ರೈತರಿಗೆ ಹೈನುಗಾರಿಕೆ, ಕುರಿ ಕೋಳಿ ಸಾಕಾಣಿಕೆಗೆ ಕಡಿಮೆ ಬಡ್ಡಿದರ ಸಾಲ ಸೌಲಭ್ಯ | Kisan Credit Card Loan 2024

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ಕಿಸಾನ್ ಕ್ರೆಡಿಟ್ ಕಾರ್ಡ್ ಬಗ್ಗೆ ನಿಮಗೆ ತಿಳಿದಿದೆಯೇ? ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿದ ರೈತರಿಗೆ ಸರ್ಕಾರವು Kisan Credit Card Loan 2024 ಯೋಜನೆಯ ಮಾಹಿತಿಯನ್ನು ಲೇಖನದಲ್ಲಿ ನೀಡಿದ್ದೇವೆ. ಅರ್ಹ ರೈತರು ಯೋಜನೆಯ ಸೌಲಭ್ಯ ಪಡೆದುಕೊಳ್ಳಬಹುದು.

ರೈತರಿಗೆ ಪಶುಸಂಗೋಪನೆ ಚಟುವಟಿಕೆಗಳಾದ ಕುರಿ-ಮೇಕೆ ಸಾಕಾಣಿಕೆ, ಹೈನುಗಾರಿಕೆ, ಕೋಳಿ, ಹಂದಿ, ಮೊಲ ಸಾಕಾಣಿಕೆ ಕಾರ್ಯಗಳಿಗೆ ಉತ್ತೇಜನ ನೀಡಲು ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸಲಾಗುತ್ತದೆ. ರೈತರು ಈ ರೀತಿಯ ಯೋಜನೆಗಳ ಸೌಲಭ್ಯ ಪಡೆದು ಕೃಷಿಯೊಂದಿಗೆ ಪಶುಪಾಲನೆ, ಕುರಿ-ಮೇಕೆ ಸಾಕಾಣಿಕೆ ಮಾಡಿ ಲಾಭ ಮಾಡಿಕೊಳ್ಳಬಹುದು.

Kisan Credit Card Loan 2024

ಕಿಸಾನ್‌ ಕ್ರೆಡಿಟ್‌ ಕಾರ್ಡ್ ಯೋಜನೆಯ ಅಡಿಯಲ್ಲಿ ಅರ್ಹ ರೈತರಿಗೆ ಪಶುಸಂಗೋಪನೆ ಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡಲು ಸಾಲ ಅಭಿಯಾನ ಕೈಗೊಳ್ಳಲಾಗಿದೆ.

ಕೇಂದ್ರ ಸರ್ಕಾರದ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಯೋಜನೆಯನ್ವಯ (Kisan Credit Card) ಈ ಕೆಳಗಿನ ಪಶುಸಂಗೋಪನಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರಿಗೆ ನಿರ್ವಹಣಾ ವೆಚ್ಚ ಭರಿಸಲು ಭಾರತ ಸರ್ಕಾರದ, ಹಣಕಾಸು ಸೇವೆಗಳ ಇಲಾಖೆಯು ರಾಷ್ಟ್ರೀಕೃತ ಬ್ಯಾಂಕ್ / ಸಹಕಾರ ಸಂಸ್ಥೆಗಳ ಮೂಲಕ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ನೀಡಲಾಗುತ್ತಿದೆ.

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಮಾಹಿತಿ:

ಈ ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card Loan) ಯೋಜನೆಯಡಿ ಬಡ್ಡಿ ರಿಯಾಯಿತಿ ಸೌಲಭ್ಯವು ರೂ.3 ಲಕ್ಷಗಳವರೆಗೆ ದೊರೆಯಬಹುದಾಗಿದ್ದು, ಪ್ರತಿ ರೈತರಿಗೆ ರೂ.10 ಲಕ್ಷ ಸಾಲ ಸೌಲಭ್ಯವನ್ನು ಯಾವುದೇ ಭದ್ರತೆಯಿಲ್ಲದೆ ಪಡೆಯುವ ಅವಕಾಶವಿರುತ್ತದೆ.

ಕಿಸಾನ್ ಕ್ರೆಡಿಟ್ ಕಾರ್ಡ್‌ನಿಂದ ಪಡೆಯುವ ಸಾಲಕ್ಕೆ ಶೇ.2 ರಷ್ಟು ಬಡ್ಡಿ ಸಹಾಯಧನ ನೀಡುತ್ತಿದ್ದು, ಈ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿದಲ್ಲಿ ಹೆಚ್ಚುವರಿಯಾಗಿ ವಾರ್ಷಿಕ ಶೇ.3 ರಷ್ಟು ಬಡ್ಡಿ ಸಹಾಯಧನದ ಸೌಲಭ್ಯವನ್ನು ಸಹಾ ಪಡೆಯಬಹುದಾಗಿದೆ.

