಳಿಗೆ ಉತ್ತೇಜನ ನೀಡಲು ಅರ್ಹ ಕುಶಲಕರ್ಮಿಗಳಿಗೆ ವಿಶೇಷ ತರಬೇತಿ ನೀಡಲಾಗಿತ್ತದೆ.

ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿರುವ 18 ವರ್ಗದ ಕುಶಲಕರ್ಮಿಗಳಿಗೆ ಈ ಯೋಜನೆಯಡಿ ಕೌಶಲ ಅಭಿವೃದ್ಧಿ ತರಬೇತಿ, ತಾಂತ್ರಿಕ ಜ್ಞಾನ, ಹೊಸ ಉಪಕರಣ ಹಾಗೂ ಬ್ಯಾಂಕ್‌ ಖಾತರಿ ರಹಿತ ಸಾಲ ಸೌಲಭ್ಯ ದೊರೆಯಲಿದೆ. ಅದರಲ್ಲಿ ಉಚಿತ ಹೊಲಿಗೆ ಯಂತ್ರ ಯೋಜನೆಯು ಒಂದಾಗಿದೆ.

ಅರ್ಹ ಫಲಾನುಭವಿಗಳಿಗೆ ಟೂಲ್‌ ಕಿಟ್‌ (Free Sewing Machine) ಖರೀದಿ ಮಾಡಲು ಈ ಯೋಜನೆಯಡಿ 15,000 ರೂ ವರೆಗೆ ಮೌಲ್ಯದ ಇ–ವೋಚರ್ಸ್‌ ಅಥವಾ ಇ–ರುಪಿ ನೀಡುತ್ತಾರೆ. ಸರ್ಕಾರದ ಪರವಾಗಿ ಈ ಪ್ರೋತ್ಸಾಹಧನದ ವೋಚರ್ಸ್‌ಗಳನ್ನು ಬ್ಯಾಂಕ್‌ ಮೂಲಕ ವಿತರಣೆ ಮಾಡಲಾಗುತ್ತದೆ

PM Vishwakarma ಯೋಜನೆಯಲ್ಲಿ ನೋಂದಣಿ ಮಾಡಿಕೊಂಡಿರುವ ಕುಶಲಕರ್ಮಿಗಳಿಗೆ ಜಿಲ್ಲಾ ಮಟ್ಟದ ಸಮಿತಿಯಿಂದ ಕುಶಲಕರ್ಮಿ ಎಂದು ದೃಢೀಕರಿಸಿದ ನಂತರ 5 ರಿಂದ 7 ದಿನಗಳ ತರಬೇತಿ ನೀಡಲಾಗುತ್ತದೆ.

ಅರ್ಹತೆಗಳು:

  • ಅರ್ಜಿ ಸಲ್ಲಿಸುವ ದಿನಾಂಕದಂದು ಕನಿಷ್ಠ 18 ವರ್ಷ ಪೂರ್ಣಗೊಂಡಿರಬೇಕು.
  • ಅರ್ಜಿದಾರ ತನ್ನ ಸಾಂಪ್ರದಾಯಿಕ ಅಸಂಘಟಿತ ಸ್ವಯಂ ಉದ್ಯೋಗ (Tailor-Darzi) ದಲ್ಲಿ ತೊಡಗಿಕೊಂಡಿರಬೇಕು.
  • ಒಂದು ಕುಟುಂಬದ ಒಬ್ಬರಿಗೆ ಮಾತ್ರ ಈ ಯೋಜನೆಯ ಲಾಭ ಸಿಗಲಿದೆ.
  • ಅರ್ಜಿ ಸಲ್ಲಿಸುವ ಸಮಯದಲ್ಲಿ ಅರ್ಜಿದಾರ ಕಳೆದ 5 ವರ್ಷಗಳಲ್ಲಿ ಕೇಂದ್ರ ಸರ್ಕಾರದಿಂದ ಅಥವಾ ರಾಜ್ಯ ಸರ್ಕಾರದಿಂದ ಸ್ವಯಂ ಉದ್ಯೋಗ ಯೋಜನೆಯಡಿಯಲ್ಲಿ ಸಾಲ ಸೌಲಭ್ಯ ಪಡೆದಿರಬಾರದು. (e.g. PMEGP, PM SVANidhi, Mudra)
  • ಈ ಯೋಜನೆಯು ಸರ್ಕಾರಿ ನೌರಕರಿಗೆ ಮತ್ತು ಅವರ ಕುಟುಂಬದವರಿಗೆ ಸಿಗುವುದಿಲ್ಲ.

ಬೇಕಾಗುವ ದಾಖಲೆಗಳು:

  • ಆಧಾರ ಕಾರ್ಡ್‌
  • ರೇಷನ್‌ ಕಾರ್ಡ್‌ ಕಡ್ಡಾಯ
  • ಮೊಬೈಲ್‌ ಸಂಖ್ಯೆ
  • ಬ್ಯಾಂಕ್‌ ಖಾತೆ ವಿವರ

ಅರ್ಜಿ ಸಲ್ಲಿಸುವ ವಿಧಾನ:

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿಯಲ್ಲಿ ಉಚಿತ ಹೊಲಿಗೆ ಯಂತ್ರ ಪಡೆಯಬಸುವವರು ಕೇಂದ್ರ ಸರ್ಕಾರದ PM Vishwakarma ಅಧಿಕೃತ ವೆಬ್‌ಸೈಟ್‌ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಗ್ರಾಮ ಪಂಚಾಯತಿ, ನಿಮ್ಮ ಹತ್ತಿರದ CSC ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿಯು ಅರ್ಜಿ ಸಲ್ಲಿಸಬಹುದು.

Free Sewing Machine ಪ್ರಮುಖ ಲಿಂಕ್‌ಗಳು:
ಅರ್ಜಿ ಸಲ್ಲಿಕೆ ಲಿಂಕ್:‌ Apply ಮಾಡಿ
ಅಧಿಕೃತ ವೆಬ್‌ಸೈಟ್:‌ pmvishwakarma.gov.in

ಇತರೆ ಮಾಹಿತಿಗಳನ್ನು ಓದಿ

ರೈತರಿಗೆ ಹೈನುಗಾರಿಕೆ, ಕುರಿ ಕೋಳಿ ಸಾಕಾಣಿಕೆಗೆ ಕಡಿಮೆ ಬಡ್ಡಿದರ ಸಾಲ ಸೌಲಭ್ಯ

ನಿಮ್ಮ ಬ್ಯಾಂಕ್ ಖಾತೆಗೆ ಆಧಾರ ಸಂಖ್ಯೆ ಲಿಂಕ್ ಆಗಿದ್ಯಾ..?

ಕಾರ್ಮಿಕರಿಗೆ ಸಿಹಿ ಸುದ್ದಿ: ಲೇಬರ್‌ ಕಾರ್ಡ್‌ ನೋಂದಣಿ ಶುರು

Leave a Comment