ರೈತರು ಅವರ ಕಾರ್ಯವ್ಯಾಪ್ತಿಯ ಬ್ಯಾಂಕುಗಳಿಂದ ಪಡೆಯುವ ಸಾಲದ ಬಡ್ಡಿ ದರಕ್ಕೆ ಒಟ್ಟಾರೆ ಶೇ.5 ರಷ್ಟು ಬಡ್ಡಿ ರಿಯಾಯಿತಿಯನ್ನು ಭಾರತ ಸರ್ಕಾರದಿಂದ ಪಡೆಯಬಹುದಾಗಿರುತ್ತದೆ.

Kisan Credit Card Loan (KCC Loan) ಯೋಜನೆ ಅಡಿಯಲ್ಲಿ ಎಷ್ಟು ಸಾಲ ಸಿಗುತ್ತದೆ?

1) ಹೈನುಗಾರಿಕೆ:

  • ಮಿಶ್ರತಳಿ ದನಗಳ ನಿರ್ವಹಣೆಗೆ (1+1) ಪ್ರತಿ ಹಸುವಿಗೆ ಗರಿಷ್ಠ 18,000 ರೂ. ರಂತೆ ಒಟ್ಟು ಎರಡು ಹಸುಗಳಿಗೆ 36,000 ರೂಪಾಯಿ ಸಾಲ ಸೌಲಭ್ಯ ನೀಡುತ್ತಾರೆ.
  • ಸುಧಾರಿತ ಎಮ್ಮೆಗಳ ನಿರ್ವಹಣೆಗೆ (1+1) ಪ್ರತಿ ಎಮ್ಮೆ ಗರಿಷ್ಠ 21,000 ರೂ. ರಂತೆ ಒಟ್ಟು ಎರಡು ಎಮ್ಮೆಗಳಿಗೆ 42,000 ರೂಪಾಯಿ ಸಾಲ ಸೌಲಭ್ಯ ನೀಡುತ್ತಾರೆ.

2) ಕುರಿ ಸಾಕಾಣಿಕೆ:

  • 8 ತಿಂಗಳ ಸಾಕಾಣಿಕೆ ಅವಧಿಗೆ 10+1 ಕುರಿಗಳ ನಿರ್ವಹಣೆಗೆ ಕಟ್ಟಿ ಮೇಯಿಸುವ ಕುರಿಗಳಿಗೆ 29,950 ರೂ. ರಂತೆ ಹಾಗೂ ಬಯಲಿನಲ್ಲಿ ಮೇಯಿಸುವ ಕುರಿಗಳಿಗೆ 14,700 ರೂಪಾಯಿ ಸಾಲ ಸೌಲಭ್ಯ ನೀಡುತ್ತಾರೆ.
  • 8 ತಿಂಗಳ ಸಾಕಾಣಿಕೆ ಅವಧಿಗೆ 20+1 ಕುರಿಮರಿಗಳ ನಿರ್ವಹಣೆಗೆ ಕಟ್ಟಿ ಮೇಯಿಸುವ ಕುರಿಗಳಿಗೆ 57,200 ರೂ. ರಂತೆ ಹಾಗೂ ಬಯಲಿನಲ್ಲಿ ಮೇಯಿಸುವ ಕುರಿಗಳಿಗೆ ರೂ 28,200 ರೂಪಾಯಿ ಸಾಲ ಸೌಲಭ್ಯ ನೀಡುತ್ತಾರೆ.
  • 10 ಕುರಿ ಮರಿಗಳ ಕೊಬ್ಬಿಸುವಿಕೆಗೆ 13,120 ರೂ. ರಂತೆ ಹಾಗೂ 20 ಕುರಿ ಮರಿಗಳ ಕೊಬ್ಬಿಸುವಿಕೆಗೆ 26,200 ರೂಪಾಯಿ ಸಾಲ ಸೌಲಭ್ಯ ನೀಡುತ್ತಾರೆ.

3) ಮೇಕೆ ಸಾಕಾಣಿಕೆ:

  • 8 ತಿಂಗಳ ಸಾಕಾಣಿಕೆ ಅವಧಿಗೆ 10+1 ಮೇಕೆಗಳ ನಿರ್ವಹಣೆಗೆ ಕಟ್ಟಿ ಮೇಯಿಸುವ ಮೇಕೆಗಳಿಗೆ 29,950 ರೂ. ರಂತೆ ಹಾಗೂ ಬಯಲಿನಲ್ಲಿ ಮೇಯಿಸುವ ಮೇಕೆಗಳಿಗೆ 14,700 ರೂಪಾಯಿ ಸಾಲ ಸೌಲಭ್ಯ ನೀಡುತ್ತಾರೆ.
  • 8 ತಿಂಗಳ ಸಾಕಾಣಿಕೆ ಅವಧಿಗೆ 20+1 ಮೇಕೆಗಳ ನಿರ್ವಹಣೆಗೆ ಕಟ್ಟಿ ಮೇಯಿಸುವ ಮೇಕೆಗಳಿಗೆ 57,200 ರೂ. ರಂತೆ ಹಾಗೂ ಬಯಲಿನಲ್ಲಿ ಮೇಯಿಸುವ ಮೇಕೆಗಳಿಗೆ 28,200 ರೂಪಾಯಿ ಸಾಲ ಸೌಲಭ್ಯ ನೀಡುತ್ತಾರೆ.

4) ಹಂದಿ ನಿರ್ವಹಣೆ:

  • 8 ತಿಂಗಳ ಸಾಕಾಣಿಕೆ ಅವಧಿಗೆ 10 ಕೊಬ್ಬಿಸುವ ಹಂದಿಗಳ ಸಾಕಾಣಿಕೆ 60,000 ರೂ. ರಂತೆ ಸಾಲ ಸೌಲಭ್ಯ ನೀಡುತ್ತಾರೆ.

5) ಕೋಳಿ ಸಾಕಾಣಿಕೆ:

  • ಮಾಂಸದ ಕೋಳಿ ಸಾಕಾಣಿಕೆಗೆ ತಲಾ ಒಂದು ಕೋಳಿಗೆ 80 ರೂಪಾಯಿಯಂತೆ 1,000 ಕೋಳಿಗಳಿಗೆ ಗರಿಷ್ಠ 80,000 ರೂಪಾಯಿ ವರೆಗೆ ಸಾಲ ಸೌಲಭ್ಯ ನೀಡುತ್ತಾರೆ.
  • ಮೊಟ್ಟೆ ಕೋಳಿ ಸಾಕಾಣಿಕೆಗೆ ತಲಾ ಒಂದು ಕೋಳಿಗೆ 180 ರೂಪಾಯಿಯಂತೆ 1,000 ಕೋಳಿಗಳಿಗೆ ಗರಿಷ್ಠ 1,80,000 ರೂಪಾಯಿ ವರೆಗೆ Kisan Credit Card Loan ಯೋಜನೆಯ ಅಡಿಯಲ್ಲಿ ಸಾಲ ಸೌಲಭ್ಯ ನೀಡುತ್ತಾರೆ.

6) ಮೊಲ ಸಾಕಾಣಿಕೆ

  • 50+10 ಮೊಲ ಸಾಕಾಣಿಕೆಗೆ ಗರಿಷ್ಠ 50,000 ರೂಪಾಯಿ ವರೆಗೆ ಸಾಲ ಸೌಲಭ್ಯ ನೀಡುತ್ತಾರೆ.

ಬೇಕಾಗುವ ದಾಖಲಾತಿಗಳು:

  • ಭರ್ತಿ ಮಾಡಿದ ಅರ್ಜಿ ನಮೂನೆ
  • ಬ್ಯಾಂಕ್ ಖಾತೆ ವಿವರ
  • ಆರ್.ಟಿ.ಸಿ
  • ಆಧಾರ್ ಕಾರ್ಡ್
  • ಭಾವಚಿತ್ರ

ಸಹಾಯವಾಣಿ: ಹೆಚ್ಚಿನ ಮಾಹಿತಿಗೆ ಸಹಾಯವಾಣಿ 8277 100 200 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

ಇತರೆ ಮಾಹಿತಿಗಳನ್ನು ಓದಿ

ಬೆಳೆ ವಿಮೆ Status Check ಮಾಡಿ

ಕೃಷಿ ಭಾಗ್ಯ ಯೋಜನೆಯಡಿ ಸಬ್ಸಿಡಿಗಾಗಿ ಅರ್ಜಿ ಆಹ್ವಾನ

ಕಾರ್ಮಿಕರಿಗೆ ಸಿಹಿ ಸುದ್ದಿ: ಲೇಬರ್‌ ಕಾರ್ಡ್‌ ನೋಂದಣಿ

ರೇಷನ್ ಕಾರ್ಡ್-ಆಧಾರ ಲಿಂಕ್‌ ಮಾಡಿ

1 thought on “ರೈತರಿಗೆ ಹೈನುಗಾರಿಕೆ, ಕುರಿ ಕೋಳಿ ಸಾಕಾಣಿಕೆಗೆ ಕಡಿಮೆ ಬಡ್ಡಿದರ ಸಾಲ ಸೌಲಭ್ಯ | Kisan Credit Card Loan 2024”

Leave a Comment